ಬಿಜೆಪಿಯನ್ನು ಕೇಳಿ ಖರ್ಚು ಮಾಡಲಿಕ್ಕಾಗುವುದಿಲ್ಲ: ರಿಜ್ವಾನ್ ಅರ್ಷದ್

KannadaprabhaNewsNetwork |  
Published : Nov 25, 2026, 02:30 AM IST
ಕೂಡ್ಲಿಗಿ ತಾೂಲಕು  ನರಸಿಂಹಗಿರಿ ವಿದ್ಯಾಸಂಸ್ಥೆ, ವಾಲ್ಮೀಕಿ ವಿದ್ಯಾಸಂಸ್ಥೆ ಹಾಗೂ ಆಳ್ವಾಸ್ ನುಡಿಸಿರಿ ವಿರಾಸತ್ ವಿಜಯನಗರ ಘಟಕದ ಸಹಯೋಗದಲ್ಲಿ ಕೂಡ್ಲಿಗಿಯಲ್ಲಿ ಶಾಸಕರ ಕಚೇರಿ ಮುಂದಿನ ಆವರಣದಲ್ಲಿ  ನಡೆದ ಹುಣಸೆ ನಾಡು ಉತ್ಸವ, ಮಾಜಿ ಶಾಸಕ ಎನ್.ಟಿ.ಬೊಮ್ಮಣ್ಣ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ  ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಪ್ರಾಸ್ತವಿಕವಾಗಿಮಾತನಾಡಿದರು.  | Kannada Prabha

ಸಾರಾಂಶ

ಸರ್ಕಾರ ನಡೆಸುವಾಗ ನಾವು ಎಲ್ಲಿಂದ ಹಣ ತಂದು ಖರ್ಚು ಮಾಡುತ್ತೇವೆ ಎಂಬುದನ್ನು ಬಿಜೆಪಿಯವರನ್ನು ಕೇಳಿಕೊಂಡು ಮಾಡುವುದಕ್ಕಾಗುತ್ತದೆಯೇ ? ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಪ್ರಶ್ನಿಸಿದ್ದಾರೆ.

ಉಡುಪಿ: ಸರ್ಕಾರ ನಡೆಸುವಾಗ ನಾವು ಎಲ್ಲಿಂದ ಹಣ ತಂದು ಖರ್ಚು ಮಾಡುತ್ತೇವೆ ಎಂಬುದನ್ನು ಬಿಜೆಪಿಯವರನ್ನು ಕೇಳಿಕೊಂಡು ಮಾಡುವುದಕ್ಕಾಗುತ್ತದೆಯೇ ? ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಪ್ರಶ್ನಿಸಿದ್ದಾರೆ.ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ, ಬಿಜೆಪಿಯವರು ಹೇಳಿದಂತೆ ಸರ್ಕಾರದಲ್ಲಿ ಫಂಡ್ ಇಲ್ಲದಿದ್ದರೆ ಈ ಕಾರ್ಯಕ್ರಮಗಳು ಹೇಗಾಗುತ್ತದೆ? ಬಿಜೆಪಿಯವರು ಮಾಡಿ ಹೋಗಿರುವ ಆರ್ಥಿಕ ಅದ್ವಾನಗಳನ್ನು ನಾವು ಈಗ ಸುಧಾರಿಸುತ್ತಿದ್ದೇವೆ ಎಂದರು.ಈ ರಾಜ್ಯದ ಬಡವರಿಗೆ ಗ್ಯಾರಂಟಿ ಯೋಜನೆಗಳಿಂದ ಎಷ್ಟು ಅನುಕೂಲ ಆಗಿದೆ ಎಂದು ಬಿಜೆಪಿ ಜನರನ್ನು ಕೇಳಲಿ, ಆಗ ಬಿಜೆಪಿಯವರಿಗೆ ಸ್ವಲ್ಪ ಹೊಟ್ಟೆ ನೋವು ಆಗಿಯೇ ಆಗುತ್ತದೆ, ಅದು ಸಹಜ, ಅದಕ್ಕೆ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಅವರು ಟೀಕಿಸುತ್ತಿದ್ದಾರೆ ಎಂದರು.

ಮೊದಲ ಬಾರಿ ಉಡುಪಿ ಜಿಲ್ಲೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಗ್ಯಾರಂಟಿ ಕೊಟ್ಟಿರುವುದು ನಮ್ಮದೇ ಸರ್ಕಾರ, ಈಗ ಜನರನ್ನು ಸೇರಿಸಿ ಅದರ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ, ಬಿಜೆಪಿಯವರಿಗೆ ಬೇಜಾರು ಎನಿಸಿದರೆ ನಾವೇನು ಮಾಡುವುದಕ್ಕಾಗುತ್ತದೆ ? ಎಂದವರು ಹೇಳಿದರುಬಿಜೆಪಿ ಸಂಸದರು ಏನ್ಮಾಡ್ತಾರೆ ?:

ಆಶಾ ಕಾರ್ಯಕರ್ತರ ಸಮಸ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಬಗೆಹರಿಸಬೇಕಾಗಿದೆ. ಕರ್ನಾಟಕದಿಂದ 18 ಜನ ಬಿಜೆಪಿ ಸಂಸದರಿದ್ದಾರೆ, ಆಶಾ ಕಾರ್ಯಕರ್ತೆಯರ ಬೇಡಿಕೆ ಬಗ್ಗೆ ಅವರು ಕೇಂದ್ರದ ಮೇಲೆ ಒತ್ತಡ ಹೇರುತ್ತಾರಾ ಅಥವಾ ಕೇವಲ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿಕೊಂಡು ಕುಳಿತುಕೊಳ್ಳುತ್ತಾರಾ ಎಂಬುದನ್ನು ನೋಡೋಣ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಬಿಜೆಪಿಗೆ ನೈತಿಕತೆಯಿಲ್ಲ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿನ್ಯಾಸ, ಟೆಂಡರ್ ಮಾಡಿದ್ದು ಬಿಜೆಪಿ. ಉಡುಪಿ ಜಿಲ್ಲೆಯ ಜನ ಪ್ರಜ್ಞಾವಂತರು. ಇದನ್ನು ಬಿಜೆಪಿಯವರು ಮರೆಯಬಾರದು. ಅವರಿಗೆ ಈಗ ಥೀಮ್ ಪಾರ್ಕ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವರು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೊಬೈಲ್ ಬಳಕೆ ದುಷ್ಪರಿಣಾಮ ಎಚ್ಚರ ವಹಿಸಿ: ಮಾರುತಿ ಬಾಗಡೆ
ಕಾವೇರಿ ಸಂರಕ್ಷಣೆಗೆ ಯೋಜನೆ ರೂಪಿಸಿ: ರವಿಶಂಕರ್ ಗುರೂಜಿ