ಕುಶಾಲನಗರ: ಕುಶಾಲನಗರ ಕೊಪ್ಪ ಗಡಿ ಭಾಗದಲ್ಲಿ ಐತಿಹಾಸಿಕ ಸೇತುವೆ ಮೇಲೆ ನಿರ್ಮಾಣಗೊಂಡ ಕಾವೇರಿ ರೋಟರಿ ಉದ್ಯಾನವನ್ನು ಜಿಲ್ಲಾಧಿಕಾರಿ ಎಸ್ ಜೆ ಸೋಮಶೇಖರ್ ವೀಕ್ಷಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು ಕುಶಾಲನಗರ ಮಡಿಕೇರಿ ರಸ್ತೆಯ ಬದಿಯಲ್ಲಿರುವ ತಾವರೆಕೆರೆಯ ಅಭಿವೃದ್ಧಿಗೆ ಸದ್ಯದಲ್ಲಿಯೇ ಕಾಯಕಲ್ಪ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕುಶಾಲನಗರದಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪಟ್ಟಣದ ಒಳಚರಂಡಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದೆಂದು ತಿಳಿಸಿದರು. ತಹಸೀಲ್ದಾರ್ ಕೃಷ್ಣಮೂರ್ತಿ, ಕುಶಲನಗರ ಪುರಸಭೆ ಮುಖ್ಯ ಅಧಿಕಾರಿ ಟಿ ಎಸ್ ಗಿರೀಶ್, ತಾಲೂಕು ಕಚೇರಿ ಅಧಿಕಾರಿ ಸಂತೋಷ್, ರೋಟರಿ ನಿರ್ಗಮಿತ ಅಧ್ಯಕ್ಷ ಮನು ಪೆಮ್ಮಯ್ಯ, ನಿರ್ಗಮಿತ ಕಾರ್ಯದರ್ಶಿ ಮಂಜುನಾಥ್, ರೋಟರಿ ಪ್ರಮುಖರಾದ ಎಸ್ ಕೆ ಸತೀಶ್ ಎಂ ಡಿ ರಂಗಸ್ವಾಮಿ, ಕ್ರೆಜ್ವಲ್ ಕೋಟ್ಸ್ ಇದ್ದರು.