ಭದ್ರೆಯ ಕೃಪೆಯಿಂದ ಕೋಡಿಬಿದ್ದ ಕುಕ್ಕಸಮುದ್ರ ಕೆರೆ

KannadaprabhaNewsNetwork |  
Published : Oct 06, 2026, 03:00 AM IST
ಸಸಸ | Kannada Prabha

ಸಾರಾಂಶ

ಕಡೂರುಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ಭದ್ರಾ ನೀರು ಕಡೂರು ತಾಲೂಕಿನ ಗಡಿಭಾಗದ ಬಯಲುಸೀಮೆ ರೈತರಿಗೆ ಪುನರ್ಜನ್ಮ ನೀಡಿದೆ. ಅಂತರಘಟ್ಟೆ ಕೆರೆ, ಕಲ್ಕೆರೆಯ ಕುಕ್ಕಸಮುದ್ರ ಕೆರೆಗಳು ಕೋಡಿ ಬಿದ್ದಿದ್ದರೆ ಹೂಲಿಹಳ್ಳಿ ಕೆರೆ ಭರ್ತಿ ಆಗಿದೆ, ಚೌಳಹಿರಿಯೂರು ಊರ ಮುಂದಿನ ಕೆರೆಗೆ ನೀರು ಹರಿದುಬರುತ್ತಿದೆ.

