ಕುವೆಂಪು ಸಾಹಿತ್ಯ ಅಮರ: ವಿಜಯ್ ರಾಂಪುರ

KannadaprabhaNewsNetwork |  
Published : Nov 13, 2025, 12:30 AM IST
ಪೊಟೋ೧೨ಸಿಪಿಟಿ೨: ಪಟ್ಟಣದ ಮಂಜುನಾಥ ನಗರದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ 'ಕುವೆಂಪು ನುಡಿ ನಮನ' ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ  ನಮನ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚನ್ನಪಟ್ಟಣ: ಕನ್ನಡ ಸಾಹಿತ್ಯ ಲೋಕದ ಮಹರ್ಷಿಯಾದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆ ಅಮರವಾದದ್ದು. ಮಾನವತೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಅವರ ಸಾಹಿತ್ಯ, ಓದುಗರ ಮನಸ್ಸುಗಳನ್ನು ಶಾಶ್ವತವಾಗಿ ಬೆಳಗುತ್ತದೆ ಎಂದು ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಡಾ. ವಿಜಯ್ ರಾಂಪುರ ತಿಳಿಸಿದರು.

ಚನ್ನಪಟ್ಟಣ: ಕನ್ನಡ ಸಾಹಿತ್ಯ ಲೋಕದ ಮಹರ್ಷಿಯಾದ ರಾಷ್ಟ್ರಕವಿ ಕುವೆಂಪು ಅವರು ಕನ್ನಡ ನಾಡಿಗೆ ನೀಡಿದ ಕೊಡುಗೆ ಅಮರವಾದದ್ದು. ಮಾನವತೆಯ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಅವರ ಸಾಹಿತ್ಯ, ಓದುಗರ ಮನಸ್ಸುಗಳನ್ನು ಶಾಶ್ವತವಾಗಿ ಬೆಳಗುತ್ತದೆ ಎಂದು ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಡಾ. ವಿಜಯ್ ರಾಂಪುರ ತಿಳಿಸಿದರು.

ಪಟ್ಟಣದ ಮಂಜುನಾಥ ನಗರದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ''''''''''''''''ಕುವೆಂಪು ನುಡಿ ನಮನ'''''''''''''''' ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ೩೧ ವರ್ಷಗಳ ಹಿಂದೆ ಅಸ್ತಂಗತವಾದ ಸಾಹಿತ್ಯ ಚೇತನ, ಕನ್ನಡ ಜ್ಯೋತಿಯನ್ನು ಬೆಳಗುತ್ತಿದೆ. ಸಮಾಜದ ವಿಷಮತೆ, ಅಸಮಾನತೆ, ಮೌಢ್ಯ, ಕಂದಾಚಾರವೆಲ್ಲವನ್ನೂ ಮೆಟ್ಟಿ ನಿಂತು, ವೈಚಾರಿಕ ಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದರು. ಕುವೆಂಪು ಅವರಂತಹ ಮೇರು ವ್ಯಕ್ತಿತ್ವ ಭಾರತೀಯ ಸಾಹಿತ್ಯದಲ್ಲಿ ಅಜರಾಮರವಾಗಿದೆ ಎಂದರು.

ಯುವ ಕವಿ ಸಚಿನ್ ನಾರಾಯಣ್ ಕೆಲಗೆರೆ ಮಾತನಾಡಿ, ಕುವೆಂಪು ಅವರ ಮಂತ್ರ ಮಾಂಗಲ್ಯ ಪರಿಕಲ್ಪನೆ ಬಡ ಕುಟುಂಬಗಳ ಪಾಲಿಗೆ ವರದಾನವಾಗಿತ್ತು. ಕುವೆಂಪು ಅವರ ಸೃವಶ್ರೇಷ್ಠ ಚಿಂತನೆಗಳು ನವ ಸಮಾಜ ನಿರ್ಮಾಣ ಕಾರ್ಯದಲ್ಲಿ ಯಶಸ್ವಿಯಾಗಿವೆ ಎಂದರು.

ಅಬ್ಬೂರು ಶ್ರೀನಿವಾಸ್ ಮಾತನಾಡಿ, ಕುವೆಂಪು ಅವರು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ದುಡಿದಿದ್ದಾರೆ. ಜಯ ಭಾರತ ಜನನಿಯ ತನುಜಾತೆ ಎಂಬ ಅವರ ನಾಡಗೀತೆ ನಮ್ಮ ರಾಷ್ಟ್ರಪ್ರೇಮಕ್ಕೆ ಪ್ರೇರಣೆ ನೀಡುತ್ತದೆ ಎಂದರು.

ಕವಿ ಯೋಗೇಶ್ ದ್ಯಾವಾಪಟ್ಟಣ ಮಾತನಾಡಿ, ಇಂದು ಅವರ ಅಸ್ತಂಗತ ದಿನ. ನಾವೆಲ್ಲ ಅವರ "ವಿಶ್ವಮಾನವತೆಯ " ಕನಸು, ಸದಾ ನಮ್ಮ ಬದುಕಿಗೆ ಅವರು ಮಾರ್ಗದೀಪವಾಗಲಿ ಎಂದರು.

ಈ ಸಂದರ್ಭದಲ್ಲಿ ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಅಚಲ ಆರ್.ವಿ., ಅನಿತಾ ವಿಜಯ್, ಎಂ.ಸಿ. ಮೀನಾ, ಮೌನೀಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಪೊಟೋ೧೨ಸಿಪಿಟಿ೨: ಚನ್ನಪಟ್ಟಣದಲ್ಲಿ ರಾಂಪುರದ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ''''''''''''''''ಕುವೆಂಪು ನುಡಿ ನಮನ'''''''''''''''' ಕಾರ್ಯಕ್ರಮದಲ್ಲಿ ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

PREV

Recommended Stories

250 ಕೋಟಿ ಹಗರಣ ಕಡತ ನಾಶ ಮಾಡಿದ್ರೂ ಸಿಕ್ಕಿದವು!?
ಬಿಳಿಕೆರೆ ಬಳಿ ಒಂದು ಗಂಡು ಹುಲಿ ಮರಿ ಸೆರೆ