ಕುಂದಾಪುರ: ಐಎಂಜೆಐಎಸ್‌ಸಿಯಲ್ಲಿ ಛಾಯಾಗ್ರಹಣ ಸಪ್ತಾಹ

KannadaprabhaNewsNetwork |  
Published : Aug 29, 2026, 01:45 AM IST
28ಛಾಯಾ | Kannada Prabha

ಸಾರಾಂಶ

ವಿಶ್ವ ಛಾಯಾಗ್ರಹಣ ಸಪ್ತಾಹದ ಅಂಗವಾಗಿ ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ (ಐಎಂಜೆಐಎಸ್‌ಸಿ) ಛಾಯಾಗ್ರಹಣ ಮತ್ತು ಡಿಜಿಟಲ್ ಕ್ಲಬ್ ವತಿಯಿಂದ ಡಿಜಿಟಲ್ ಮೀಡಿಯಾ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು.

ಕುಂದಾಪುರ: ವಿಶ್ವ ಛಾಯಾಗ್ರಹಣ ಸಪ್ತಾಹದ ಅಂಗವಾಗಿ ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಸಂಸ್ಥೆಯ (ಐಎಂಜೆಐಎಸ್‌ಸಿ) ಛಾಯಾಗ್ರಹಣ ಮತ್ತು ಡಿಜಿಟಲ್ ಕ್ಲಬ್ ವತಿಯಿಂದ ಡಿಜಿಟಲ್ ಮೀಡಿಯಾ ಕುರಿತು ಕಾರ್ಯಾಗಾರ ಆಯೋಜಿಸಲಾಗಿತ್ತು.

ಈ ಕಾರ್ಯಾಗಾರವನ್ನು ಇಯೋರ್ ಟೆಕ್ ಸಂಸ್ಥೆಯ ಸಂಸ್ಥಾಪಕ ಅನೀಶ್ ಪುತ್ರನ್ ಅವರು ನಡೆಸಿಕೊಟ್ಟರು. ಅವರು ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಕಲಿಕೆಯನ್ನೊಳಗೊಂಡ ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಫೋಟೋಶಾಪ್, ಫೋಟೋ ಎಡಿಟಿಂಗ್ ಮತ್ತು ಡಿಜಿಟಲ್ ಕಂಟೆಂಟ್ ಕ್ರಿಯೇಷನ್‌ನ ಮೂಲ ಕೌಶಲ್ಯಗಳನ್ನು ಪರಿಚಯಿಸಿದರು. ಇಂದಿನ ಸೃಜನಶೀಲ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಡಿಜಿಟಲ್ ಮೀಡಿಯಾ ಕೌಶಲ್ಯಗಳ ಬೆಳೆಯುತ್ತಿರುವ ಮಹತ್ವವನ್ನು ಒತ್ತಿ ಹೇಳಿದರು.

ಕಾರ್ಯಕ್ರಮವನ್ನು ಸಿಬ್ಬಂದಿ ಸಂಯೋಜಕ ಜಿತೇಶ್ ಕುಮಾರ್ ಎ.ಎಚ್. ಹಾಗೂ ವಿದ್ಯಾರ್ಥಿ ಸಂಯೋಜಕ ತೃತೀಯ ಬಿಸಿಎ ವಿದ್ಯಾರ್ಥಿ ರಾಹಿಲ್ ಮತ್ತು ತೃತೀಯ ಬಿಕಾಂ ವಿದ್ಯಾರ್ಥಿನಿ ಸಾನಿಯಾ ಆಯೋಜಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

2028ರಲ್ಲಿ ಉಡುಪಿಯಲ್ಲಿ ವಿಶ್ವ ತುಳುವ ಮಹಾಸಭೆ
ಪತ್ರಕರ್ತರ ಮೇಲೆ ಹಲ್ಲೆ ಖಂಡನೀಯ: ಸುಧೀರ್‌ ಕುಮಾರ್‌