ಕುಂದಾಪುರ: ಐಎಂಜೆ ಕಾಲೇಜಿನ 8 ವಿದ್ಯಾರ್ಥಿಗಳು ಟಿಸಿಎಸ್‌ಗೆ ಆಯ್ಕೆ

KannadaprabhaNewsNetwork |  
Published : May 31, 2025, 01:42 AM IST
28ಐಎಂಜೆ | Kannada Prabha

ಸಾರಾಂಶ

ಎರಡು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿನಿಯರಾದ ನೇತ್ರಾವತಿ ದೇವಾಡಿಗ, ತಸ್ಮಿ ಹೆಗ್ಡೆ, ಕೀರ್ತನ, ಪ್ರತಿಭಾ ಹಾಗು ನಿರೋಷ ಮತ್ತು ವಿದ್ಯಾರ್ಥಿಗಳಾದ ಶ್ರೀವತ್ಸ ಕಾಮತ್, ರಾಘವೇಂದ್ರ ಕುಮಾರ್ ಭಟ್, ಹಾಗು ಶ್ರೀಧರ್ ಭಟ್ ಆಯ್ಕೆಯಾಗಿರುತ್ತಾರೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ಪದವಿ ಕಾಲೇಜಿನಲ್ಲಿ ನಡೆದ ಕ್ಯಾಂಪಸ್ ಆಯ್ಕೆಯಲ್ಲಿ ಅಂತಿಮ ಬಿಸಿಎ ಪದವಿ ಓದುತ್ತಿರುವ ಕಾಲೇಜಿನ ಪ್ರಥಮ ಬ್ಯಾಚಿನ 8 ವಿದ್ಯಾರ್ಥಿಗಳು ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಐ.ಟಿ. ಕಂಪನಿ ಟಿ.ಸಿ.ಎಸ್. ಗೆ ಆಯ್ಕೆಗೊಂಡಿರುತ್ತಾರೆ. ಇತ್ತೀಚೆಗೆ ಎರಡು ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿನಿಯರಾದ ನೇತ್ರಾವತಿ ದೇವಾಡಿಗ, ತಸ್ಮಿ ಹೆಗ್ಡೆ, ಕೀರ್ತನ, ಪ್ರತಿಭಾ ಹಾಗು ನಿರೋಷ ಮತ್ತು ವಿದ್ಯಾರ್ಥಿಗಳಾದ ಶ್ರೀವತ್ಸ ಕಾಮತ್, ರಾಘವೇಂದ್ರ ಕುಮಾರ್ ಭಟ್, ಹಾಗು ಶ್ರೀಧರ್ ಭಟ್ ಆಯ್ಕೆಯಾಗಿರುತ್ತಾರೆ.ಸಂಸ್ಥೆಯು ಪದವಿಯಲ್ಲಿ ಕಲಿಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಕ್ಯಾಂಪಸ್ ಆಯ್ಕೆಗಾಗಿ ವಿಶೇಷವಾದ ತರಬೇತಿ ನೀಡುತ್ತಿದ್ದು, ಪದವಿಯ ಮೊದಲ ಸೆಮಿಸ್ಟರ್ ನಿಂದಲೇ ತರಬೇತಿ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆ, ಭಾಷಾ ಪರಿಣಿತಿ, ಅಣುಕು ಸಂದರ್ಶನ ಹೀಗೆ ಹಲವು ವಿಷಯಗಳಲ್ಲಿ ನುರಿತ ತಜ್ಞರಿಂದ ತರಬೇತಿ ನೀಡಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯ ಸಂದರ್ಶನ ಎದುರಿಸಲು ಸಹಾಯವಾಗುತ್ತಿದೆ. ಈಗಾಗಲೇ ಹಲವು ಕಂಪನಿಗಳಿಗೆ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ.ಸಂಸ್ಥೆಯ ಅಧ್ಯಕ್ಷ ಸಿದ್ಧಾರ್ಥ ಜೆ. ಶೆಟ್ಟಿ ಮತ್ತು ಕಾಲೇಜಿನ ಪ್ರಾಶುಪಾಲೆ ಡಾ. ಪ್ರತಿಭಾ ಎಂ. ಪಟೇಲ್ ಅವರು, ಇದು ವಿದ್ಯಾರ್ಥಿಗಳ ಹಾಗು ಸಂಸ್ಥೆಯ ಅವಿರತ ಪ್ರಯತ್ನಕ್ಕೆ ಸಂದ ಫಲ ಎಂದು ಶ್ಲಾಘಿಸಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಉಪ ಪ್ರಾಂಶುಪಾಲರು ಮತ್ತು ಉದ್ಯೋಗಾಧಿಕಾರಿ ಪ್ರೊ.ಜಯಶೀಲ್ ಕುಮಾರ್ ಮತ್ತು ಸಹಾಯಕ ಉದ್ಯೋಗಾಧಿಕಾರಿ ಪ್ರೊ.ರಾಜೇಶ್ವರಿ ಶೆಟ್ಟಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಸಂಸ್ಥೆಯಲ್ಲಿನ ವಿಭಾಗ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