ಕುಶಾಲನಗರ ಗೌಡ ಸಮಾಜ ಹುತ್ತರಿ ಆಚರಣೆ ಇಂದು

KannadaprabhaNewsNetwork |  
Published : Nov 25, 2026, 02:30 AM IST
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ | Kannada Prabha

ಸಾರಾಂಶ

ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಹುತ್ತರಿ ಆಚರಣೆ ಗುಮ್ಮನಕೊಲ್ಲಿಯ ಹಾರಂಗಿ ರಸ್ತೆ ಬಳಿ ಯುವಕ ಸಂಘದ ಗದ್ದೆಯಲ್ಲಿ ನಡೆಯಲಿದೆ ಎಂದು‌ ಸಂಘದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ತಿಳಿಸಿದರು.

ಕುಶಾಲನಗರ : ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಹುತ್ತರಿ ಆಚರಣೆ ಗುಮ್ಮನಕೊಲ್ಲಿಯ ಹಾರಂಗಿ ರಸ್ತೆ ಬಳಿ ಯುವಕ ಸಂಘದ ಗದ್ದೆಯಲ್ಲಿ ನಡೆಯಲಿದೆ ಎಂದು‌ ಸಂಘದ ಅಧ್ಯಕ್ಷ ಚಿಲ್ಲನ ಗಣಿಪ್ರಸಾದ್ ತಿಳಿಸಿದರು.

ಗೌಡ ಸಮಾಜದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕುಶಾಲನಗರ ಗೌಡ ಸಮಾಜದ ವತಿಯಿಂದ ಅದ್ದೂರಿಯಾಗಿ ಹುತ್ತರಿ ಹಬ್ಬವನ್ನು ಆಚರಣೆ ಹಮ್ಮಿಕೊಳ್ಳಲಾಗಿದೆ.ನಮ್ಮ ಸಮಾಜದ ಸಹ ಸಂಘಟನೆಗಳಾದ ಗೌಡ ಯುವಕ ಸಂಘ, ಗೌಡ ಮಹಿಳಾ ಒಕ್ಕೂಟ, ಪದ್ಮಾವತಿ ಗೌಡ ಮಹಿಳಾ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಗೌಡ ನಿವೃತ್ತ ಸೈನಿಕರ ಕೂಟ, ಗೌಡ ಸಾಂಸ್ಕೃತಿಕ ವೇದಿಕೆ, ಗೌಡ ಯೂತ್ ಕ್ಲಬ್ ಸಹಯೋಗದಲ್ಲಿ ಬುಧವಾರ ಸಂಜೆ 5.30ಕ್ಕೆ ಗೌಡ ಸಮಾಜದಲ್ಲಿ ಗೌಡ ಮಹಿಳಾ ಒಕ್ಕೂಟ, ಪದ್ಮಾವತಿ ಗೌಡ ಮಹಿಳಾ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘದಿಂದ ಫಲಹಾರಗಳನ್ನು ಹಬ್ಬದ ಆಚರಣೆಗೆ ಬರುವವರಿಗೂ ಫಲಹಾರ ನೀಡಲಿದ್ದಾರೆ.ಗೌಡ ನಿವೃತ್ತ ಸೈನಿಕರ ಕೂಟ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆಯ ಅಚ್ಚು ಕಟ್ಟಿನ ತಯಾರಿಯೊಂದಿಗೆ ಸಂಜೆ 6.30 ಗಂಟೆಗೆ ಕುಲ ಗುರು ಶ್ರೀ ವೆಂಕಟರಮಣ ಸ್ವಾಮಿಯ ನೆಲ್ಲಕ್ಕಿ ಅಡಿಯಲ್ಲಿ ದೇವರನ್ನು ಪ್ರಾರ್ಥಿಸಿ ನೆರೆಕಟ್ಟುವ ಮುಖಾಂತರ ಹಬ್ಬಕ್ಕೆ ಚಾಲನೆ ಕೊಡಲಾಗುವುದು. ಹಿರಿಯರು ಹಾಗೂ ನಮ್ಮ ಸಂಸ್ಕೃತಿಯ ಮುಖ್ಯಸ್ಥ ಕುಲ್ಲಚೆಟ್ಟಿ ಕಾಶಿ ಪೂವಯ್ಯ ಕದಿರು ಗುತ್ತಿಯನ್ನು ಹೊತ್ತು ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ಮುಂದಾಳತ್ವದಲ್ಲಿ ಸಮಾಜದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಗೌಡ ಸಮಾಜದಿಂದ ಮೆರವಣಿಗೆ ಮುಖಾಂತರ ಗಣಪತಿ ದೇವಸ್ಥಾನಕ್ಕೆ ತೆರಳಿ ಗಣಪತಿ ದೇವರಿಗೆ ಪೂಜೆ ಸಲ್ಲಿಸಿದ‌ ಬಳಿಕ ಹಿಂತಿರುಗಿ ಗೌಡ ಸಮಾಜದ ಆವರಣಕ್ಕೆ ಮೆರವಣಿಗೆ ಮುಖಾಂತರ ಬಂದು ಕುಶಾಲನಗರದ ಗುಮ್ಮನಕೊಲ್ಲಿಯಲ್ಲಿರುವ ಗೌಡ ಯುವಕ ಸಂಘದ ಹುತ್ತರಿ ಗದ್ದೆಗೆ ತೆರಳಿ ರಾತ್ರಿ 7.30 ಗಂಟೆಗೆ ಕದಿರು ಕುಯ್ದು ನೆರೆದಿರುವ ಸರ್ವರಿಗೂ ಕದಿರನ್ನು ವಿತರಿಸಲಾಗುವುದು.

