ದುಗ್ಗಳ ಸದಾನಂದ
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಭಾನುವಾರದ ಪಂದ್ಯಗಳಲ್ಲಿ ಒಂಬತ್ತು ತಂಡಗಳು ಮುನ್ನಡೆ ಸಾಧಿಸಿದವು. ಚೆಕ್ಕೆರ, ಪುದಿಯೋಕ್ಕಡ, ಚೇಂದಂಡ, ಕುಲ್ಲೇಟಿರ, ಐನಂಡ, ಕರಿನೆರವಂಡ, ಚೆಪ್ಪುಡಿರ, ಬೊವ್ವೇರಿಯಂಡ ಹಾಗೂ ಐ ಚೆಟ್ಟಿರ ತಂಡಗಳು ಗೆಲುವು ಸಾಧಿಸಿದವು.
ಚೆಪ್ಪುಡಿರ ತಂಡವು ಬಾಳೆಯಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು ಸಾಧಿಸಿತು. ಚೇನಂಡ ಮತ್ತು ಮತ್ತು ಚೆಕ್ಕೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲ ಸಾಧಿಸಿದವು. ನಂತರ ನಡೆದ ಟೈಬ್ರೇಕರಿನಲ್ಲಿ ಚೆಕ್ಕೆರ ತಂಡವು 2-0 ಅಂತರದಿಂದ ಚೇರಂಡ ವಿರುದ್ಧ ಗೆಲುವು ಸಾಧಿಸಿತು. ಕಂಬೀರಂಡ ಮತ್ತು ಚೇಂದಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆಂದಂಡ 2-1 ಅಂತರದ ಮುನ್ನಡೆ ಸಾಧಿಸಿತು. ಕುಲ್ಲೇಟಿರ ಮತ್ತು ಕೊಕ್ಕಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಲ್ಲೇಟಿರ 5-2 ಅಂತರದಿಂದ ಮುಂದಿನ ಸುತ್ತು ಪ್ರವೇಶಿಸಿತು.ಮಂಡೆಪಂಡ ಮತ್ತು ಐನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಐನಂಡ 3-2 ಅಂತರದಿಂದ ಗೆಲವು ಸಾಧಿಸಿತು. ಚೋಯಮಾದಂಡ ಮತ್ತು ಕರಿನೆರವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರಿನೆರವಂಡ 3-0 ಅಂತರದ ಗೆಲವು ಸಾಧಿಸಿತು. ಬೋವ್ವೇರಿಯಂಡ ಚೇಂದಿರ ವಿರುದ್ಧ 2-1 ಅಂತರದಿಂದ ಮುನ್ನಡೆ ಸಾಧಿಸಿದರೆ ಐಚೆಟ್ಟಿರ ಕೇಲೇಟಿರ ವಿರುದ್ಧ 1-0 ಅಂತರದ ಜಯಗಳಿಸಿತು.
ಇಂದಿನ ಪಂದ್ಯಗಳು: ಮೈದಾನ 1: 9.30ಕ್ಕೆ ಅರೆಯಡ-ನೆಲ್ಲಮಕ್ಕಡ, 10.30ಕ್ಕೆ ಪೆಮ್ಮಂಡ-ಅಂಜಪರವಂಡ, 1ಕ್ಕೆ ಬೊಳ್ಳಂಡ-ಕೂತಂಡ, 2 ಕ್ಕೆ ಕುಪ್ಪಂಡ(ಕೈಕೇರಿ)-ನಾಪಂಡಮೈದಾನ 2: 9.30 ಕ್ಕೆ ಅಮ್ಮಣಿಚಂಡ-ಮುಕ್ಕಾಟಿರ(ಬೋಂದ), 10.30 ಕ್ಕೆ ಮೇಚಿಯಂಡ-ನೆರವಂಡ, 1ಕ್ಕೆ ಕಲಿಯಂಡ-ಮಾತ್ರಂಡ
27ರಂದು ವಿಶಿಷ್ಟ ಸ್ಪರ್ಧೆ ಆಯೋಜನೆ: ನಾಪೋಕ್ಲು:ಕುಂಡ್ಯೋಳಂಡ ಹಾಕಿ ಉತ್ಸವದ ಅಂಗವಾಗಿ ಶನಿವಾರ ಏಪ್ರಿಲ್ 27 ರಂದು ಕೊಡವ ಪುರುಷರಿಗೆ ಕೊಂಬ ಮೀಸೆರ ಬಂಬ ಹಾಗೂ ಕೊಡವ ಯುವತಿಯರಿಗೆ ಬೋಜಿ ಜಡೆರ ಬೋಜಕ್ಕ ಎಂಬ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಪಾಲ್ಗೊಳ್ಳುವಂತೆ ಕುಂಡ್ಯೋಳಂಡ ಹಾಕಿ ಉತ್ಸವದ ಆಯೋಜಕರು ಕೋರಿದ್ದಾರೆ.