ರೈತರಿಂದ ಇಂದು ಬಾಗಿನ ಅರ್ಪಣೆ

ಕನ್ನಡಪ್ರಭ ವಾರ್ತೆ ಕಡೂರು

ಭದ್ರಾ ಮೇಲ್ದಂಡೆಯ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಹರಿದು ಬಂದ ಭದ್ರಾ ನೀರು ಕಡೂರು ತಾಲೂಕಿನ ಗಡಿಭಾಗದ ಬಯಲುಸೀಮೆ ರೈತರಿಗೆ ಪುನರ್ಜನ್ಮ ನೀಡಿದೆ. ಅಂತರಘಟ್ಟೆ ಕೆರೆ, ಕಲ್ಕೆರೆಯ ಕುಕ್ಕಸಮುದ್ರ ಕೆರೆಗಳು ಕೋಡಿ ಬಿದ್ದಿದ್ದರೆ ಹೂಲಿಹಳ್ಳಿ ಕೆರೆ ಭರ್ತಿ ಆಗಿದೆ, ಚೌಳಹಿರಿಯೂರು ಊರ ಮುಂದಿನ ಕೆರೆಗೆ ನೀರು ಹರಿದುಬರುತ್ತಿದೆ. ಮುಂಗಾರು ಕೈಕೊಟ್ಟು ಅತ್ತ ಬಿತ್ತನೆಯೂ ಆಗದ, ಕೆರೆ-ಕಟ್ಟೆಗಳು ಒಣಗಿ ಜನ-ಜಾನುವಾರುಗಳಿಗೆ ಕುಡಿವ ನೀರಿಗೂ ತತ್ವಾರ ಎದುರಾಗುವ ಸನ್ನಿವೇಶದಲ್ಲಿ ವರದಾನವೋ ಎಂಬಂತೆ ಚಿತ್ರದುರ್ಗ ಶಾಖಾ ಕಾಲುವೆ ಮೂಲಕ ಚಿತ್ರದುರ್ಗಕ್ಕೆ ಪ್ರಾಯೋಗಿಕವಾಗಿ ನೀರು ಹರಿಸಲು ಮತ್ತು ಮಾರ್ಗದಲ್ಲಿ ಬರುವ ಕೆರೆಗಳನ್ನು ತುಂಬಿಸಲು ಸರ್ಕಾರದ ಆದೇಶದಂತೆ ವಿಶ್ವೇಶ್ವರಯ್ಯ ಜಲ ನಿಗಮ ಮುಂದಾಗಿತ್ತು. ಈ ವೇಳೆ ಕೆಲವು ಗೊಂದಲದ ಸನ್ನಿವೇಶಗಳೂ ಉಂಟಾಗಿ, ಕಡೂರು ಭಾಗದ ರೈತರು ಹೋರಾಟವೂ ನಡೆಯಿತು. ಕಳೆದ ಸೆ.6ರಂದು ಪ್ರಾಯೋಗಿಕವಾಗಿ ನೀರಿನ ಹರಿವು ಆರಂಭದ ಬಳಿಕ ತರೀಕೆರೆ-ಅಜ್ಜಂಪುರ ಭಾಗದ ಕೆರೆಗಳಿಗೂ ನೀರು ಹರಿದು ಕಡೂರಿನ ಅಂತರಘಟ್ಟೆ ಕೆರೆ ಮೊದಲು ತುಂಬಿತ್ತು. ಕುಕ್ಕಸಮುದ್ರ ಕೆರೆಗೆ ನೀರು ಹರಿಸುವ ಸಂದರ್ಭದಲ್ಲಿ ಒಂದೆರಡು ಬಾರಿ ತಾಂತ್ರಿಕ ದೋಷ ಮತ್ತು ಹೆಬ್ಬೂರು "ವೈʼಜಂಕ್ಷನ್‌ ಬಳಿ ರೈತರ ಜಮೀನುಗಳನ್ನು ನೀರು ಕೊರೆದು ಕೊಂಡು ಹೋಗುತ್ತಿದೆ ಎನ್ನುವ ದೂರು ಮತ್ತು ರೈತರಿಂದ ಅಡಚಣೆ ಉಂಟಾದಾಗ ನೀರಿನ ಹರಿವಿನಲ್ಲಿ ಲೋಪ ಉಂಟಾಗಿತ್ತು. ಕಡೂರು ಶಾಸಕರ ಮಧ್ಯಪ್ರವೇಶ, ಚೌಳಹಿರಿಯೂರು ಭಾಗದ ರೈತ ಮುಖಂಡರು ಮತ್ತು ಮಾಜಿ ಶಾಸಕರ ಹೋರಾಟದ ಫಲವೂ ಸೇರಿ ಕೆರೆಗಳಿಗೆ ಸರಾಗವಾಗಿ ನೀರು ಹರಿದು ಬರಲು ಆರಂಭಿಸಿದೆ. ಕಲ್ಕೆರೆ ಕುಕ್ಕಸಮುದ್ರ ಕೆರೆ 162 ಹೆ.ವಿಸ್ತೀರ್ಣದಲ್ಲಿ ನೀರು ಹಿಡಿಯುವ ಸಾಮರ್ಥ್ಯ ಹೊಂದಿದ್ದು 3.85 ಎಂಸಿಎಫ್ಟಿ ನೀರು ಸಂಗ್ರಹಿಸುವ ಹಾಗೂ ಸಾವಿರಾರು ಎಕರೆ ಭೂಮಿಗೆ ನೀರುಣಿಸುವ, ನೂರಾರು ಕೊಳವೆ ಬಾವಿಗಳಿಗೆ ಪುನಃಶ್ಚೇತನ ಹಾಗೂ ಹಲವಾರು ಕೆರೆ-ಕಟ್ಟೆಗಳನ್ನು ತುಂಬಿಸುವ ಸಾಮರ್ಥ್ಯ ಹೊಂದಿದೆ. ಭಾನುವಾರ ಭದ್ರೆ ಕೃಪೆಯಿಂದ ಕೋಡಿ ಬಿದ್ದಿದೆ. ಅಲ್ಲಿಂದ ಹರಿದು ಹೋಗುವ ನೀರು ಹೊಸದುರ್ಗ ತಾಲೂಕಿನ ಶೆಟ್ಟಿಹಳ್ಳಿ, ಕೊರಟೀಕೆರೆ, ಕಂಗುವಳ್ಳಿ, ಕಡದಿನ ಕೆರೆ, ಕಬ್ಬಳ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಕುಡಿಯುವ ನೀರೊದಗಿಸಿ ಅಲ್ಲಿಂದ ಕೆಲ್ಲೋಡು ಗ್ರಾಮದ ಚೆಕ್‌ ಡ್ಯಾಂ ತುಂಬಿಸುವ ಮೂಲಕ ಹೊಸದುರ್ಗ ಪಟ್ಟಣದ ಕುಡಿಯುವ ನೀರು ಪೂರೈಕೆಗೆ ನೆರವಾಗಲಿದೆ. ಚೌಳಹಿರಿಯೂರಿನ ಊರಮುಂದಿನ ಕೆರೆ ತುಂಬಿದರೆ ಸುತ್ತಮುತ್ತಲ ಗ್ರಾಮಗಳ ಕೊಳವೆಬಾವಿಗಳು ರೀಚಾರ್ಜ್ಆಗುವ ಜತೆಗೆ ಚೌಳಹಿರಿಯೂರಿನ ಜನರಿಗೆ ಕುಡಿವ ನೀರಿಗೂ ಬಳಕೆ ಆಗಲಿದೆ. ಕಲ್ಕೆರೆ ಕೆರೆ ತುಂಬಿಸುವ ಸಮಯದಲ್ಲಿ 9 ಕಿ.