ಕನ್ನಡಪ್ರಭ ವಾರ್ತೆ ಕುಶಾಲನಗರ
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರಮೋಹನ್, ಜನ್ಮ ದಿನಾಚರಣೆ ಎಂಬುದು ಸದಾ ನೆನಪಿನಲ್ಲಿರಬೇಕು. ಈ ದೃಷ್ಟಿಯಿಂದ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ತಮ್ಮ ಪಂಚಾಯಿತಿಯ ಪೌರಕಾರ್ಮಿಕರಿಗೆ ಆಹಾರ ಕಿಟ್ ನೀಡುವ ಮೂಲಕ ಜನ್ಮ ದಿನವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದಾರೆ ಎಂದರು.
ಪತ್ರಕರ್ತ ಕೆ.ಕೆ.ನಾಗರಾಜ್ ಶೆಟ್ಟಿ ಮಾತನಾಡಿ, ಜನ್ಮ ದಿನದಂದು ಮೋಜು ಮಸ್ತಿ ಮಾಡಿ ಹಣವನ್ನು ಪೋಲು ಮಾಡುತ್ತಾರೆ. ಆದರೆ ಸ್ನೇಹಿತರು ಹಾಗೂ ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಅವರು ಪೌರಕಾರ್ಮಿಕರಿಗೆ ಆಹಾರ ಕಿಟ್ ನೀಡಿ ಜನ್ಮ ದಿನವನ್ನು ಆಚರಣೆ ಮಾಡಿರುವುದು ಸಂತಸದ ವಿಷಯ ಎಂದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾದ ಟಿ.ಆರ್.ಪ್ರಭುದೇವ್ ಮಾತನಾಡಿ, ಕೆ.ಬಿ.ಶಂಶುದ್ದೀನ್ ಅವರು ಬಹಳಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಜನ್ಮ ದಿನದ ಪ್ರಯುಕ್ತ ಗ್ರಾಮವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಆಹಾರ ಕಿಟ್ ನೀಡುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ ಎಂದರು.
ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಜನ್ಮ ದಿನದಂದು ಎಲ್ಲರೂ ಸಂತೋಷದಿಂದ ಇರುತ್ತಾರೆ. ಶುಭದಿನದಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬ ಉದ್ದೇಶದಿಂದ ಪಂಚಾಯಿತಿಯ ಪೌರಕಾರ್ಮಿಕರಿಗೆ ಆಹಾರ ಕಿಟ್ ನೀಡಲಾಗಿದೆ ಎಂದರು.ಪತ್ರಕರ್ತರಾದ ಎಚ್.ಸಿ.ಜಯಪ್ರಕಾಶ್, ಮುಸ್ತಫಾ, ವಿನೋದ್, ಇಸ್ಮಾಯಿಲ್, ಕಾಂಗ್ರೆಸ್ ಯುವ ಮುಖಂಡ ಆದಂ.ಎಸ್, ಉದ್ಯಮಿ ನರೇಂದ್ರ, ಪೌರಕಾರ್ಮಿಕರು ಇದ್ದರು.