ಕುಂದಾಪುರ: ಸಾಹಿತ್ಯ ಮತ್ತು ಸಾಹಿತಿ ಜೀವಪರ ಮತ್ತು ಮನುಜಪರವಾಗಿರಬೇಕು ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ಹೇಳಿದ್ದಾರೆ.
ಸಾಹಿತ್ಯದ ರಚನಾಕಾರನಿಗೆ ಸಮಾಜದ ಪ್ರತಿಯೊಂದು ಸಂಗತಿಗಳ ಕುರಿತು ಸೂಕ್ಷ್ಮತೆ ಇರಬೇಕು. ಬರಹಗಳನ್ನು ಧ್ವನಿಪೂರ್ಣವಾಗಿ ಹೇಳಬಹುದು. ಅವನು ಬರಹಗಾರನಾದವನಿಗೆ ತುರ್ತು ಬದಲಾವಣೆಗಳನ್ನು ಅರಿತುಕೊಂಡು ಸಾಹಿತ್ಯ ರಚಿಸಬೇಕು. ಯಾಕೆಂದರೆ ಕನ್ನಡ ಸಾಹಿತ್ಯಕ್ಕೆ ಶ್ರೇಷ್ಠ ಪರಂಪರೆ ಇದೆ. ಸಾಹಿತ್ಯಿಕ ಉದಾಹರಣೆಗಳನ್ನು ನೀಡಿ ಸಾಹಿತ್ಯ ಪರಂಪರೆ ಎಂದಿಗೂ ಪ್ರಭುತ್ವವನ್ನು ಜತಿಸಲಿಲ್ಲ ಎಂದು ಹೇಳಿದರು.ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು.ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಮ್.ಗೊಂಡ ಉಪಸ್ಥಿತರಿದ್ದರು.ಮಂಜುನಾಥ ಕೆ.ಎಸ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಕನ್ನಡ ಉಪನ್ಯಾಸಕ ಸುಖಾನಂದ ವಂದಿಸಿದರು. ರೇಡಿಯೋ ಕುಂದಾಪ್ರ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.