ಗೌಡ ಯುವಕ ಸಂಘ, ಗೌಡ ಯೂತ್ ಕ್ಲಬ್ ಸದಸ್ಯರು ಹುತ್ತರಿ ಹಬ್ಬದ ಆಚರಣೆಗೆ ಬೇಕಾಗಿರುವ ಐದು ಬಗೆಯ ಸೊಪ್ಪುಗಳು ಬಾಳೆಕಂಬ ಹಾಗೂ ತೋರಣಗಳನ್ನು ಕಟ್ಟಿ ಸಿಡಿಮದ್ದು ಗುಂಡುಗಳನ್ನು ಪ್ರದರ್ಶನ ನೆರವೇರಿಸಲಿದ್ದಾರೆ.ಕದಿರು ತೆಗೆದ ನಂತರ ಗೌಡ ಸಮಾಜಕ್ಕೆ ಆಗಮಿಸಿ ಕುಲ ಗುರು ವೆಂಕಟರಮಣ ಸ್ವಾಮಿಯ ನೆಲ್ಲಕ್ಕಿ ದೀಪದ ಕಂಬಕ್ಕೆ ಕದಿರು ಕಟ್ಟಿ ಗಣಪತಿ ದೇವಸ್ಥಾನಕ್ಕೆ ತೆರಳಿ ಕದಿರು ಕಟ್ಟಿ ಊರಿನ ಎಲ್ಲಾ ದೇವಾನುದೇವತೆಗಳ ಆಶೀರ್ವಾದದೊಂದಿಗೆ ಹಬ್ಬದ ಆಚರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.ಗೋಷ್ಠಿಯಲ್ಲಿ ಗೌಡ ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕುಯ್ಯಮುಡಿ ಶ್ರೀವಾಣಿ, ಪದ್ಮಾವತಿ ಗೌಡ ಮಹಿಳಾ ಸಂಘದ ಅಧ್ಯಕ್ಷೆ ಮರದಾಳು ಭೋಜಮ್ಮ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಪಾಣತ್ತಲೆ ಪುಷ್ಪ, ಗೌಡ ನಿವೃತ್ತ ಸೈನಿಕರ ಕೂಟದ ಅಧ್ಯಕ್ಷ ದೇವಜನ ಚಿಣ್ಣಪ್ಪ, ಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸೂದನ ಗೋಪಾಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಬಳಕೆ ದುಷ್ಪರಿಣಾಮ ಎಚ್ಚರ ವಹಿಸಿ: ಮಾರುತಿ ಬಾಗಡೆ
ಕಾವೇರಿ ಸಂರಕ್ಷಣೆಗೆ ಯೋಜನೆ ರೂಪಿಸಿ: ರವಿಶಂಕರ್ ಗುರೂಜಿ