ಮೀ ನಾಲೆ ಹೊಂದಿದ ಊರಮುಂದಿನ ಕೆರೆಯಲ್ಲಿ ರಂಗಾಪುರ ಭಾಗದ ನಾಲೆಯಲ್ಲಿ ಸುಮಾರು 3 ಕಿ.ಮೀ ಜಂಗಲ್‌ ತೆರವು ಮೂಲಕ ಸಣ್ಣ ನೀರಾವರಿ ಇಲಾಖೆ ನೀರು ಸರಾಗವಾಗಿ ಹರಿದು ಬರಲು ಅನುವು ಮಾಡಿಕೊಟ್ಟಿದೆ. ಪರಿಣಾಮ ಇನ್ನು 8-10 ದಿನಗಳಲ್ಲಿ ಊರಮುಂದಿನ ಕೆರೆ ಕೂಡಾ ಭರ್ತಿ ಸಾಧ್ಯತೆ ಇದೆ. " ಚೌಳಹಿರಿಯೂರು ಭಾಗದ ರೈತರು ಹೋರಾಟ ಆರಂಭಿಸಿದೆವು. ಶಾಸಕರ ಸಹಕಾರ, ವಿಶ್ವೇಶ್ವರಯ್ಯ ಜಲ ನಿಗಮದ ಎಂಜಿಯರ್‌ ಮತ್ತು ಅಧಿಕಾರಿಗಳ ಸಹಾಯದಿಂದ ನಾವು ಬರದ ಬೇಗೆಯಿಂದ ಸ್ವಲ್ಪ ಮಟ್ಟಿಗೆ ಪಾರಾಗಲು ನೆರವಾಗಿದೆ. ಬೇಸಿಗೆವರೆಗೆ ನಮಗೆ ಇನ್ನು ಭಯವಿಲ್ಲ. ನಮ್ಮ ಹೋರಾಟಕ್ಕೆ ನೆರವಾದ ಕಡೂರು ಮಾಜಿ ಶಾಸಕರು ಮತ್ತು ರೈತ ಹೋರಾಟಗಾರರ ಸಹಾಯಹಸ್ತ ಬೆಂಬಲ ನೀಡಿದೆ. ಆದರೆ, ಮುಂದಿನ ದಿನಗಳಲ್ಲಿ ಸರ್ಕಾರ ಜಲನೀತಿ-ಜಲಶಿಕ್ಷಣ ರೂಪಿಸಿ, ಪಂಚಾಯಿತಿವಾರು ಕೆರೆಗಳ ಮಾಹಿತಿ ಪಡೆದು ಅವುಗಳ ಹೂಳೆತ್ತಿಸಿ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು. ಪೈಪ್ಲೈನ್ಅ ಳವಡಿಸಿ ಕೆರೆ ತುಂಬಿಸುವ ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿ ಶೀಘ್ರ ಕೈಗೆತ್ತಿಕೊಳ್ಳಬೇಕು.ಇದರ ಜತೆಗೆ ನೀರಿನ ಸದ್ಬಳಕೆ ಕುರಿತು ಜಾಗೃತಿ ಮೂಡಿಸುವ, ಜಮೀನುಗಳಲ್ಲಿ ಇಂಗುಗುಂಡಿ ನಿರ್ಮಿಸಲು ಉತ್ತೇಜಿಸುವ ಕ್ರಮಗಳ ಮೂಲಕ ಜನರನ್ನು ಜಲಸಾಕ್ಷರರನ್ನಾಗಿಸಬೇಕುʼ ಎನ್ನುತ್ತಾರೆ ಚೌಳಹಿರಿಯೂರಿನ ರೈತ ಮುಖಂಡ ಜಿ.ಅಶೋಕ್‌ ಕುಮಾರ್. " ಕೆರೆಗಳನ್ನು ತುಂಬಿಸುವ ಮೂಲಕ ರೈತರ ಬದುಕಿಗೆ ಬಲ ತುಂಬಲು ಹೊರಟ ಸರ್ಕಾರ ಮತ್ತು ಜಲ ನಿಗಮದ ಕೆಲಸ ಸ್ವಾಗತಾರ್ಹ. ಆದರೆ ಹೆಬ್ಬೂರು ಭಾಗದಲ್ಲಿ "ವೈ ಜಂಕ್ಷನ್ಮೂಲಕ ಬೇಗೂರು ಹಳ್ಳದ ಮೂಲಕ ಹರಿದು ನಮ್ಮ ಜಮೀನುಗಳಲ್ಲಿ ಕೊರಕಲು ಉಂಟಾಗಿ ಭೂಮಿ ಹಾಳಾಗುತ್ತಿದೆ. ನಮಗೆ ಪರಿಹಾರ ಕೊಡುವವರು ಯಾರೂ ಇಲ್ಲ. ಸರ್ಕಾರ ಮತ್ತು ಜನಪ್ರತಿನಿಧಿಗಳು ಮನಸ್ಸು ಮಾಡಿ ನಮಗೆ ಪರಿಹಾರ ಒದಗಿಸಲಿʼ ಎನ್ನುವುದು ಹೆಬ್ಬೂರು ಭಾಗದ ಕೆಲವು ರೈತರ ಅಳಲು. " ಸಿ.ಡಿ.ಗೊಲ್ಲರಹಟ್ಟಿ, ಗುಮ್ಮನಹಳ್ಳಿ ಪಂಪ್ಹೌಸ್, ಮಂಜುನಾಥ ಪುರದ ಮೂಲಕ ಕುರುಬರಹಳ್ಳಿಯ ಕಟ್ಟೆವರೆಗೆ ಅಲ್ಪಸ್ವಲ್ಪ ಕೆಲಸಗಳು, ಪರಿಹಾರ ವಿತರಣೆ, ಒಂದು ವಿದ್ಯುತ್ಕಂಬ ಅಳವಡಿಕೆ ಬಾಕಿ ಇದೆ. ಇವೆಲ್ಲ ಕೆಲಸ ಮುಗಿಸಿಕೊಟ್ಟರೆ ಈ ಭಾಗದ ರೈತರಿಗೂ ನೆರವಾಗಲಿದೆʼ ಎನ್ನುತ್ತಾರೆ ಈ ಭಾಗದ ಕೃಷಿಕರು.-- ಬಾಕ್ಸ್‌-- :

