ಕನ್ನಡದ ಶ್ರೇಷ್ಠ ಕವಿಗಳಲ್ಲಿ ಕುವೆಂಪು ಅಗ್ರಗಣ್ಯರು

KannadaprabhaNewsNetwork |  
Published : Jan 01, 2026, 03:00 AM IST
66 | Kannada Prabha

ಸಾರಾಂಶ

ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚನೆ ಮಾಡಿ ಅದರಲ್ಲಿ ಪ್ರತಿಯೊಂದು ಪಾತ್ರಕ್ಕೂ ಜೀವವನ್ನು ತುಂಬಿದ ಹಿರಿಮೆ ಕುವೆಂಪು ಅವರಿಗೆ ಸಲ್ಲಬೇಕು.

ಕನ್ನಡಪ್ರಭ ವಾರ್ತೆ ಬನ್ನೂರು

ಕನ್ನಡದ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರೆಂದು ಚಾಮನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಮೇಗಲಕೊಪ್ಪಲಿನ ಜಯರಾಂ ಹೇಳಿದರು.

ಪಟ್ಟಣದ ಸಂತೇಮಾಳದ ಬಸವೇಶ್ವರ ವೃತ್ತದಲ್ಲಿ ಹಮ್ಮಿಕೊಳ್ಳಲಾದ ಕುವೆಂಪು ಅವರ ಜನ್ಮದಿನಾಚರಣೆಯ ಕಾರ್ಯಕ್ರಮಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶ್ರೀ ರಾಮಾಯಣ ದರ್ಶನಂ ಎಂಬ ಕೃತಿಯನ್ನು ರಚನೆ ಮಾಡಿ ಅದರಲ್ಲಿ ಪ್ರತಿಯೊಂದು ಪಾತ್ರಕ್ಕೂ ಜೀವವನ್ನು ತುಂಬಿದ ಹಿರಿಮೆ ಕುವೆಂಪು ಅವರಿಗೆ ಸಲ್ಲಬೇಕು. ಕಿಂದರಿ ಜೋಗಿ ಎನ್ನುವ ಕವನ ಸಂಕಲನ ಕಿರಿಯರಿಂದ ಹಿಡಿದು ಹಿರಿಯರವರೆಗೂ ಸಾಹಿತ್ಯಾಸಕ್ತಿಯನ್ನು ಮೂಡಿಸುತ್ತದೆ ಎಂದರು.

ಬೀಡನಹಳ್ಳಿ ಜೆಡಿಎಸ್ ಮುಖಂಡ ದೇವರಾಜ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಅಭಿಮಾನ ಕಡಿಮೆಯಾಗುತ್ತಿದೆ, ಅವರು ಬೇರೆ ಭಾಷೆಗಳಲ್ಲಿ ಕುವೆಂಪು ಅವರಿಗೆ ಪ್ರಾವಿಣ್ಯತೆ ಹೊಂದಿದ್ದರೂ ಅವರು ಕನ್ನಡ ಭಾಷೆಯನ್ನೇ ತನ್ನ ಕ್ಷೇತ್ರವನ್ನಾಗಿಸಿಕೊಂಡು ಸಾಹಿತ್ಯ ಲೋಕದ ಹಿರಿಮೆ ಎತ್ತಿ ಹಿಡಿದರೆಂದು ಶ್ಲಾಘಿಸಿದರು.

ನಾರಾಯಣಸ್ವಾಮಿ ಮಾತನಾಡಿ, ಕುವೆಂಪುರವರು ಇಡೀ ಮನುಕುಲಕ್ಕೆ ಸಾರಿದ ವಿಶ್ವ ಮಾನವ ಸಂದೇಶ ಸಾರ್ವಕಾಲಕ್ಕೂ ಸರ್ವರಿಗೂ ಅನ್ವಯವಾಗುವಂತದ್ದು, ಸಮ ಸಮಾಜದ ಪರಿಕಲ್ಪನೆಯನ್ನು ಕುವೆಂಪುರವರು ಆರಾಧಿಸಿದ್ದರು ಎಂದು ತಿಳಿಸಿದರು.

ತಾಲೂಕು ಜೆಡಿಎಸ್ ಮುಖಂಡ ವೈ.ಎಸ್. ರಾಮುಸ್ವಾಮಿ, ಬಿ. ಚೆಲುವರಾಜು, ದೇವರಾಜ್, ವೈ.ಬಿ. ಪಟೇಲ್, ಹೇಮಂತ್‌ ಕುಮಾರ್, ನೇಗಿಲಯೋಗಿ ಅಧ್ಯಕ್ಷ ರವಿಕುಮಾರ್, ಚನ್ನೇಗೌಡ, ದೇವರಾಜ್, ಶಂಕರೇಗೌಡ, ಬಿ.ಕೆ. ನಿರಂಜನ್, ಮೇಗಲಕೊಪ್ಪಲಿನ ರಂಗಸ್ವಾಮಿ, ಚಿಕ್ಕೀರೇಗೌಡ, ಸುರೇಶ, ಮಹದೇವು, ಪ್ರದೀಪ, ನೀಲಕಂಠೇಗೌಡ, ರಂಗಸ್ವಾಮಿ, ಮಾದೇಶ, ಯಾಲಕ್ಕಿಗೌಡ, ಮಲ್ಲಿಕಾರ್ಜುನ್, ವೆಂಕಟೇಶ್, ರಾಜ್‌ ಗೋಪಾಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