ಇಂದು, ನಾಳೆ ಕುರುಗೋಡು ಉತ್ಸವ

KannadaprabhaNewsNetwork |  
Published : Feb 16, 2026, 02:30 AM IST
ಕುರುಗೋಡು 02 ಪಟ್ಟಣದ ಉತ್ಸವದ ಅಂಗವಾಗಿ  ಎತ್ತಿನಬಂಡಿ ಪ್ರದರ್ಶನದಲಿ ಆಯೋಜಿಸಿದ್ದ  | Kannada Prabha

ಸಾರಾಂಶ

ಮೊದಲ ದಿನದ ಬೆಳಗಿನಜಾವ ಮ್ಯಾರಥಾನ್ ಓಟದಲ್ಲಿ ೩೦೦ ಮಂದಿ, ರಂಗೋಲಿ ಉತ್ಸವ ೧೨೧ ಮಂದಿ ಹಾಗೂ ಎತ್ತಿನಬಂಡಿ ಪ್ರದರ್ಶನದಲ್ಲಿ ೭೦ ಜೋಡಿ ಭಾಗವಹಿಸಿದ್ದವು.

ಕುರುಗೋಡು: ತಾಲೂಕು ಘೋಷಣೆ ಬಳಿಕ ಇದೇ ಮೊದಲ ಬಾರಿಗೆ ಫೆ.16, 17ರಂದು ಕುರುಗೋಡು ಉತ್ಸವ ನಡೆಯಲಿದೆ.

ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಮೊದಲ ದಿನದ ಬೆಳಗಿನಜಾವ ಮ್ಯಾರಥಾನ್ ಓಟದಲ್ಲಿ ೩೦೦ ಮಂದಿ, ರಂಗೋಲಿ ಉತ್ಸವ ೧೨೧ ಮಂದಿ ಹಾಗೂ ಎತ್ತಿನಬಂಡಿ ಪ್ರದರ್ಶನದಲ್ಲಿ ೭೦ ಜೋಡಿ ಭಾಗವಹಿಸಿದ್ದವು. ಉಳಿದಂತೆ ಕೆಸರುಗದ್ದೆ ಓಟ, ಹಗ್ಗ ಜಗ್ಗಾಟ, ಚಿತ್ರಕಲೆ ಪ್ರದರ್ಶನ ವಿವಿಧ ತಂಡಗಳು ಭಾಗವಹಿಸಿದ್ದವು. ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ೧೫ ಪುರುಷರ ತಂಡ ಮತ್ತು ೫ ಮಹಿಳೆಯರ ತಂಡ ಸೇರಿ ಒಟ್ಟು ೨೦ ತಂಡಗಳು ಭಾಗವಹಿಸಿದ್ದವು.

ತಾಲೂಕಿನ ವಿವಿಧ ಗ್ರಾಮಗಳಿಂದ ಭಾಗವಹಿಸಿದ್ದ ೯೫ ಮಹಿಳೆಯರು ಕೈಗಳ ಮೇಲೆ ಚಿತ್ತಾಕರ್ಷಕ ಮೆಹಂದಿ ಚಿತ್ರ ಬಿಡಿಸುವ ಮೂಲಕ ನೋಡುಗರ ಮನಸೂರೆಗೊಂಡರು.

ರಾರಾಜಿಸಿದ ಬ್ಯಾನರ್ ಬಂಟಿಂಗ್ಸ್: ಬಳ್ಳಾರಿ ಗಲಾಟೆ ಬಳಿಕ ಅನಧಿಕೃತ ಬ್ಯಾನರ್ ಸಂಸ್ಕೃತಿಗೆ ಜಿಲ್ಲಾಧಿಕಾರಿ ಆದೇಶ ಕಡಿವಾಣ ಹಾಕಿತ್ತು. ಆದರೆ ಪುರಸಭೆ ಅನುಮತಿ ಮೇರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಾಸಕ ಗಣೇಶ್ ಭಾವಚಿತ್ರ ಇರುವ ಬ್ಯಾನರ್ ಬಂಟಿಂಗ್ಸ್ ೨೦ ಹಾಕಿರುವುದು ಕಂಡು ಬಂತು.

ಶಾಸಕ ಜೆ.ಎನ್.ಗಣೇಶ್, ತಹಶೀಲ್ದಾರ್ ನರಸಪ್ಪ, ಪುರಸಭೆ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸಿಪಿಐ ವಿಶ್ವನಾಥ ಹಿರೇಗೌಡರ್, ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಪಿಎಸ್‌ಐ ಸುಪ್ರಿತ್, ಇಒ ಕೆ.ವಿ. ನಿರ್ಮಲಾ, ಬಿಇಒ ಸಿದ್ದಲಿಂಗ ಮೂರ್ತಿ, ಸಿಡಿಪಿಒ ಮೋಹನಕುಮಾರಿ, ಎಸಿಡಿಪಿಒ ನಂದಿನಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕಲಿಕೆ ಪ್ರದರ್ಶನಕ್ಕೆ ಕಲಿಕಾ ಹಬ್ಬ ವೇದಿಕೆ: ಬಿಇಒ ನಾಣಿಕಿ ನಾಯ್ಕ
ಹಂಪಿ ಉತ್ಸವದಲ್ಲಿ ರಕ್ತರಾತ್ರಿ ನಾಟಕ ಪ್ರದರ್ಶನ