ಸುಬ್ರಹ್ಮಣ್ಯದ ಕುಮಾರಧಾರ ನದಿ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಕುಮಾರಧಾರ ನದಿ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.
ಉಡುಪಿ ಮೂಲದ ಮಹಿಳೆಯೊಬ್ಬರು ನೀರಿಗೆ ಹಾರಿ ಅವರು ಬೊಬ್ಬೆ ಹೊಡೆದಾಗ ಲಾಡ್ಜ್ ನ ಸಿಬ್ಬಂದಿಗೆ ಗೊತ್ತಾಗಿ ಅವರು ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರು ಮತ್ತು ಸ್ಥಳೀಯರು ಸೇರಿ ಅವರನ್ನು ರಕ್ಷಿಸಿದ್ದಾರೆ.ಸಂಜೆ ಆರು ಗಂಟೆ ಸುಮಾರಿಗೆ ಔರಮ್ ನ ಹತ್ತಿರ ಹರಿಯುವ ಕುಮಾರಧಾರ ನದಿಯ ಇನ್ನೊಂದು ಬದಿಯ ದಡದ ಬಳಿಯಿಂದ ಮಹಿಳೆಯೊಬ್ಬಳು ಕಿರುಚಾಡಿದ್ದು ಕೇಳಿದ್ದು ಔರಮ್ ನ ಸಿಬ್ಬಂದಿಯೋರ್ವರ ಗಮನಕ್ಕೆ ಬಂದಿದೆ. ಮಹಿಳೆಯ ನೀರಿನಲ್ಲೆ ನಿಂತಿದ್ದು ಅಲ್ಲಿಂದ ಮೇಲೆ ಬರಲಾಗುತ್ತಿರಲಿಲ್ಲ. ಇದೇ ವಿಚಾರ ಸ್ಥಳೀಯರಿಗೂ ಗೊತ್ತಾಗಿ ಸ್ಥಳೀಯರು ಮತ್ತು ಪೊಲೀಸ್ ಒಬ್ಬರು ನೀರಿಗಿಳಿದು ಅವರನ್ನು ಮೇಲಕ್ಕೆತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಹಿಳೆ ಒಬ್ಬರೇ ಬಂದಿದ್ದು ಯಾರೂ ನೀರುಗಿಳಿದ ಜಾಗದಲ್ಲಿ ನೀರಿಗಿಳಿದ ಮಹಿಳೆ ಆತ್ಮಹತ್ಯೆಗೆ ಪ್ರಯತ್ನಿಸಿದರೆನ್ನಲಾಗಿದ್ದು ಮೊಸಳೆಯೂ ಕಚ್ಚಿದೆ ಎನ್ನಲಾಗಿದೆ. ಆದ್ದರಿಂದ ಅವರು ಭಯ ಬಿದ್ದು ರಕ್ಷಣೆಗಾಗಿ ಕಿರುಚಿದ್ದಾರೆ. ರಕ್ಷಣೆಯ ಬಳಿಕ ಮಹಿಳೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದ್ದು ಅಲ್ಲಿಗೆ ಮಹಿಳೆಯ ಮನೆಯವರು ಬಂದು ಕರೆದುಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ .
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.