ಕನ್ನಡಪ್ರಭ ವಾರ್ತೆ ಕುಶಾಲನಗರ
ಪಟ್ಟಣದ ನೆಹರು ಬಡಾವಣೆಯ ದೇವಾಲಯದಲ್ಲಿ ಅರ್ಚಕರಾದ ಪ್ರಕಾಶ್ ಭಟ್ ನೇತೃತ್ವದಲ್ಲಿ ಬೆಳಗ್ಗೆ ಕಳಶ ಸ್ಥಾಪನೆ, ಶುದ್ಧಿ ಪುಣ್ಯಾಹ, ಗಣಪತಿ ಪೂಜೆ, ನವಗ್ರಹ ಪೂಜೆ ಹೋಮ ನಂತರ ಕುಶಾಲನಗರ ದೇವಾಲಯಗಳ ಒಕ್ಕೂಟ ಸಮಿತಿಯ ಪ್ರತಿನಿಧಿಗಳಿಂದ ದೇವರಿಗೆ ಫಲತಾಂಬೂಲ ಅರ್ಪಣೆ ಮತ್ತು ಸಾಮೂಹಿಕ ಪೂಜೆ ನಂತರ ಮಹಾಮಂಗಳಾರತಿ ನಡೆಯಿತು.
ಸಂಜೆ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಶನಿವಾರ ಬೆಳಗ್ಗೆ 9 ಗಂಟೆಯಿಂದ ಶ್ರೀ ಬಲಮುರಿ ಸಿದ್ಧಿವಿನಾಯಕ ಸ್ವಾಮಿಯ ಪೂಜಾ ಮಹೋತ್ಸವ ಕಾರ್ಯಕ್ರಮ ಅಂಗವಾಗಿ ಗಣಪತಿ ಹೋಮ ಸ್ವಾಮಿಗೆ ಪಂಚಾಮೃತ ಅಭಿಷೇಕ ನಂತರ ಮಹಾಮಂಗಳಾರತಿ ಭಕ್ತಾದಿಗಳಿಗೆ ಅನ್ನಪ್ರಸಾದ ವಿನಿಯೋಗ ನಡೆಯಲಿದೆ.
ಸಂಜೆ 7 ಗಂಟೆಗೆ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಯಲಿದೆ. ದೇವಸ್ಥಾನ ಸೇವಾ ಟ್ರಸ್ಟ್ ಕಾರ್ಯದರ್ಶಿ ಕೆ ವಿ ಅರುಣ, ಉಪಾಧ್ಯಕ್ಷ ಜಿ ಶಿವರಾಮನ್, ಖಜಾಂಚಿ ಬಿ ಸಿ ಆನಂದ್, ಪುರಸಭೆ ಸದಸ್ಯರಾದ ಜಯಲಕ್ಷ್ಮಿ ಜಿ ಬಿ ಜಗದೀಶ್ ಮತ್ತು ದೇವಾಲಯದ ಆಡಳಿತ ಮಂಡಳಿ ನಿರ್ದೇಶಕರು ಇದ್ದರು.