ಪ್ರಕೃತಿ ಪ್ರಿಯರಾಗಿದ್ದ ರಾಷ್ಟ್ರಕವಿ ಕುವೆಂಪು: ಟಿ.ಎಲ್. ದತ್ತಾತ್ರೇಯ

KannadaprabhaNewsNetwork |  
Published : Aug 04, 2025, 11:45 PM IST
ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ      | Kannada Prabha

ಸಾರಾಂಶ

ತರೀಕೆರೆ, ರಾಷ್ಟ್ರಕವಿ ಕುವೆಂಪು ಅವರು ಪರಿಸರವಾದಿ ಹಾಗೂ ಪ್ರಕೃತಿ ಪ್ರಿಯರಾಗಿದ್ದರು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಟಿ.ಎಲ್.ದತ್ತಾತ್ರೇಯ ಹೇಳಿದ್ದಾರೆ.

- ತರೀಕೆರೆಯಲ್ಲಿ ಶ್ರಾವಣ ಸಾಹಿತ್ಯ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ರಾಷ್ಟ್ರಕವಿ ಕುವೆಂಪು ಅವರು ಪರಿಸರವಾದಿ ಹಾಗೂ ಪ್ರಕೃತಿ ಪ್ರಿಯರಾಗಿದ್ದರು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಟಿ.ಎಲ್.ದತ್ತಾತ್ರೇಯ ಹೇಳಿದ್ದಾರೆ.

ತಾಲೂಕು ಕಸಾಪದಿಂದ ಪಟ್ಟಣದ ಅರುಣೋದಯ ವಿದ್ಯಾ ಸಂಸ್ಥೆ ಅವರಣದಲ್ಲಿ ನಡೆದ ಶ್ರಾವಣ ಸಾಹಿತ್ಯ ಸಂಭ್ರಮದಲ್ಲಿ

ಉಪನ್ಯಾಸ ನೀಡಿ ಮಾತನಾಡಿದರು. ಜನಸಾಮಾನ್ಯರಿಲ್ಲದೆ ಜಗತ್ತಿಲ್ಲ ಎಂಬುದೇ ಕವಿ ಆಶಯ. ಇಂಥವರ ಮಗನೇ ಪೂರ್ಣ ಚಂದ್ರ ತೇಜಸ್ವಿ. ಕುವೆಂಪು ಮಗನಾದ ಇವರು ಎಲ್ಲಿಯೂ ತಂದೆ ಹೆಸರು ಹೇಳದೆ ಸ್ವತಃ ತಾವೇ ಸಾಧನೆ ಮಾಡಿ ಹೆಸರು ಗಳಿಸಿದರು. 1938ರಲ್ಲಿ ಜನಿಸಿದ ಇವರು ಜನಸಾಮಾನ್ಯರೊಟ್ಟಿಗೆ ಬೇರೆಯುತ್ತಿದ್ದರು. ಅಂತವರಲ್ಲಿ ಮಾರ, ಲಿಂಗ, ಪ್ಯಾರ, ತಬರ ಹಾಗೂ ಇತರ ವ್ಯಕ್ತಿಗಳ ಜೀವನ ಕುರಿತು ಹಲವಾರು ಕಥೆಗಳನ್ನು ರಚಿಸಿದ್ದಾರೆ ಎಂದು ಹೇಳಿದರು.

ಸುಮಾರು 28 ಕಥೆಗಳನ್ನು ರಚಿಸಿದ್ದಾರೆ, ಚಿದಂಬರ ರಹಸ್ಯ, ಕಿರಗೂರಿನ ಗಯ್ಯಾಳಿಗಳು, ಕಾರ್ವಲೊ, ಜುಗಾರಿ ಕ್ರಾಸ್ ಪ್ರಕೃತಿಗೆ ಹತ್ತಿರವಾಗಿರುವ ಕಥೆಗಳಾದ ಲಿಂಗಬಂದ, ಮಾನಿಟರ್, ನುಂಗಲಾಗದ ತುತ್ತು, ಕಾಡುಕೋಳಿಯ ಕಥೆ ಕುಕ್ಕಟ, ಅಬಚೂರಿನ ಪೋಸ್ಟ್ ಆಪೀಸ್ ಕಥೆಯಲ್ಲಿ ಬೊಬಣ್ಣನ ಅನಕ್ಷರತೆ ಪ್ರಯಾಸದ ಕುರಿತು ವಿವರಣೆ, ತಬರನ ಕಥೆ ತೇಜಸ್ವಿ ಅವರ ಪ್ರಾಣಿ ಪಕ್ಷಿಗಳ ಮಹತ್ವ ಕಥೆಯ ರೂಪದಲ್ಲಿ ವ್ಯಕ್ತಪಡಿಸಿದ್ದಾರೆ.

