ಕನ್ನಡಪ್ರಭ ವಾರ್ತೆ ಕುಶಾಲನಗರ
ಪಂಚಾಯಿತಿಯ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೂಗುಚ್ಛಗಳನ್ನು ನೀಡುವ ಮೂಲಕ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಗೆ ಶುಭ ಕೋರಿದರು.
ಇದೇ ಸಂದರ್ಭ ಕಾಂಗ್ರೆಸ್ ಮುಖಂಡರು ಕೂಡ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಹೂ ಗುಚ್ಚ ನೀಡಿ ಶುಭ ಕೋರಿದರು.ಈ ಸಂದರ್ಭ ನೂತನ ಚುನಾಯಿತ ಆಡಳಿತ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಅನೇಕ ಸವಾಲುಗಳ ನಡುವೆ ಕಾಂಗ್ರೆಸ್ ಪಕ್ಷ ಪಟ್ಟಣದ ಆಡಳಿತದ ಗದ್ದುಗೆ ಹಿಡಿದಿದೆ.
ಸಾರ್ವಜನಿಕರನ್ನು ಕಚೇರಿಯಲ್ಲಿ ಸತಾಯಿಸದೇ ಸಕಾಲದಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕಿದೆ.ಪಂಚಾಯಿತಿಗೆ ಹೊಸದಾಗಿ ಸೇರಿರುವ ಮುಳ್ಳುಸೋಗೆ ವ್ಯಾಪ್ತಿಯ ಪ್ರದೇಶಗಳ ಅಭಿವೃದ್ಧಿಗೆ ಚುನಾಯಿತ ಆಡಳಿತ ಮಂಡಳಿ ಹೊಸ ಯೋಜನೆಗಳನ್ನು ರೂಪಿಸಬೇಕು.
ಪಂಚಾಯಿತಿ ಕಚೇರಿಯೊಳಗೆ ಮುಖ್ಯಾಧಿಕಾರಿಗಳು ಬ್ರೋಕರ್ ಗಳಿಗೆ ಆಸ್ಪದ ಮಾಡಕೂಡದು. ಚುನಾಯಿತ ಸದಸ್ಯರು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಅಗತ್ಯ ಸಲಹೆ ನೀಡಿದರು.ಕುಶಾಲನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಪಪಂ ಸದಸ್ಯರಾದ ಖಲೀಮುಲ್ಲಾ, ದಿನೇಶ್, ಸುರೇಶ್, ಪ್ರಕಾಶ್, ನವೀನ್, ಹರೀಶ್, ಶಿವಕುಮಾರ್, ಜಗದೀಶ್, ಪದ್ಮಾ, ಪ್ರಮುಖರಾದ ಕೆ.ಎನ್.ಅಶೋಕ್, ರಂಜನ್, ರೋಷನ್, ಅರುಣರಾವ್, ಕುಂಜ್ಞಿ ಕುಟ್ಟಿ ಇತರರಿದ್ದರು.
ಸೆ. 25ರಂದು ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿಗೆ ಆಯ್ಕೆ ಪ್ರಕ್ರಿಯೆ ನಡೆದಿತ್ತು.