ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕುವೆಂಪು ಅವರು ಸಾಹಿತ್ಯ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಸಾಹಿತಿ ಶಿವಾನಂದ ಆದಾಪೂರ ಹೇಳಿದರು.ಹೆಚ್.ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ ಜಿಲ್ಲಾ ಘಟಕದಿಂದ ಬಾಗಲಕೋಟೆ ತಾಲೂಕಿನ ನೀರಲಕೇರಿಯಲ್ಲಿರುವ ಮುನಿ ಹಿರಿಯ ನಾಗರಿಕ ಸೇವಾ ಕೇಂದ್ರದ ವೃದ್ಧಾಶ್ರಮದಲ್ಲಿ ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ 119ನೇ ಜನ್ಮದಿನ ಆಚರಣೆಯಲ್ಲಿ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ವಿಶ್ವಮಾನವ ರಾಷ್ಟ್ರಕವಿ ಕುವೆಂಪುರವರ ಆಶಯದಂತೆ ಸಾಹಿತಿ, ದೇಶ ಸೇವೆಗೈದ ಸೈನಿಕ ಹಾಗೂ ಕೃಷಿ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಸಾಹಿತಿಗಳಾದ ಶಿವಾನಂದ ಆದಾಪೂರ, ಸೈನಿಕರಾಗಿ ವೀರಣ್ಣ ವಜ್ರಮಟ್ಟಿ, ಕೃಷಿಕ್ಷೇತ್ರದಲ್ಲಿ ಪ್ರಗತಿಪರ ರೈತರಾದ ಬಸಪ್ಪ ಸಾಳಗುಂದಿ ಅವರುಗಳನ್ನು ಸನ್ಮಾನಿಸಲಾಯಿತು.ಸೈನಿಕರಾದ ವೀರಣ್ಣ ವಜ್ರಮಟ್ಟಿ ಮಾತನಾಡಿ ದೇಶಸೇವೆಯಲ್ಲಿ ತಾವು ಕಂಡ ಅನುಭವದ ಘಟನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಹೆಚ್.ಶಿವರಾಮೇಗೌಡರ ಕರವೇ ರಾಜ್ಯ ವಕ್ತಾರ ಹಾಗೂ ಜಿಲ್ಲಾಧ್ಯಕ್ಷ ಬಿ.ಎಂ.ಪಾಟೀಲ ಮಾತನಾಡಿ, ನೇಗಿಲಯೋಗಿಯ ಪ್ರಯುಕ್ತ ರೈತರನ್ನು ಸನ್ಮಾನಿಸುವುದರ ಮೂಲಕ ಅನ್ನದಾತರನ್ನು ಗೌರವಿಸುವಂತೆ, ದೇಶಸೇವೆಯ ಮೂಲಕ ನಮ್ಮನ್ನೆಲ್ಲ ಕಾಯುವ ಸೈನಿಕರನ್ನು ಗೌರವಿಸುವ ಮೂಲಕ ದೇಶಭಕ್ತಿ ಮೇರೆಯುವ ಹಾಗೂ ಸಾಹಿತಿಗಳನ್ನು ಗೌರವಿಸುವ ಮೂಲಕ ಸಾಹಿತ್ಯ ಉಳಸುವ ಬಗ್ಗೆ ಕುವೆಂಪುರವರು ಸಾಹಿತ್ಯ ಲೋಕದ ದಿಗ್ಗಜರು ಎನಿಸಿಕೊಂಡಿದ್ದರು ಎಂದರು.ಜ್ಞಾನಪೀಠ ಪುರಸ್ಕೃತರು ಕನ್ನಡ ನಾಡಿನ ಸಾಹಿತ್ಯವನ್ನು ರಾಷ್ಟ್ರ ವ್ಯಾಪ್ತಿ ಹರಡಿ ವಿಶ್ವಮಾನವ ಎನಿಸಿಕೊಂಡವರು ಕುವೆಂಪುರವರ ಆಶಯದಂತೆ ಇಂದು ಕರವೇ ಕಾರ್ಯಕರ್ತರು ವೃದ್ಧಾಶ್ರಮದಲ್ಲಿ ವಯೋ ವೃದ್ದರಿಗೆ ಸಿಹಿ ಹಂಚಿ ಬೆಳಗಿನ ಉಪಾಹಾರ ಬಡಿಸಿ ಸಂತೃಷ್ಟರಾದರು ಎಂದರು.
ಕಾರ್ಯಕ್ರಮದ ನಿರೂಪಣೆಯನ್ನು ಕರವೇ ಹಿತೈಷಿಗಳಾದ ನಿಂಗರಾಜ ಮಬ್ರುಮಕರ ನೆರವೇರಿಸಿದರು. ಗೋಪಾಲ ಶಿವಪೂರ ಸ್ವಾಗತ ಕೋರುವ ಮೂಲಕ ವಿಶೇಷ ಗೌರವಾನ್ವಿತರಿಗೆ ಗೌರವ ಸೂಚಿಸಿದರು.ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷ ಶಂಕರ ಫಕೀರಪ್ಪ ಮುತ್ತಲಗೇರಿ, ನಗರ ಉಪಾಧ್ಯಕ್ಷ ಸಂತೋಷ ಚಿನಿವಾಲ, ಕಾರ್ಮಿಕ ಘಟಕದ ಅಧ್ಯಕ್ಷ ಪರಶುರಾಮ ಬುಳ್ಳಾಪೂರ, ಕಾರ್ಮಿಕ ಘಟಕದ ಉಪಾಧ್ಯಕ್ಷ ತಿಮ್ಮಣ್ಣ ಕುರುಬರ ಸೇರಿದಂತೆ ಇನ್ನಿತರ ಕರವೇ ಪದಾಧಿಕಾರಿಗಳು ಉಪಸ್ಥಿತರಿದ್ದರು.