ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದ ಕುವೆಂಪು ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಆಯೋಜಿಸಲಾಗಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕುವೆಂಪುರವರ ಸಾಹಿತ್ಯಕ್ಕೆ ‘ವಿಶ್ವಮಾನವ’ ಎಂಬ ಬಿರುದು ಸಾರ್ಥಕವಾಗಿದೆ. ಅವರ ಸಾಹಿತ್ಯ ಹಾಗೂ ತಾತ್ವಿಕ ಚಿಂತನೆಗಳು ಕನ್ನಡಿಗರಿಗೆ ಮಾತ್ರವಲ್ಲದೆ ಸಮಸ್ತ ಮಾನವಕುಲಕ್ಕೆ ಹೆಮ್ಮೆಯ ವಿಷಯವಾಗಿವೆ ಎಂದು ಹೇಳಿದರು. ಕುವೆಂಪು ಅವರ ಬರವಣಿಗೆಗಳು ಮಾನವೀಯತೆ, ಶಾಂತಿ ಮತ್ತು ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ. ಇಂದಿನ ಯುವ ಪೀಳಿಗೆ ಕುವೆಂಪುರವರ ಚಿಂತನೆಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತ್ ಕುಮಾರ್, ಋಷಿಕುಮಾರ ಸ್ವಾಮೀಜಿ, ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಕಿರಣ್ ಕುಮಾರ್, ನಗರಾಧ್ಯಕ್ಷ ಸಂತೋಷ್ ಕುಮಾರ್, ತಾಲೂಕು ಕಾರ್ಯದರ್ಶಿ ರಾಘವೇಂದ್ರ ಗಂಟೆ, ಹೋಬಳಿ ಅಧ್ಯಕ್ಷ ಮಹೇಶ್, ತಾಲೂಕು ಉಪಾಧ್ಯಕ್ಷ ಮಂಜು, ಕೆ.ಕೆ. ಮಂಜು, ರಕ್ಷಿತ್, ನೇತ್ರೇಶ್, ರಾಘು ಸೇರಿದಂತೆ ಹಲವು ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.