- ಹಿರೇಕೊಡಿಗೆಯಲ್ಲಿ ವಿಶ್ವಮಾನವ ದಿನಾಚರಣೆ
ಕುವೆಂಪು ಅವರು ರಾಷ್ಟ್ರೀಯತೆ, ಮಾನವೀಯತೆ ಬಗ್ಗೆ ಬೆಳಕು ಚೆಲ್ಲಿದ್ದಾರೆ. ವ್ಯಕ್ತಿಯೊಬ್ಬ ಜಾತಿ ಮೀರಿ ಬೆಳೆಯಬೇಕು ಎನ್ನುವ ಸಂದೇಶ ಕೊಟ್ಟಿದ್ದಾರೆ ಎಂದು ಪ್ರಭಾರ ತಹಸೀಲ್ದಾರ್ ನೂರುಲ್ ಹುದಾ ತಿಳಿಸಿದರು.
ಕುವೆಂಪು ಅವರ ಜನ್ಮಸ್ಥಳವಾದ ತಾಲೂಕಿನ ಹಿರೇಕೊಡಿಗೆಯಲ್ಲಿ ಸೋಮವಾರ ಕೊಪ್ಪ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಕಸಾಪದಿಂದ ರಾಷ್ಟ್ರಕವಿ ಕುವೆಂಪು ೧೨೧ನೇ ಜನ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾತಿ, ಭಾಷೆ ಇತರೆ ವಿಚಾರಕ್ಕಾಗಿ ಸಂಘರ್ಷ ನಡೆಯುತ್ತಿರುವ ಈ ಸಂದರ್ಭದಲ್ಲಿ ಕುವೆಂಪು ಅವರ ಕೃತಿ ಓದುವುದು ಪ್ರಾಮುಖ್ಯತೆ ಪಡೆಯುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ರಾಘವೇಂದ್ರ ಮಾತನಾಡಿ ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬುದು ರಾಷ್ಟ್ರಕವಿ ಕುವೆಂಪು ಅವರ ವಿಶ್ವ ಮಾನವ ಸಂದೇಶದ ಪ್ರಮುಖ ತತ್ವ. ನಾವು ಯಾವುದೇ ಸಂಕೋಲೆಗಳಿಗೆ ಒಳಗಾಗದೆ ಪ್ರತಿಯೊಬ್ಬರೂ ಹುಟ್ಟುತ್ತಾ ವಿಶ್ವಮಾನವರಾಗಿರುತ್ತಾರೆ. ನಂತರ ಬೆಳೆಯುತ್ತಾ ಸಂಕುಚಿತ ಗುಣಗಳನ್ನು ಹೊಂದುತ್ತಾರೆ. ಆದರೆ ವಿಶ್ವಮಾನವ ರಾಗಿಯೇ ಉಳಿಯಲು ಪ್ರಯತ್ನಿಸಬೇಕು. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ವೈಚಾರಿಕ ದೃಷ್ಟಿಕೋನ ಹೊಂದಿದ್ದರು. ಇದರಿಂದ ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯವಾಯಿತು. ಪ್ರಕೃತಿ ಕವಿಯಾದ ಅವರು ೨೦ನೇ ವಯಸ್ಸಿನಲ್ಲಿ ರಚಿಸಿದ ನಾಡಗೀತೆಗೆ ನೂರರ ಸಂಭ್ರಮ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಕಾರ್ಯಕ್ರಮದ ಕುರಿತು ಕಳುಹಿಸಿದ ಸಂದೇಶವನ್ನು ಕಸಾಪ ರಮೇಶ್ ಓದಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್, ಶಿಕ್ಷಕರಾದ ಎನ್.ಪಿ.ಸುಕೇಶ್, ಮಾರುತಿ ಪ್ರಸಾದ್, ಗಂಗಾ ಸುಭಾಷ್, ಸುನೀತ ನೆಲಗದ್ದೆ, ಪ್ರಸನ್ನ ಕುಮಾರ್ ಬಿ.ಬಿ., ನಾಗಭೂಷಣ್ ಹುಲ್ಮಕ್ಕಿ, ವಕೀಲ ಸುಧೀರ್ ಕುಮಾರ್ ಮುರೊಳ್ಳಿ, ಸುಧಾಕರ್, ಸುಚಿತ್‌ಚಂದ್ರ, ಸರಳ ಗಿರೀಶ್, ವಿನುತಾ ಸಂದೀಪ್, ನವೀನ್ ಕುಮಾರ್, ಸಮನ್ವಿ, ಗೌತಮಿ ಮತ್ತಿತರರು ಕುವೆಂಪು ಕವನ ವಾಚಿಸಿದರು.ಹಿರೇಕೊಡಿಗೆ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಅಭಿಷೇಕ್, ಸದಸ್ಯರಾದ ರಾಜೀವಿ, ರವೀಂದ್ರ, ಕೆಡಿಪಿ ಸದಸ್ಯ ನಾರ್ವೆ ಅಶೋಕ್, ಬಿ.ಪಿ.ಚಿಂತನ್, ಮಹಮ್ಮದ್ ಸಾಧಿಕ್, ರಾಜಶಂಕರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ರಾಮಸ್ವಾಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಇನೇಶ್, ತಾಲೂಕು ಕಸಾಪ ಅಧ್ಯಕ್ಷ ಜೆ.ಎಂ.ಶ್ರೀಹರ್ಷ, ಭೂ ಮಂಜೂರಾತಿ ಸಮಿತಿ ಸದಸ್ಯೆ ಅನ್ನಪೂರ್ಣ ನರೇಶ್, ಸಿರಿಗನ್ನಡ ವೇದಿಕೆ ಅಧ್ಯಕ್ಷ ಚಾವಲ್ಮನೆ ಸುರೇಶ್ ನಾಯ್ಕ್, ಮಾಜಿ ಸೈನಿಕ ಶುಕುರ್ ಅಹಮ್ಮದ್ ಮತ್ತಿತರರು ಇದ್ದರು.