ಹರಿದುಬಂದ ಭದ್ರೆಯಿಂದ ಸಾವಿರಾರು ರೈತರು ಸಂತಸ ವ್ಯಕ್ತಪಡಿಸಿದ್ದು, ಇದೇ ಸಂಭ್ರಮದಲ್ಲಿ ಚೌಳಹಿರಿಯೂರು ಭಾಗದ ರೈತರು ಕುಕ್ಕಸಮುದ್ರ ಕೆರೆಗೆ ಮಂಗಳವಾರ ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದಾರೆ. ರೈತರ ಮೊಗದಲ್ಲಿ ಸಂತಸ ಮೂಡಿದೆ. 5ಕೆಡಿಆರ್ಕಡೂರು ತಾಲೂಕು ಗಡಿಭಾಗದ ಕಲ್ಕೆರೆಯ ಕುಕ್ಕಸಮುದ್ರ ಕೆರೆ ಕೋಡಿ ಬಿದ್ದು ನೀರು ಹರಿದು ಹೋಗುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವ ವೈದ್ಯರು ವೃತ್ತಿ ಗೌರವ ಹೆಚ್ಚಿಸಲಿ: ಬಸವಂತಪ್ಪ
ಸಂಘಟಿತರಾಗಿ ಕ್ರೀಡಾಕೂಟ ಯಶಸ್ವಿಗೊಳಿಸಿ