ಕನ್ನಡಪ್ರಭ ವಾರ್ತೆ ಕೊರಟಗೆರೆ
ವಿರೋಧ ಪಕ್ಷದವರಾದ ಬಿಜೆಪಿ, ಜನತಾದಳದವರು ಹೇಳ್ತಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹೋಗಿದೆ ಅಂತ. ಯಾವುದೋ ಒಂದೊರಡು ಅಂಕಿ ಅಂಶಗಳ ಬಗ್ಗೆ ಮಾಹಿತಿ ಕೊಡ್ತಾರೆ ಅಷ್ಟೇ. ರಾಜ್ಯದಲ್ಲಿ ನಮ್ಮ ಪೊಲೀಸ್ ಇಲಾಖೆ ಬಲಿಷ್ಠವಾಗಿ ಕೆಲಸ ಮಾಡುತ್ತಿದೆ. ಇತರೆ ರಾಜ್ಯಕ್ಕೆ ಹೊಲಿಸಿದರೆ ನಮ್ಮ ರಾಜ್ಯ ಶಾಂತವಾಗಿದೆ ಎಂದು ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದರು.ಪೊಲೀಸ್ ಅಧಿಕಾರಿಗಳು ಮಳೆ, ಚಳಿ, ಎನ್ನದೇ ನಮ್ಮ ಸೇವೆ ಮಾಡಲು ಬರುತ್ತಾರೆ. ಅವರಿಗೆ ಉತ್ತಮವಾದ ಸೂರು ಕಟ್ಟಿಕೊಡಬೇಕು ಎನ್ನವ ಉದ್ದೇಶದಿಂದ ನಮ್ಮ ಸರ್ಕಾರ ಸುಮಾರು ೪೦ ಸಾವಿರ ಮನೆಗಳನ್ನು ಕಟ್ಟಿಕೊಟ್ಟಿದ್ದೇವೆ. ಈ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗಳ ಕುಟುಂಬದವರು ನೆಮ್ಮದಿಯಿಂದ ಜೀವನ ನಡೆಸಬೇಕು ಎನ್ನುವ ಉದ್ದೇಶದಿಂದ ಮನೆಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು. ಚುನಾವಣೆ ಸಂದರ್ಭದಲ್ಲಿ ನನ್ನ ಕ್ಷೇತ್ರದ ಜನತೆ ನಾವು ನಿಮಗೆ ಮತ ಹಾಕುತ್ತೇವೆ ನಮಗೆ ಶಾಶ್ವತ ನೀರಾವರಿ ಯೋಜನೆಯನ್ನ ಜಾರಿಗೆ ತರಬೇಕು ಎಂದು ಹೇಳಿದ್ದರು. ಅದಕ್ಕೆ ನಮ್ಮ ಸಿದ್ದರಾಮಯ್ಯ ಅವರ ಸರ್ಕಾರ ಸುಮಾರು ೨೪ ಟಿಎಂಸಿ ನೀರನ್ನು ನಮ್ಮ ಭಾಗಕ್ಕೆ ತರಲು ೨೪ ಸಾವಿರ ಕೋಟಿ ವೆಚ್ಚದಲ್ಲಿ ಏತ್ತಿನಹೊಳೆ ಯೋಜನೆ ಕಾಮಗಾರಿ ಪ್ರಾರಂಭ ಮಾಡಿದರು. ಆದರೆ ನಮ್ಮ ಭಾಗದಲ್ಲಿ ೫ ಸಾವಿರ ಎಕರೆಯಲ್ಲಿ ಬಫರ್ ಡ್ಯಾಂ ನಿರ್ಮಾಣವಾಗಬೇಕಿತ್ತು. ಕೆಲವರ ವಿರೋಧದಿಂದ ಆ ಡ್ಯಾಂ ಬೇರೆಡೆ ಸ್ಥಳಾಂತರವಾಗಿ. ಆದರು ಸಹ ನಮ್ಮ ತಾಲೂಕಿನ ಸುಮಾರು ೬೯ ಕೆರೆಗಳಿಗೆ ನೀರು ಹರಿಯಲಿದೆ. ಇದೇ ಜೂನ್‌ನಲ್ಲಿ ತುಮಕೂರಿಗೆ ನೀರನ್ನು ತರಲಾಗುವುದು ಎಂದು ನಮ್ಮ ಅಧಿಕಾರಿಗಳು ಹೇಳಿದ್ದಾರೆ ನೀರು ಹರಿಯಲಿದೆ ಎಂದು ಭರವಸೆ ನೀಡಿದರು.ಇದೆ ಸಂದರ್ಭದಲ್ಲಿ ಡಿಜಿಪಿ ಜೆ.ಅರಣ್‌ಚಕ್ರವರ್ತಿ, ಕಾನೂನು ಸುವ್ಯವಸ್ಥೆಯ ಡಿಜಿಪಿ ಮುರಗನ್, ಪೊಲೀಸ್ ಮಹಾ ನಿರ್ದೇಶಕ ಲಾಬುರಾಮ್, ೧೨ನೇ ಕೆಎಸ್‌ಆರ್‌ಪಿ ಕಮಾಂಡೆಂಟ್ ಹಂಜಾ ಹುಸೇನ್, ಜಿಲ್ಲಾಧಿಕಾರಿ ಶಭುಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಆಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಪುರುಷೋತ್ತಮ್, ಗೋಪಾಲ್, ಡಿವೈಎಸ್ಪಿ ಮಂಜುನಾಥ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಕೆರೆ ಶಂಕರ್, ಆಶ್ವಥ್‌ನಾರಾಯಣ್, ಸೇರಿದಂತೆ ಇತರರು ಇದ್ದರು.