ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಕುಟ್ಟಂದಿ ಗ್ರಾಮದ ಕೆ.ಬಿ.ಪ್ರೌಢಶಾಲೆ ವಜ್ರಮಹೋತ್ಸವ ಅಂಗವಾಗಿ ಹಾಕಿ ಕೂರ್ಗ್‌ನ ನೊಂದಾಯಿತ ತಂಡಗಳ ಹಾಕಿ ಪಂದ್ಯಾಟ ಜರುಗಿತು.ಮೊದಲ ಪಂದ್ಯದಲ್ಲಿ ಎಎಸ್‌ಸಿ ಅಮ್ಮತ್ತಿ ತಂಡ ಬಿಬಿಸಿ ಗೋಣಿಕೊಪ್ಪ ತಂಡವನ್ನು 3-2 ಗೋಲುಗಳಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಅಮ್ಮತ್ತಿ ತಂಡದ ಪರವಾಗಿ ಮ್ಯಾಕ್ ಮೊಣ್ಣಪ್ಪ 22ನೇ ನಿಮಿಷದಲ್ಲಿ, ಸೋಮಯ್ಯ 2ನೇ5 ಹಾಗೂ ರಿವಿನ್ 28ನೇ ನಿಮಿಷದಲ್ಲಿ ಗೋಲ್ ಗಳಿಸಿದರು. ಬಿಬಿಸಿ ಪರವಾಗಿ ಆರ್ಯನ್ ಉತ್ತಪ್ಪ ಮತ್ತು ನಾಚ್ಚಪ್ಪ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ದ್ವಿತೀಯ ಪಂದ್ಯದಲ್ಲಿ ಬೋಳಿಯೂರು ತಂಡದ ಮಾಚ್ಚಯ್ಯ 16ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಅಂಜಿಕೇರಿ ನಾಡು ವಿರುದ್ಧ 1-0 ಅಂತರ ದಿಂದ ಜಯ ಗಳಿಸಿತು.ಮೂರನೆ ಪಂದ್ಯದಲ್ಲಿ ಡ್ರಿಬ್ಲರ್ಸ್ ಹಂಪ್ ಕುತ್ತ್ ನಾಡು ತಂಡವು ಕಿಗ್ಗಟ್ ನಾಡು ಪ್ಲಯಿಂಗ್ಏಲ್ಬೊ ತಂಡದ ವಿರುದ್ಧ 3-0 ಗೋಲುಗಳ ಅಂತರದಿಂದ ಜಯ ಗಳಿಸಿತು. ತಂಡದ ಪರವಾಗಿ ವೀರಣ್ಣ 12ನೇ ನಿಮಿಷ ಮೋಕ್ಷಿತ್ ಉತ್ತಪ್ಪ, 17ನೇ ನಿಮಿಷ ಸುಬ್ಬಯ್ಯ19ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಕೊನೆಯ ಪಂದ್ಯದಲ್ಲಿ ಸಿಆರ್‌ಸಿ ಕಾಕೊಟುಪರಂಬು ಮತ್ತು ಶಿವಾಜಿ ನಾಪೊಕ್ಲ್ ನಡುವಿನ ಸೆಣಸಾಟದಲ್ಲಿ ಶಿವಾಜಿ ತಂಡವು 4-2 ಗೋಲುಗಳ ಅಂತರದಿಂದ ಜಯ ಗಳಿಸಿತು. ಆರ್.ಸಿ. ಪರವಾಗಿ ರೋಹನ್ 7ನೇ ನಿಮಿಷ ಅಮ್ಮಂಡಿರ ಚೇತನ್ 23ನೇ ನಿಮಿಷದಲ್ಲಿ ಶಿವಾಜಿ ತಂಡದ ಪರವಾಗಿ ಚಂಗಪ್ಪ 14 ನೇ ನಿಮಿಷ ನೀರನ್ 28 ಹಾಗು 52ನೇ ನಿಮಿಷ ಹಾಗೂ ಪವನ್ 59 ನೇ ನಿಮಿಷದಲ್ಲಿ ಗೋಲು ಗಳಿಸಿ ಜಯ ಗಳಿಸಲು ಕಾರಣರಾದರು.ಪಂದ್ಯವಾಳಿಯ ನಿರ್ದೇಶಕರಾಗಿ ಸಣ್ಣುವಂಡ ಲೋಕೇಶ್ ನಂಜಪ್ಪ ತೀರ್ಪುಗಾರರಾಗಿ ಚೈಯಂಡ ಅಪ್ಪಚ್ಚು. ಕರವಂಡ ಅಪ್ಪಣ, ಕುಪ್ಪಂಡ ದಿಲನ್ ರಾಯಲ್, ಐಯ್ಯಣ್ಣ ಸಚಿನ್ ಮಂದಣ್ಣ, ವಿನೋದ್ ಕುಮಾರ್, ಅಪ್ಪಚೆಟೋಳಂಡ ಅಯ್ಯಪ್ಪ, ಕಲ್ಮಾಡಂಡ ಸೋಮಣ್ಣ ಕಾರ್ಯ ನಿರ್ವಹಿಸಿದರು. ವೀಕ್ಷಕ ವಿವರಣೆಯನ್ನು ಮಾಲೆಟಿರ ಶ್ರೀನಿವಾಸ್ ನೀಡಿದರು
..................ಇಂದಿನ ಪಂದ್ಯಗಳುಪೂರ್ವಾಹ್ನ 9ಕ್ಕೆ: ಕೆಎಸ್‌ಆರ್‌ಸಿ ವಿರಾಜಪೇಟೆ ಮತ್ತು ಶ್ರೀ ವನಭದ್ರಕಾಳಿ ಹಾತೂರು
ಪೂರ್ವಾಹ 10ಕ್ಕೆ: ಎಂಆರ್‌ಎಫ್ ಮೂರ್ನಾಡು ಮತ್ತು ಚಾರ್ಮರ್ಸ್ ಮಡಿಕೇರಿಪೂರ್ವಾಹ್ನ 11ಕ್ಕೆ: ಪಾಲ್ಕನ್ ಕ್ಲಬ್ ಮತ್ತು ಕುತ್ತ್ ನಾಡು ಸ್ಟ್ರೈಕರ್
ಅಪರಾಹ್ನ 12ಕ್ಕೆ: ಮಲ್ಮ ಸ್ಪೋರ್ಟ್ಸ್ ಕ್ಲಬ್ ಮತ್ತು ಬೂಳಿಯೋರು ಸ್ಪೋರ್ಟ್ಸ್ ಕ್ಲಬ್ಅಪರಾಹ್ನ ೧ಕ್ಕೆ ಕಿರುಗೂರು ಸ್ಪೋರ್ಟ್ಸ್ ಕ್ಲಬ್ ಮತ್ತು ಯು ಎಸ್ ಸಿ ಬೇರಳಿನಾಡು