ಕುಮಾರಸ್ವಾಮಿ ಜನ್ಮದಿನ: ಜೆಡಿಎಸ್ ಮುಖಂಡರಿಂದ ರೈತರಿಗೆ ವಿವಿಧ ಸಸಿ ವಿತರಣೆ

KannadaprabhaNewsNetwork |  
Published : Dec 17, 2024, 12:45 AM IST
16ಕೆಆರ್ ಎಂಎನ್ 2.ಜೆಪಿಜಿರಾಮನಗರದ ಹಳೆ ಬಸ್ ನಿಲ್ದಾಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ಜೆಡಿಎಸ್ ಮುಖಂಡರು ಕೇಕ್ ಕತ್ತರಿಸಿ ರೈತರಿಗೆ ಸಸಿ ವಿತರಣೆ ಮಾಡಿದರು. | Kannada Prabha

ಸಾರಾಂಶ

ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜನ ಮೆಚ್ಚಿದ ನಾಯಕರಾಗಿರುವ ಎಚ್ಡಿಕೆ ಅವರಿಗೆ ಆರೋಗ್ಯ ಭಾಗ್ಯ ಮತ್ತು ಉನ್ನತ ರಾಜಕೀಯ ಹುದ್ದೆಗಳು ಸಿಗಲಿ ಎಂದು ನಗರದ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ 65ನೇ ಹುಟ್ಟುಹಬ್ಬವನ್ನು ರೈತರಿಗೆ ತೆಂಗು, ಅಡಿಕೆ ಮತ್ತು ಮಾವಿನ ಸಸಿಗಳ ವಿತರಣೆಯೊಂದಿಗೆ ರಕ್ತದಾನ ಮಾಡುವ ಮೂಲಕ ಜೆಡಿಎಸ್ ಮುಖಂಡರು ಸರಳವಾಗಿ ಆಚರಣೆ ಮಾಡಿದರು.

ನಗರದ ಹಳೆಯ ಬಸ್ ನಿಲ್ದಾಣದಲ್ಲಿ ಸೋಮವಾರ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಜೆಡಿಎಸ್‌ನ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಕೇಕ್ ಕತ್ತರಿಸಿದರು.

ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಂತೆ ಸರಳವಾಗಿ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜನ ಮೆಚ್ಚಿದ ನಾಯಕರಾಗಿರುವ ಎಚ್ಡಿಕೆ ಅವರಿಗೆ ಆರೋಗ್ಯ ಭಾಗ್ಯ ಮತ್ತು ಉನ್ನತ ರಾಜಕೀಯ ಹುದ್ದೆಗಳು ಸಿಗಲಿ ಎಂದು ನಗರದ ಶಕ್ತಿದೇವತೆ ತಾಯಿ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಇದಕ್ಕೂ ಮುನ್ನ ಕುಮಾರಸ್ವಾಮಿಯವರ ಅಭಿಮಾನಿಗಳು ಮತ್ತು ಮುಖಂಡರು ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾವು, ಅಡಿಕೆ ಹಾಗೂ ತೆಂಗಿನ ಸಸಿಗಳನ್ನು ರೈತರಿಗೆ ವಿತರಣೆ ಮಾಡಿ ತಾಲೂಕು ಜೆಡಿಎಸ್ ಕಚೇರಿಯಲ್ಲಿ ರಕ್ತದಾನ ಮಾಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ನಗರಸಭೆ ಮಾಜಿ ಅಧ್ಯಕ್ಷ ಚಿಕ್ಕವೀರೇಗೌಡ, ಮುಖಂಡರಾದ ಕೆ.ಚಂದ್ರಯ್ಯ, ಬಿ.ಉಮೇಶ್, ಗೌಡಯ್ಯನದೊಡ್ಡಿ ಕೃಷ್ಣ, ಆಡಿಟರ್‌ ಕುಮಾರ್, ಡಾ.ಭರತ್‌ ಕೆಂಪಣ್ಣ, ಲಕ್ಷ್ಮೀಕಾಂತ್, ಮಂಜುನಾಥ್, ಜಯಕುಮಾರ್, ಮೋಹನ್‌ಗೌಡ, ಮಾವಿನಸಸಿ ವೆಂಕಟೇಶ್, ವಾಸುನಾಯ್ಕ, ಮಳವಳ್ಳಿರಾಜು, ಚೇತನ್, ಪ್ರಮೋದ್‌ಗೌಡ, ಗುನ್ನೂರು ದೇವರಾಜು, ರಮೇಶ್, ತುಂಬೇನಹಳ್ಳಿ ಯಕ್ಷರಾಜು, ನರೇಂದ್ರ, ಮೋಹನ್‌ರಾಮ್‌ ಮನ್ನಾರ್, ಕೊತ್ತಿಪುರ ಗೋವಿಂದರಾಜು, ಯೋಗೇಶ್, ಶೋಭಾ. ಆರ್ ಗೌಡ, ಬಾಲಗೇರಿರವಿ, ಗೂಳಿಗೌಡ, ಮಹಾಲಿಂಗ, ಗೌಡಯ್ಯನದೊಡ್ಡಿವಾಸು, ವೆಂಕಟೇಶ್, ಚಿತ್ರಾ, ಜಯಮ್ಮ, ಪೂರ್ಣಿಮಾ, ಗುರುಲಿಂಗಯ್ಯ, ಚಂದ್ರಶೇಖರ್, ಸರಸ್ವತ್ತಮ್ಮ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