ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಂಡೆ ವಾದ್ಯ, ಮಂಗಳ ವಾದ್ಯ, ವೀರಗಾಸೆ ಹಾಗೂ ಅಘೋರಿ ನೃತ್ಯ, ಭಜನೆಯೊಂದಿಗೆ ಭಾರತ ಮಾತೆಯನ್ನು ಹೊತ್ತ ದಿವ್ಯ ರಥ ಹಾಗೂ ಶ್ರೀ ರಾಮಲಕ್ಷ್ಮಣ ಸೀತಾ ಮತ್ತು ಆಂಜನೇಯ ಸ್ವಾಮಿ ಉತ್ಸವ ನಡೆಯಿತು.
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಭಾರತೀಯ ಪರಂಪರೆಯಲ್ಲಿ ಹಿಂದುತ್ವಕ್ಕೆ ವಿಶೇಷ ಸ್ಥಾನಮಾನವಿದೆ. ಇಂದು ಹಿಂದೂ ಧರ್ಮದ ರಕ್ಷಣೆ ಆಗಬೇಕಾದರೆ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಯುವಜನತೆಗೆ ತಿಳಿಸುವ ಕಾರ್ಯವಾಗಬೇಕು ಎಂದು ಧರ್ಮ ಜಾಗರಣ ವೇದಿಕೆಯ ಪ್ರಾಂತ ಸಂಯೋಜಕ ಎಚ್.ಎಂ.ನಾಗಪ್ಪ ತಿಳಿಸಿದರು.
ತ್ಯಾಮಗೊಂಡ್ಲು ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ ಸಮಿತಿಯ ವತಿಯಿಂದ ಆಯೋಜಿಸಿದ್ದ ನೆಲಮಂಗಲ ಗ್ರಾಮಾಂತರ ಹಿಂದೂ ಸಮಾಜೋತ್ಸವ ಹಾಗೂ ಶೋಭಾಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ನಾಡಿನಲ್ಲಿನ ಎಲ್ಲಾ ಜನಾಂಗದವರನ್ನು ಸಹೋದರ ಮತ್ತು ಸಹೋದರಿಯರಂತೆ ಕಾಣುವ ಮನೋಭಾವವನ್ನು ಪ್ರತಿಯೊಬ್ಬ ಹಿಂದೂ ಹೊಂದಬೇಕಾಗಿದೆ. ಆಗ ಮಾತ್ರ ಬಲಿಷ್ಠವಾದ ಹಿಂದೂ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಹಿಂದುತ್ವ, ನಾಡಿನ ಸಂಸ್ಕೃತಿಯ ಅರಿವು ಮೂಡಿಸಬೇಕಿದೆ ಎಂದರು.
ಹಿಂದೂ ಸಮಾಜೋತ್ಸವದ ಗೌರವ ಅಧ್ಯಕ್ಷ ಸಿ.ಆರ್.ಸ್ವಾಮಿ ಮಾತನಾಡಿ, ನಮ್ಮ ಮೂಲ ಸಂಸ್ಕೃತಿ ಉಳಿವಿಗೆ ಮಕ್ಕಳಲ್ಲಿ ಗುರು- ಹಿರಿಯರು, ತಂದೆ- ತಾಯಿಯನ್ನು ಗೌರವಿಸುವ ಹಾಗೂ ಪೂಜಿಸುವ ಸಂಸ್ಕಾರ ಬೆಳಸಬೇಕು. ಹಿಂದೂ ನಾವೆಲ್ಲಾ ಒಂದು ಎಂಬ ಭಾವನೆಯಲ್ಲಿ ಸಮಾಜ ಕಟ್ಟಬೇಕು ಎಂದರು.
ಶೋಭಾಯಾತ್ರೆ:
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಚಂಡೆ ವಾದ್ಯ, ಮಂಗಳ ವಾದ್ಯ, ವೀರಗಾಸೆ ಹಾಗೂ ಅಘೋರಿ ನೃತ್ಯ, ಭಜನೆಯೊಂದಿಗೆ ಭಾರತ ಮಾತೆಯನ್ನು ಹೊತ್ತ ದಿವ್ಯ ರಥ ಹಾಗೂ ಶ್ರೀ ರಾಮಲಕ್ಷ್ಮಣ ಸೀತಾ ಮತ್ತು ಆಂಜನೇಯ ಸ್ವಾಮಿ ಉತ್ಸವ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ಹಿಂದೂ ಸಮಾಜೋತ್ಸವ ಸಮಿತಿಯ ಅಧ್ಯಕ್ಷ ಮಹಿಮಣ್ಣ, ಸಿ.ಆರ್.ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೃಂಗೀಶ್, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷರಾದ ಲೋಕೇಶ್, ಜಗದೀಶ್ ಪ್ರಸಾದ್, ಗ್ರಾಪಂ ಮಾಜಿ ಅಧ್ಯಕ್ಷರಾದ ಕಾರೇಹಳ್ಳಿ ಗುರುಪ್ರಕಾಶ್, ನರಸೀಪುರ ನಾಗರಾಜು, ಟಿ.ಎನ್.ಹನುಮಂತರಾಜು, ತಾಪಂ ಮಾಜಿ ಸದಸ್ಯ ಪ್ರಕಾಶ್, ಹರೀಶ್, ಜಗದೀಶ್, ಕುಮಾರಸ್ವಾಮಿ ಮೊದಲಿಯಾರ್, ವಿಜಯಕುಮಾರ್, ಅರುಣ್ ಕುಮಾರ್, ಪ್ರಸಾದ್, ಅಶ್ವಥ್ ಗೌಡ, ಪ್ರಕಾಶ್ ಬಾಬು, ಮಹಿಳಾ ಮುಖಂಡರಾದ ರಾಜಮ್ಮ, ಸೌಮ್ಯ, ವೇದಾವತಿ, ಮಂಗಳಮ್ಮ ಮಂಜುಳಾ ಸೇರಿದಂತೆ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.