ಕನ್ನಡಪ್ರಭ ವಾರ್ತೆ ಕುಶಾಲನಗರಕುಶಾಲನಗರ ತಾಲೂಕಿನ ಕೂಡಿಗೆಯ ಜಿಲ್ಲಾ ಕೋಳಿ ಸಾಕಾಣಿಕೆ, ಮತ್ತು ತರಬೇತಿ ಕೇಂದ್ರದಲ್ಲಿ ಹೈನುಗಾರಿಕೆ, ಮತ್ತು ಕುರಿಗಳ ಸಾಕಾಣಿಕೆ ಬಗ್ಗೆ ಒಂದು ದಿನದ ತರಬೇತಿಯನ್ನು ಸೋಮವಾರಪೇಟೆ, ಮತ್ತು ಕುಶಾಲನಗರ ತಾಲೂಕಿನ ವ್ಯಾಪ್ತಿಯ ರೈತರಿಗೆ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಅವರು, ಹೈನುಗಾರಿಕೆಗೆ ಸಂಬಂಧಿಸಿದಂತೆ ರೈತರಿಗೆ ತರಬೇತಿ, ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮದ ಅಡಿಯಲ್ಲಿ ತಾಲೂಕು ವ್ಯಾಪ್ತಿಯ ರೈತರಿಗೆ ವಿವಿಧ ಹೊಸ ಹೈಬ್ರೀಡ್ ತಳಿಗಳ ಬಗ್ಗೆ, ಮತ್ತು ನೂತನವಾಗಿ ಕುರಿ ಸಾಕಾಣಿಕೆ ಮಾಡುವ ಯೋಜನೆಯ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿದರು.
ಕಾರ್ಯಾಗಾರದಲ್ಲಿ ರೈತರು ಭಾಗವಹಿಸಿ ಇಲಾಖೆಯ ಕಾರ್ಯಯೋಜನೆಗಳು ಮತ್ತು ರೋಗ ತಡೆಗಟ್ಟಲು ಅನುಸರಿಸಿಬಹುದಾದ ವಿಚಾರಗಳನ್ನು ತಿಳಿದುಕೊಂಡು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುಕೂಲವಾಗುವುದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಜಿಲ್ಲಾಧ್ಯಕ್ಷ ಡಿ.ಆರ್. ಪ್ರಭಾಕರ್ ವಹಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಬಿ.ಕೆ. ಮೋಹನ್ ಕುಮಾರ್, ಕಾರ್ಯದರ್ಶಿ ಬರಮಣ್ಣ ಬೆಟಗೇರಿ, ನಿರ್ದೇಶಕರಾದ ಶಾಂತ ಬೆಟಗೇರಿ, ಕೆ.ಎನ್ ನಟರಾಜ್, ಮಹೇಶ್, ಪಶುವೈದ್ಯ ಅಧಿಕಾರಿಗಳಾದ ಡಾ. ಎಸ್. ಶೈಲಜ, ಡಾ. ಪಿ. ಸಿ. ಶ್ರೀ ದೇವು, ಸೇರಿದಂತೆ ತಾಲೂಕಿನ ರೈತರು ಪಾಲ್ಗೊಂಡಿದ್ದರು.