ಸುಳ್ಯ ಆಲೆಟ್ಟಿ ಗ್ರಾಮದ ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ 3 ದಿನಗಳ ಕಾಲ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭವಾರ್ತೆ ಮಡಿಕೇರಿ
ಸುಳ್ಯ ಆಲೆಟ್ಟಿ ಗ್ರಾಮದ ಶ್ರೀ ಕುಡೆಕಲ್ಲು ವಿಷ್ಣುಮೂರ್ತಿ ದೈವಸ್ಥಾನದಲ್ಲಿ 3 ದಿನಗಳ ಕಾಲ ವಿಷ್ಣುಮೂರ್ತಿ ಮತ್ತು ಉಪದೈವಗಳ ಕೋಲ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸುಳ್ಯ, ಮತ್ತು ಕೊಡಗಿನ ಭಕ್ತರು ಪಾಲ್ಗೊಂಡಿದ್ದರು. ವೆಂಕಟರಮಣ ಸ್ವಾಮಿ ಹರಿಸೇವೆ ನಡೆಯಿತು. ಶ್ರೀ ವಿಷ್ಣುಮೂರ್ತಿ, ಪಾಷಣಮೂರ್ತಿ, ಧರ್ಮದೈವ(ರುದ್ರಚಾಮುಂಡಿ) ಪಂಜುರ್ಳಿ, ಪೋಟ್ಟ ದೈವ, ಗುಳಿಗ, ಗುರುಕಾರೋಣ ದೈವ, ಕೋಲ ನಡೆಯಿತು. ವಯನಾಟ್ಕುಲವನ್ ದೈವಸ್ಥಾನದಲ್ಲಿ ವಿವಿಧ ಪೂಜಾ ವಿಧಾನಗಳು ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಡೆಕಲ್ಲು ಕುಟುಂಬದ ಯಜಮಾನರಾದ ರಾಮಣ್ಣ, ಆಡಳಿತಗಾರರಾದ ಬಿಪಿನ್, ವಾಸುದೇವ, ಗಂಗಾಧರ ಕುಟುಂಬದ ಹಿರಿಯರು ಗ್ರಾಮಸ್ಥರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.