ಕನ್ನಡಪ್ರಭ ವಾರ್ತೆ ಕಾರವಾರ
ಗ್ರಾಪಂ ಅಧ್ಯಕ್ಷ ಆನಂದು ಆರ್.ನಾಯ್ಕ ಹಾಗೂ ಸರ್ವ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು, ನಿರಾಕ್ಷೇಪಣಾ ಪತ್ರ ನೀಡುವ ಮೂಲಕ ರಸ್ತೆ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದರು. ಈ ಹಿನ್ನೆಲೆ ಕೃತಜ್ಞತಾ ಪೂರ್ವಕವಾಗಿ ಮಧೆವಾಡಾ ನಿವಾಸಿಗಳು ಗ್ರಾಪಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.
ಶಾಸಕರ ಅನುದಾನದಡಿ ₹40 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಈ ರಸ್ತೆ ಕಾಮಗಾರಿ ಇದೀಗ ಮುಕ್ತಾಯದ ಹಂತ ತಲುಪಿದೆ. ಕಾಮಗಾರಿ ಪೂರ್ಣಗೊಂಡ ನಂತರ ಶಾಸಕರಿಂದ ಉದ್ಘಾಟನೆ ನೆರವೇರಿಸಲಾಗುವುದು. ಇದೇ ವೇಳೆ ರಸ್ತೆಗಾಗಿ ತಮ್ಮ ಅಮೂಲ್ಯ ಜಮೀನು ಬಿಟ್ಟುಕೊಟ್ಟ ದಾನಿಗಳನ್ನು ಸನ್ಮಾನಿಸಿ, ರಸ್ತೆಯ ನಾಮಫಲಕವನ್ನು ಅನಾವರಣಗೊಳಿಸಲಾಗುವುದು ಎಂದು ಸ್ಥಳೀಯ ನಾಗರಿಕರು ತಿಳಿಸಿದ್ದಾರೆ.ಗ್ರಾಪಂ ಅಧ್ಯಕ್ಷ ಆನಂದು ಆರ್. ನಾಯ್ಕ, ಸದಸ್ಯರಾದ ಸುಧೀರ ಸಾಳಸ್ಕರ, ಕಿಶೋರ ಕಡವಾಡಕರ, ಸಾಧನಾ ಆಮ್ಲೇಕರ, ಪಲ್ಲವಿ ಹುಲಸ್ವಾರ ಹಾಗೂ ಪ್ರಿಯಾಂಕಾ ತಳೇಕರ ಅವರನ್ನು ಮಧೆವಾಡಾ ನಾಗರಿಕರು ಆತ್ಮೀಯವಾಗಿ ಸನ್ಮಾನಿಸಿದರು.
ಅಲ್ಲದೆ ಪಂಚಾಯಿತಿ ಪಿಡಿಒ ಸಂತೋಷಿ ಬಂಟ, ಸಿಬ್ಬಂದಿ ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು.