- ಸರ್ಕಾರಿ ಕಾಲೇಜಿನಲ್ಲಿ ನಡೆದ ಕಾರ್ಯಾಗಾರ ಉದ್ಘಾಟಿಸಿ ಡಾ. ಗಿರೀಶ್ ವೈ.ಎಂ.

- - -

ಕನ್ನಡಪ್ರಭ ವಾರ್ತೆ ಹರಿಹರ

ಶೈಕ್ಷಣಿಕ ಜ್ಞಾನಕ್ಕೆ ಪೂರಕವಾಗಿ ಪ್ರಸ್ತುತ ಜಗತ್ತಿನ ಸವಾಲುಗಳನ್ನು ಮೆಟ್ಟಿ ನಿಲ್ಲಲು ಹಾಗೂ ಭವಿಷ್ಯದ ವೃತ್ತಿಜೀವನದ ಬೆಳವಣಿಗೆಗೆ ವಿದ್ಯಾರ್ಥಿಗಳು ಕೌಶಲ್ಯಯುತ ಶಿಕ್ಷಣ ಹೊಂದಬೇಕು ಎಂದು ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಗಿರೀಶ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕರಿಯರ್ ಗೈಡನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್, ಐಕ್ಯೂಎಸಿ ಹಾಗೂ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ ಸಹಯೋಗದಲ್ಲಿ ಶೈಕ್ಷಣಿಕ, ಸಾಮಾಜಿಕ, ಜವಾಬ್ದಾರಿ ಕಾರ್ಯದ ಹಿನ್ನೆಲೆಯಲ್ಲಿ ‘ನಿರ್ವಹಣಾ ಪ್ರತಿಭೆಯನ್ನು ಪರಿಷ್ಕರಿಸಲು ಕೌಶಲ್ಯದ ಅಗತ್ಯತೆ’ ವಿಷಯದ ಕುರಿತ ಕಾರ್ಯಾಗಾರ ಉದ್ಘಾಟಿಸಿ, ಅವರು ಮಾತನಾಡಿದರು.


ಔದ್ಯೋಗಿಕವಾಗಿ ಬೆಳೆಯಬೇಕಾದರೆ, ನಿರ್ವಹಣಾ ಪ್ರತಿಭೆ ಪರಿಷ್ಕರಿಸಲು ಸಂಸ್ಥೆಗಳು ಭಾವನಾತ್ಮಕ ಬುದ್ಧಿವಂತಿಕೆ, ಪರಿಣಾಮಕಾರಿ ಸಂವಹನ, ಕಾರ್ಯತಂತ್ರದ ಚಿಂತನೆ, ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಹೊಂದಿಕೊಳ್ಳುವಿಕೆ ಸೇರಿದಂತೆ ಪ್ರಮುಖ ಕೌಶಲ್ಯಗಳನ್ನು ಬೇಡುತ್ತವೆ. ಇವುಗಳನ್ನು ಅಭಿವೃದ್ಧಿಪಡಿಸಲು ನಾಯಕತ್ವ, ನಿಯೋಗ ಮತ್ತು ತರಬೇತಿಯ ಮೇಲೆ ಗಮನಹರಿಸಬೇಕು. ಜೊತೆಗೆ ಮಾರ್ಗದರ್ಶನ ಮತ್ತು ಕ್ರಿಯಾತ್ಮಕ ಅನುಭವದ ಸಂಸ್ಕೃತಿ ಬೆಳೆಸಿಕೊಳ್ಳುವ ಅಗತ್ಯತೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಭವಿಷ್ಯವನ್ನು ಉತ್ತಮಗೊಳಿಸಿಕೊಳ್ಳಬೇಕು. ಆ ಮೂಲಕ ಶಿಕ್ಷಣವನ್ನು ಉಪಯುಕ್ತ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಗೌರಮ್ಮ ಎಂ.ಎಸ್., ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಡಾ.ಲಕ್ಷ್ಮಣ ನಾಯ್ಕ ಆರ್. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಷ್ಲೇಶಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉದ್ಯೋಗ ಕೋಶದ ಸಂಚಾಲಕ ಡಾ.ಬಾಬು ಕೆ.ಎ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಶರಣು ಬಸವರಾಜ್ ಬಿ. ಪಾಟೀಲ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

- - -

-23HRR. 01 &01A:

ಕಾರ್ಯಾಗಾರದಲ್ಲಿ ಕಿರ್ಲೋಸ್ಕರ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಪ್ರಾಂಶುಪಾಲ ಡಾ.ಗಿರೀಶ್ ಮಾತನಾಡಿದರು.