ಕೂಡ್ಲಿಗಿ: ಬರ ಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕೂಡ್ಲಿಗಿ ಸೇರಿಸಬೇಕು ಎಂದು ಆಗ್ರಹಿಸಿ ಕರೆ ನೀಡಿದ್ದ ಕೂಡ್ಲಿಗಿ ಬಂದ್ ಸಂಪೂರ್ಣ ಯಶಸ್ವಿ ಆಯಿತು. ಕೂಡ್ಲಿಗಿಯ ರೈತಪರ, ಕಮ್ಯುನಿಷ್ಟ್ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಪಟ್ಟಣದಲ್ಲಿ ಮುಂಜಾನೆಯಿಂದಲೇ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದವು. ಶಾಲೆ-ಕಾಲೇಜುಗಳು ತೆರೆದಿದ್ದವಾದರೂ ವಿದ್ಯಾರ್ಥಿಗಳ ಸಂಖ್ಯೆ ವಿರಳವಾಗಿತ್ತು. ಬಸ್ ಸಂಚಾರ ಎಂದಿನಂತಿತ್ತು.
ಕೂಡ್ಲಿಗಿಯಲ್ಲಿ ಮಳೆ ಇಲ್ಲದೇ ಜನತೆ ಅತೀ ಹೆಚ್ಚು ಗುಳೇ ಹೋಗಿದ್ದಾರೆ. ಆದರೆ, ಕೂಡ್ಲಿಗಿ, ಕೊಟ್ಟೂರನ್ನು ಕೈ ಬಿಟ್ಟಿರುವುದನ್ನು ನೋಡಿದರೆ ಅಧಿಕಾರಿಗಳಿಗೆ ವೈಜ್ಞಾನಿಕ ತಿಳಿವಳಿಕೆ ಕೊರತೆ ಇದೆ. ರಾಜ್ಯ ಸರ್ಕಾರ ಅರ್ಥ ಮಾಡಿಕೊಂಡು ಬರದ ಪಟ್ಟಿಗೆ ಸೇರಿಸಬೇಕು, ಕೇಂದ್ರ ಸರ್ಕಾರ ದೊಡ್ಡ ಮೊತ್ತದ ಪರಿಹಾರ ಕೊಡಬೇಕು. ಇಲ್ಲದಿದ್ದರೆ ರೈತರ ಬದುಕು ಅತಂತ್ರವಾಗುತ್ತದೆ ಎಂದರು.
ಸಹಕಾರ ಸಂಘಗಳ ರೈತರ ಸಾಲ ಮನ್ನಾ ಮಾಡಬೇಕು, ಮೈಕ್ರೋ ಫೈನಾನ್ಸ್‌ನವರು ಬರದ ಸಂದರ್ಭದಲ್ಲಿ ಕಿರುಕುಳ ನೀಡದಂತೆ ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರೈತರ, ಕೂಲಿಕಾರ್ಮಿಕರ ಆತ್ಮಹತ್ಯೆ ತಡೆಯುವ ಕಾರ್ಯವನ್ನು ಜಿಲ್ಲಾಡಳಿತ, ರಾಜ್ಯ ಸರ್ಕಾರ ಮಾಡಬೇಕಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ರೈತ ಸಂಯುಕ್ತ ಹೋರಾಟ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತ ಸಂಘ, ಕಟ್ಟಡ ಕಾರ್ಮಿಕರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಎಪಿಎಂಸಿ ಮತ್ತು ಬಜಾರ್ ಹಮಾಲರ ಸಂಘ, ದಲಿತ ಹಕ್ಕುಗಳ ಸಮಿತಿ, ಬೀದಿ ವ್ಯಾಪಾರಿಗಳ ಸಂಘ, ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ, ವಿದ್ಯಾರ್ಥಿ ಯುವಜನ ಸಂಘಟನೆ, ಜನವಾದಿ ಮಹಿಳೆ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ನಲ್ಲಿ ಭಾಗವಹಿಸಿದ್ದವು.
ಎಲ್ಲೆಲ್ಲೂ ಖಾಕಿಪಡೆ
ಪ್ರತಿಭಟನೆಯಲ್ಲಿ ಕಮ್ಯುನಿಷ್ಟ ಪಕ್ಷದ ಸಿ. ವಿರೂಪಾಕ್ಷಿ, ಎಚ್. ವೀರಣ್ಣ, ಗುನ್ನಳ್ಳಿ ರಾಘವೇಂದ್ರ, ಕಾಟೇರ್ ಹಾಲೇಶ್, ರೈತ ಸಂಘದ ಅಧ್ಯಕ್ಷ ದೇವರಮನಿ ಮಹೇಶ್, ಟಿ.ಜಿ. ನಾಗರಾಜಗೌಡ, ಬಿಜೆಪಿ ಹಿರಿಯ ಮುಖಂಡ ಸೂರ್ಯಪಾಪಣ್ಣ, ಬಿಟಿ ಗುದ್ದಿ ಚಂದ್ರು, ಭಾಗ್ಯಮ್ಮ, ಸೇರಿದಂತೆ ತಾಲೂಕಿನ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.