ಮಹಿಳಾ ಕಲಾವಿದರಿಂದ ಕುರುಕ್ಷೇತ್ರ ನಾಟಕ ಪ್ರದರ್ಶನ

KannadaprabhaNewsNetwork | Published : Dec 2, 2024 1:15 AM

ಸಾರಾಂಶ

ಕಾವೇರಿ ಸಾಂಸ್ಕೃತಿಕ ಮಹಿಳಾ ಕಲಾ ಸಂಘ ಮಾರಗೌಡನಹಳ್ಳಿ ವತಿಯಿಂದ ನಂಜುಂಡೇಶ್ವರ ಡ್ರಾಮಸೀನ್ಸ್‌ರ ದಿಂಡಗೂರು ಮೀನ್‌ರಾಜಣ್ಣರವರ ಸೀನರಿಯಲ್ಲಿ ನಡೆದ ಕುರುಕ್ಷೇತ್ರ ಅಥವಾ ಗದಾಯುದ್ಧ ಎಂಬ ಮಹಿಳಾ ಕಲಾವಿದರು ಅಭಿನಯಿಸಿರುವ ಪೌರಾಣಿಕ ನಾಟಕದ ಉದ್ಘಾಟನೆಯನ್ನು ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿರವರ ಪತ್ನಿ ಕಾಂಗ್ರೆಸ್ ಮುಖಂಡರಾದ ಗೀತಾ ಗೋಪಾಲಸ್ವಾಮಿ ತಿಳಿಸಿದರು. ಮಹಿಳೆಗೆ ಯಾವಾಗ ವಂಚನೆಗಳು ನಡೆಯುತ್ತವೋ ಆಗ ದೇವರು ಎಂದೂ ಕೈಬಿಡುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಮಹಿಳಾ ನಾಟಕೋತ್ಸವಗಳು ನಡೆಯಲಿ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಮೇಲುಗೈ ಸಾಧಿಸುತ್ತಿದ್ದು, ನಾಟಕಗಳಲ್ಲೂ ಎಲ್ಲಾ ಪತ್ರಕ್ಕೂ ಮಹಿಳೆಯರು ಸೈ ಎನಿಸಿ ತಾಲೂಕಿನಲ್ಲಿ ಪ್ರಥಮ ಮಹಿಳಾ ನಾಟಕೋತ್ಸವ ನಡೆಯುತ್ತಿರುವುದು ತಾಲೂಕಿಗೆ ಹೆಮ್ಮೆಯ ವಿಚಾರ ಎಂದು ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿರವರ ಪತ್ನಿ ಕಾಂಗ್ರೆಸ್ ಮುಖಂಡರಾದ ಗೀತಾ ಗೋಪಾಲಸ್ವಾಮಿ ತಿಳಿಸಿದರು.

ಅವರು ಕಾವೇರಿ ಸಾಂಸ್ಕೃತಿಕ ಮಹಿಳಾ ಕಲಾ ಸಂಘ ಮಾರಗೌಡನಹಳ್ಳಿ ವತಿಯಿಂದ ನಂಜುಂಡೇಶ್ವರ ಡ್ರಾಮಸೀನ್ಸ್‌ರ ದಿಂಡಗೂರು ಮೀನ್‌ರಾಜಣ್ಣರವರ ಸೀನರಿಯಲ್ಲಿ ನಡೆದ ಕುರುಕ್ಷೇತ್ರ ಅಥವಾ ಗದಾಯುದ್ಧ ಎಂಬ ಮಹಿಳಾ ಕಲಾವಿದರು ಅಭಿನಯಿಸಿರುವ ಪೌರಾಣಿಕ ನಾಟಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ಮಹಿಳೆಯರು ಇಲ್ಲದೆ ಇರುವ ಕ್ಷೇತ್ರ ಯಾವುದೂ ಇಲ್ಲ ಮನೆಯಲ್ಲಿ ಹೇಗೆ ಕುಟುಂಬವನ್ನು ನಿಭಾಯಿಸುತ್ತಾಳೋ ಅದೇ ರೀತಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸುವ ಸಾಮರ್ಥ್ಯವನ್ನು ಹೊಂದಿದ್ದಾಳೆ, ರಾಜಕೀಯ, ನೌಕರಿ, ವಾಹನ ಚಾಲನೆ ಹೀಗೆ ಅನೇಕ ಕ್ಷೇತ್ರಗಳಲ್ಲೂ ಸಹ ಮಹಿಳೆಯರಿದ್ದು ನಾಟಕ ರಂಗಕ್ಕೂ ಪ್ರವೇಶ ಪಡೆದಿರುವುದು ಸ್ವಾಗತಾರ್ಹ. ದ್ರೌಪದಿಯ ಸ್ವಾಭಿಮಾನಕ್ಕೆ ತಕ್ಕೆ ಬಂದಾಗ ಇಡೀ ಕುರುಕ್ಷೇತ್ರವೇ ನಡೆದು ಹೋಯಿತು ಅದರಂತೆ ಮಹಿಳೆಗೆ ಯಾವಾಗ ವಂಚನೆಗಳು ನಡೆಯುತ್ತವೋ ಆಗ ದೇವರು ಎಂದೂ ಕೈಬಿಡುವುದಿಲ್ಲ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಮಹಿಳಾ ನಾಟಕೋತ್ಸವಗಳು ನಡೆಯಲಿ ನಮ್ಮ ಸಹಕಾರ ಸದಾ ಇರುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕುಸುಮ ಬಾಲಕೃಷ್ಣ ವಹಿಸಿದ್ದು, ರಂಗಕಲಾ ಸಿರಿ ಸಂಘದ ಅಧ್ಯಕ್ಷ ನಾಗೇಗೌಡ ಜಿ.ಹೊಸೂರು ಮತ್ತು ಶ್ರೀಕೃಷ್ಣ ಭಕ್ತ ಕರಿಗೌಡಬನವಾಸೆ ಇವರ ಆಯೋಜನೆಯಲ್ಲಿ ನಾಟಕ ಜರುಗಿತು.

ಕಾರ್ಯಕ್ರಮದಲ್ಲಿ ಮಹಿಳಾ ರೈತ ಸಂಘದ ತಾಲೂಕು ಅಧ್ಯಕ್ಷೆ ಪ್ರೇಮಮ್ಮ, ತಾಲೂಕು ಅಧ್ಯಕ್ಷ ಸೊಪ್ಪಿನಹಳ್ಳಿ ಶಿವಣ್ಣ, ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪುರಸ್ಕೃತೆ ಯಶೋಧ ಜೈನ್, ಸಾವಿತ್ರಿ ಶೆಟ್ಟಿಹಳ್ಳಿ, ದ್ರಾಕ್ಷಾಯಿಣಿ, ಭುವನ ರಮೇಶ್, ಸವಿತಾ ಕುಮಾರ್, ಕುಶಲಮತಿ, ಸುಜಾತ, ಕಾಂತಮಣಿ, ಉಮಾರಾಮ ಮತ್ತಿತರಿದ್ದರು.

Share this article