ಮಹಾನ್‌ ಮಾನವತಾವಾದಿ ರಂಗರಾವ್‌: ವೇದವ್ಯಾಸ್‌ ಕಾಮತ್

KannadaprabhaNewsNetwork |  
Published : Jul 01, 2026, 03:30 AM IST
ಕುದ್ಮುಲ್‌ ರಂಗರಾವ್‌ ಸ್ಮಾರಕಕ್ಕೆ ಬಿಜೆಪಿ ವತಿಯಿಂದ ಪುಷ್ಪನಮನ ಸಲ್ಲಿಸಲಾಯಿತು | Kannada Prabha

ಸಾರಾಂಶ

ಕುದ್ಮುಲ್ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿ. ಭಿಕ್ಷೆ ಬೇಡಿಯಾದರೂ ದಲಿತ ಬಂಧುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತೇನೆ ಎಂಬ ಅಚಲ ವಿಶ್ವಾಸ ಹೊಂದಿದ್ದವರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ಶಾಸಕ ವೇದವ್ಯಾಸ್‌ ಡಿ.ಕಾಮತ್‌ ಆಶಿಸಿದ್ದಾರೆ.

ಮಂಗಳೂರು: ಕುದ್ಮುಲ್ ರಂಗರಾಯರು ಶೋಷಿತರ ಅಭಿವೃದ್ಧಿಗಾಗಿ ಇಡೀ ಬದುಕನ್ನು ಮುಡಿಪಾಗಿಟ್ಟ ಮಹಾನ್ ಮಾನವತಾವಾದಿ. ಭಿಕ್ಷೆ ಬೇಡಿಯಾದರೂ ದಲಿತ ಬಂಧುಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುತ್ತೇನೆ ಎಂಬ ಅಚಲ ವಿಶ್ವಾಸ ಹೊಂದಿದ್ದವರು. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂದು ಶಾಸಕ ವೇದವ್ಯಾಸ್‌ ಡಿ.ಕಾಮತ್‌ ಆಶಿಸಿದ್ದಾರೆ.ದಲಿತೋದ್ಧಾರಕ, ಸಾಮಾಜಿಕ ಸುಧಾರಣೆಯ ಹರಿಕಾರ, ಕುದ್ಮುಲ್ ರಂಗರಾವ್ ಜನ್ಮದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಎಸ್ಸಿ ಮೋರ್ಚಾ ವತಿಯಿಂದ ಅತ್ತಾವರ ಬಾಬುಗುಡ್ಡೆಯಲ್ಲಿರುವ ಸ್ಮಾರಕಕ್ಕೆ ಪುಷ್ಪ ನಮನ ಸಹಿತ ಗೌರವ ಸಲ್ಲಿಸಿ ಅವರು ಮಾತನಾಡಿದರು.

ಪ್ರತಿ ವರ್ಷ ಮ.ನ.ಪಾ. ವತಿಯಿಂದ ಜಯಂತಿ ಆಚರಣೆ ನಡೆಯುವಂತೆ, ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ನಿರ್ಣಯಿಸಲಾಗಿತ್ತು. ಆದರೆ ಕಾಂಗ್ರೆಸ್ ನೇತೃತ್ವದ ಪಾಲಿಕೆ ಕಳೆದ ವರ್ಷ ಎಲ್ಲವನ್ನು ಕಡೆಗಣಿಸಿ ಜಯಂತಿ ಆಚರಿಸದಿದ್ದದ್ದು ದುರದೃಷ್ಟಕರ. ಇದೀಗ ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಸಹಿತ ನಮ್ಮೆಲ್ಲರ ಆಗ್ರಹದ ನಂತರ ಬಿಜೆಪಿಯ ನಿರ್ಣಯದಂತೆ ಪಾಲಿಕೆ ವತಿಯಿಂದಲೇ ಜಯಂತಿ ಆಚರಣೆ ನಡೆದಿರುವುದು ಸಮಾಧಾನಕರ ಸಂಗತಿ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಕಾರ್ಯದರ್ಶಿ ರಘುವೀರ್ ಬಾಬುಗುಡ್ಡೆ, ಕುದ್ಮುಲ್ ರಂಗರಾವ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಬಿ.ಆರ್ ಹೃದಯನಾಥ್, ಉಪಾಧ್ಯಕ್ಷ ಶಾಮ ಕರ್ಕೇರ, ಪ್ರಮುಖರಾದ ಶೈಲೇಶ್ ಶೆಟ್ಟಿ, ಭಾನುಮತಿ ಪಿ.ಎಸ್, ಭರತ್ ಕುಮಾರ್, ನಿತಿನ್ ಕುಮಾರ್, ದೀಪಕ್ ಪೈ, ಮೋಹನ್ ಪೂಜಾರಿ, ಪುಷ್ಪರಾಜ್ ಶೆಟ್ಟಿ, ರವಿ ಕಾಪಿಕಾಡ್, ರಾಜೇಂದ್ರ, ಯಶವಂತ ಕುದ್ರೋಳಿ, ಅಶ್ವಿತ್ ಕೊಟ್ಟಾರಿ, ರಘುವೀರ್ ಸೂಪರ್ ಪೇಟೆ, ವಸಂತ್ ಬಂಗೇರ, ಕಸ್ತೂರಿ, ಅನಿತಾ ದಯಾಕರ್, ಬಿ.ಎಸ್ ಶಶಿಕಾಂತ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರಿ ಸಂಘಗಳಿಂದ ಜನರ ಆರ್ಥಿಕ ಪ್ರಗತಿ: ಡಾ.ಎಂಎನ್‌ಆರ್‌
ಇರುವೈಲು ಅನಂತ ಭಟ್ಟರ ಸಂಸ್ಮರಣೆ