ಬಾದನಹಟ್ಟಿ ಪಂಪನಗೌಡ
ಇದರಿಂದಾಗಿ ಆರಂಭದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ ಆ ಸಂಖ್ಯೆ 106ಕ್ಕೆ ಕುಸಿದಿದೆ. ಮೂವರು ಖಾಯಂ, ಮೂವರು ಅತಿಥಿ ಶಿಕ್ಷಕರಿದ್ದು, ಕನ್ನಡ ಮತ್ತು ಸಮಾಜದ ವಿಷಯಗಳಿಗೆ ಶಿಕ್ಷರಿಲ್ಲದಾಗಿದೆ.
ಶಾಲೆ ಗ್ರಾಮದಿಂದ 3 ಕಿ.ಮೀ. ದೂರವಿದೆ. ಸಾರಿಗೆ ವ್ಯವಸ್ಥೆ ಇಲ್ಲವಾಗಿದ್ದು, ವಿದ್ಯಾರ್ಥಿಗಳು ನಡೆದುಕೊಂಡೇ ಬರಬೇಕಿದೆ. ಒಂದೇ ಶೌಚಾಲಯ ಇರುವುದರಿಂದ ವಿದ್ಯಾರ್ಥಿಗಳು ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ. ಇದಲ್ಲದೇ ಶಾಲೆಗೆ ಕಾಂಪೌಂಡ್ ವ್ಯವಸ್ಥೆ ಇಲ್ಲ. ಆವರಣದಲ್ಲಿ ಗಿಡಗಂಟಿ ಬೆಳೆದಿದ್ದು, ಹಾವು-ಚೇಳುಗಳ ತಾಣವಾಗಿದೆ. ಸ್ವಚ್ಛತೆ ಮರೀಚಿಕೆಯಾಗಿದೆ. ಮಕ್ಕಳ ಜೀವಕ್ಕೆ ಸಂಚಕಾರ ಎದುರಾಗಿದೆ. ಇದರಿಂದಾಗಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಳೆಯಾದಾಗ ಶಾಲೆಯ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಡುತ್ತದೆ. ಇದರಿಂದಾಗಿ ಸಂಚರಿಸಲು ಬಾರದಂತಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ತೆರಳುವ ಶಿಕ್ಷಕರು ಅದೆಷ್ಟೋ ಬಾರಿ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಇಸ್ಕಾನ್‌ನಿಂದ ಬರುವ ವಾಹನ ಶಾಲೆ ಒಳ ಹೋಗದ ಪರಿಣಾಮ ಮಕ್ಕಳೇ ಮುಖ್ಯ ರಸ್ತೆಯಿಂದ ಊಟದ ಪಾತ್ರೆಗಳನ್ನು ಹೊತ್ತು ತರಬೇಕಿದೆ.
ನಾಲ್ಕು ವರ್ಷಗಳ ಹಿಂದೆ ಸಿದ್ದಮ್ಮಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಗ್ರಾಮ ವಾಸ್ತವ್ಯ ನಡೆದಿತ್ತು. ಆಗ ಮಕ್ಕಳು ಮತ್ತು ಪಾಲಕರು ಶಾಲೆ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದರು. ಅಲ್ಲಿದ್ದ ಸಾರಿಗೆ, ಶಿಕ್ಷಣ ಇಲಾಖೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಹಸೀಲ್ದಾರ್ ಸೂಚನೆ ನೀಡಿದ್ದರು. ಆಗ ಶೀಘ್ರದಲ್ಲೇ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದರು. ಆದರೆ ನಾಲ್ಕು ವರ್ಷ ಆದರೂ ಯಾರೊಬ್ಬ ಅಧಿಕಾರಗಳು ಶಾಲೆಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿಲ್ಲ. ಗ್ರಾಮ ವಾಸ್ತವ್ಯ ಭರವಸೆಗೆ ಅಷ್ಟೆ ಸೀಮಿತವಾಗಿದೆ ಎಂಬುವುದು ಗ್ರಾಮಸ್ಥರ ಆರೋಪವಾಗಿದೆ
ಶಾಲೆಗೆ ಸೂಕ್ತವಾದ ಕಾಂಪೌಂಡ್ ವ್ಯವಸ್ಥೆ ಇಲ್ಲ. ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನಡೆದುಕೊಂಡು ಬರಬೇಕಿದೆ. ಈಗಲಾದರೂ ಕ್ಷೇತ್ರದ ಶಾಸಕರು ಇತ್ತಕಡೆ ವಿದ್ಯಾಭ್ಯಾಸಕ್ಕೆ ಆಸರೆಯಾಬೇಕಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.