ಕುಸುಮಾ ಕ್ರೀಡಾ ಸಾಧನೆ ನಮ್ಮ ಗ್ರಾಮಕ್ಕೆ ಗೌರವ: ಡಾಕೇಂದ್ರ

KannadaprabhaNewsNetwork | Published : Apr 11, 2025 12:37 AM

ಸಾರಾಂಶ

ನರಸಿಂಹರಾಜಪುರ, ಕುಸುಮ ಅವರ ಕ್ರೀಡಾ ಸಾಧನೆಯಿಂದ ಸಂಕ್ಸೆ ಗ್ರಾಮಕ್ಕೆ ಗೌರವ ಬಂದಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಡಾಕೇಂದ್ರ ತಿಳಿಸಿದರು.

ಸಂಕ್ಸೆ ಶಾಲೆಯಲ್ಲಿ ಅಭಿನಂದನೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕುಸುಮ ಅವರ ಕ್ರೀಡಾ ಸಾಧನೆಯಿಂದ ಸಂಕ್ಸೆ ಗ್ರಾಮಕ್ಕೆ ಗೌರವ ಬಂದಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಡಾಕೇಂದ್ರ ತಿಳಿಸಿದರು.

ಸಂಕ್ಸೆ ( ಗುಡ್ಡೇಹಳ್ಳ ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮುದಾಯ ದತ್ತ ಶಾಲೆ ಹಾಗೂ ಕುಸುಮಾ ಅವರ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಸುಮಾ ಅವರು ಛತ್ತೀಸ್ ಗಡ ರಾಜ್ಯದಲ್ಲಿ ನಡೆದ ರಾಷ್ಟ್ರ ಮಟ್ಟದ ಥ್ರೋಬಾಲ್‌ ಪಂದ್ಯಾದಲ್ಲಿ ಪ್ರಥಮ ಸ್ಥಾನಗಳಿಸಿದ ತಂಡದ ವೈಸ್ ಕ್ಯಾಪ್ಟನ್ ಆಗಿ ರಾಜ್ಯಕ್ಕೆ ಗೌರವ ತಂದಿದ್ದಾಳೆ. ಶಾಲೆ ಮಕ್ಕಳು ಕುಸುಮಾ ಅವರ ಕ್ರೀಡಾ ಸಾಧನೆ ಅನುಕರಿಸಬೇಕು ಎಂದು ಕರೆ ನೀಡಿದರು.

ಸಂಕ್ಸೆ ಶಾಲೆ ಮುಖ್ಯೋಪಾಧ್ಯಾಯ ಆರ್. ನಾಗರಾಜ್ ಮಾತನಾಡಿ, ಕುಸುಮಾ ಈ ಶಾಲೆಯ ಹಳೇ ವಿದ್ಯಾರ್ಥಿಯಾಗಿದ್ದು ರಾಷ್ಟ್ರಮಟ್ಟದ ಥ್ರೋ ಬಾಲ್ ನಲ್ಲಿ ಪ್ರಥಮ ಸ್ಥಾನ ಪಡೆದ ಅವರಿಗೆ ಶಾಲೆಯಿಂದ ಗೌರವಿಸಲಾಗುತ್ತಿದೆ ಎಂದರು.

ಗ್ರಾಮದ ಹಿರಿಯ ಕಾಸನ ಚಂದ್ರಶೇಖರ್‌ ಮಾತನಾಡಿ, ಕ್ರೀಡಾ ಪಟು ಕುಸುಮಾ ನಮ್ಮೂರಿನ ಹೆಮ್ಮೆಯ ಮಗಳಾಗಿದ್ದಾಳೆ. ಕ್ರೀಡಾ ಸಾಧನೆ ತಾಲೂಕು ಮಾತ್ರವಲ್ಲ. ರಾಜ್ಯಮಟ್ಟದಲ್ಲೂ ಕೀರ್ತಿ ಗಳಿಸಿದ್ದಾಳೆ. ಇಂತಹ ಗ್ರಾಮೀಣ ಕ್ರೀಡಾ ಪಟುವನ್ನು ಸರ್ಕಾರ ಪ್ರೋತ್ಸಾಹಿಸಬೇಕು ಎಂದರು.

ಕೊಪ್ಪ ಪಟ್ಟಣ ಪಂಚಾಯಿತಿ ಸದಸ್ಯೆ ರೇಖಾ ಮಾತನಾಡಿ, ಕುಸುಮಾ ನಮ್ಮ ಕುಟುಂಬದ ಕುಡಿ ಎಂಬುದೇ ಹೆಮ್ಮೆ. ಅವಳ ಕ್ರೀಡಾ ಸಾಧನೆ ಮುಂದುವರಿಯಲಿ ಎಂಬ ಆಶಯ ವ್ಯಕ್ತಪಡಿಸಿದರು.

ಸಭೆಯಲ್ಲಿ ಬಾಂಧವ್ಯ ಸ್ಪೋರ್ಟ್ಸ ಕ್ಲಬ್ ಸದಸ್ಯ ಶ್ರೀನಾಥ್‌, ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಮಂಜುನಾಥ್, ಕ್ರೀಡಾಪಟು ಕುಸುಮಾ ಕುಟುಂಬದ ಪ್ರಕಾಶ್‌, ವರ್ಗಾವಣೆಗೊಂಡ ಶಿಕ್ಷಕ ಜಗದೀಶ್, ಶಾಲೆ ಸಹ ಶಿಕ್ಷಕಿ ಮೋಹಿನಿ ಇದ್ದರು.

Share this article