ಕುಕನೂರು: ಪಟ್ಟಣದಲ್ಲಿ ಕುಕನೂರು ತಾಲೂಕು ಸರ್ಕಾರಿ ಕಚೇರಿ ಸ್ಥಾಪನೆಗೆ ಆಗ್ರಹಿಸಿ ಅ.11ರ ಬುಧವಾರದಂದು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಕುಕನೂರು ಬಂದ್ ಜರುಗಲಿದೆ. ನೂತನ ತಹಸೀಲ್ದಾರ್ ಕಚೇರಿ ಸೇರಿ ಎಲ್ಲ ಇತರೆ ಕಟ್ಟಡಗಳನ್ನು ಕುಕನೂರ ಪಟ್ಟಣದಲ್ಲಿಯೆ ನಿಮಿ೯ಸಬೇಕೆಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅಧ೯ ದಿನ ಕುಕನೂರು ಬಂದ್ ಕರೆ ನೀಡಲಾಗಿದೆ. ಹೊಸ ತಾಲೂಕು ಕೇಂದ್ರವಾದ ಕುಕನೂರು ಪಟ್ಟಣದಲ್ಲಿ ತಹಸೀಲ್ದಾರ್ ಕಚೇರಿ, ಕ್ರೀಡಾಂಗಣ, ಕೋಟ್೯ ಇತರೆ ಕಟ್ಟಡಗಳನ್ನು ತಾಲೂಕು ಕೇಂದ್ರ ಸ್ಥಳದಲ್ಲಿ ನಿಮಿ೯ಸಬೇಕು. ಜಾಗೆ ಕೊರತೆಯಿಂದ ತಳಬಾಲ ಗ್ರಾಮದಲ್ಲಿ ನಿಮಿ೯ಸಲು ಉದ್ದೇಶಿಸಿಸಲಾಗಿದೆ ಎಂಬ ಮಾಹಿತಿ ಇದ್ದು, ಇದನ್ನು ವಿರೋಧಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕುಕನೂರು ಬಂದಗೆ ಕರೆ ನೀಡಲಾಗಿದೆ ಎಂದು ಪಪಂ ಸದಸ್ಯ ನೂರಹ್ಮದ್ ಗುಡಿಹಿಂದಲ್, ಮುಖಂಡರಾದ ಸಿದ್ದಯ್ಯ ಕಳ್ಳಿಮಠ, ವೀರಯ್ಯ ತೊಂಟದಾಯ೯ಮಠ, ಸಂಗಮೇಶ ಗುತ್ತಿ,ಮಹಾಂತೇಶ್ ಜಂಗಲಿ, ರಾಘವೇಂದ್ರ ಕಾತರಕಿ, ಹನುಮೇಶ್ ಗೌಡ್ರ, ಶಬ್ಬೀರ್ ತಹಸೀಲ್ದಾರ್, ಅಬ್ದುಲ್ ಗಫಾರ್, ರಹಮಾನ್ಸಾಬ್ ಮಕ್ಕಪ್ಪನವರ್ ತಿಳಿಸಿದ್ದಾರೆ.