ಕನ್ನಡ ದೇಶ ನೆಲ, ಜಲ ಉಳಿಸಬೇಕು ಎಂದ ಅವರು ರಾಷ್ಟ್ರ ಕವಿ ಕುವೆಂಪುರವರ ಪ್ರಖ್ಯಾತ ಕವಿತೆ ಸಾಲುಗಳಾದ ಓ ನನ್ನ ಚೇತನ ಆಗು ನೀ ಅನಿಕೇತನ ಸಾಲುಗಳನ್ನು ಹಾಡಿದರು.ತಾಲೂಕು ಕಸಾಪ ಅದ್ಯಕ್ಷ ರವಿ ದಳವಾಯಿ ಮಾತನಾಡಿ ಕನ್ನಡ ಭಾಷೆ ಎನ್ನುವ ವಿಚಾರ ಪರಿಗಣಿಸಿದಾಗ ಓದುವ, ಕಥೆ ಗಳನ್ನು ಕೇಳುವ, ಅನುಭವದ ಕಥೆಗಳನ್ನು ಕೇಳುವ ಮೂಲಕ ಕನ್ಶಡದ ವಿಚಾರ ಕಲಿಯಬಹುದು, ಕನ್ನಡ ಪುಸ್ತಕಗಳನ್ನು ಓದಿ, ಕನ್ನಡ ಕಥೆಗಳನ್ನು ಕೇಳಿ, ಅನುಭವದ ಕಥೆಗಳನ್ನು ಮನೆಯಲ್ಲಿರುವ ಹಿರಿಯರಿಂದ ಕೇಳಿ ತಿಳಿದುಕೊಳ್ಳಬೇಕು. ಬರವಣಿಗೆ, ಓದು ಬರಹ ನಿರಂತರವಾಗಿದ್ದರೆ ಮಾತ್ರ ಕನ್ನಡ ಉಳಿಸಲು ಸಾಧ್ಯ ಎಂದು ಹೇಳಿದರು.ರಾಜ್ಯದಲ್ಲಿ ಹೆಸರು ಗಳಿಸಿರುವ ಅರುಣೋದಯ ಶಾಲೆ ವಿದ್ಯಾರ್ಥಿನಿಯರಾದ ತೇಜಸ್ವಿನಿ ಶಿವಪ್ರಸಾದ್ , ಧನ್ಯಶ್ರೀ ಗೆ ಶುಭ ಕೋರಿದರು.

ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ ಮಾತನಾಡಿ, ಶಾಂತಿ, ನೆಮ್ಮದಿ, ಉನ್ನತಿ, ಶಿಸ್ತು ಎಂಬುದು ಜೀವನದಿ. ಅದನ್ನು ಕಲಿಯಬೇಕು, ತಂದೆ, ತಾಯಿಯನ್ನು ಗೌರವಿಸಬೇಕು. ಪ್ರತಿಭೆ ಹೊಂದಿರುವ ಮಕ್ಕಳಿಗೆ ಇದು ಮೆಟ್ಟಿಲು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಪ್ರತಿಭೆ ತೋರಿಸಿ ಎಂದು ಹೇಳಿದರು.

ಅರುಣೋದಯ ಶಾಲೆ ಕಾರ್ಯದರ್ಶಿ ಡಾ. ಜಿ. ಎಚ್. ಶ್ರೀಹರ್ಷ ಕಲೆ, ಸಾಹಿತ್ಯ ಹಾಗೂ ಪರಂಪರೆಗೆ ಹೆಚ್ಚು ಗೌರವ ಕೊಡುತ್ತಾ, ತರೀಕೆರೆ ಸಂಸ್ಕೃತಿ ಹಾಗೂ ಪರಂಪರೆ ಒಳಗೊಂಡ ಸಾಹಿತ್ಯದ ಪ್ರಕಾರ ನಾಟಕಗಳನ್ನು ಶಾಲಾ ಮಕ್ಕಳಿಂದ ಜನರಿಗೆ ಪ್ರದರ್ಶಿಸಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಾವು ಸಹ ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚು ಉತ್ತೇಜನ ಕೊಡುವುದಾಗಿ ತಿಳಿಸಿದರು.ಕಸಬಾ ಹೋಬಳಿ ಕಸಾಪ ಅಧ್ಯಕ್ಷ ಡಾ.ಟಿ.ಎನ್. ಜಗದೀಶ್ ಮಾತನಾಡಿ ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ಸಾಹಿತ್ಯದ ಅರಿವು ಮೂಡಿಸುವ ಅರುಣೋದಯ ಶಾಲೆಗೆ ಅಭಿನಂದನೆ ಸಲ್ಲಿಸುವೆ. ಈ ಶಾಲೆಯಲ್ಲಿ, ಒಳ್ಳೆಯ ಶಿಕ್ಷಣ, ಶಿಸ್ತು ಹಾಗೂ ಮೌಲ್ಯ ಕಲಿಸುತ್ತಿದ್ದಾರೆ ಎಂದು ಹೇಳಿದರು.ಶಾಲೆ ಮುಖ್ಯ ಶಿಕ್ಷಕಿ ಎಚ್. ಎಂ. ಗೌರಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಜ್ಯೋತಿ ಸತೀಶ್, ರೇಣುಕಾ ಉಪಸ್ಥಿತರಿದ್ದರು.--

4ಕೆಟಿಆರ್.ಕೆ.1ಃ

ತರೀಕರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ಟಿ.ಎಲ್.ದತ್ತಾತ್ರೇಯ, ತಾಲೂಕು ಕಸಾಪ ಅಧ್ಯಕ್ಷ ರವಿದಳವಾಯಿ, ಕಸಬಾ ಹೋಬಳಿ ಅಧ್ಯಕ್ಷ ಡಾ.ಟಿ.ಎನ್.ಜಗದೀಶ್, ತಾ.ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಶಾಲೆ ಮುಖ್ಯ ಶಿಕ್ಷಕಿ ಎಚ್. ಎಂ. ಗೌರಮ್ಮ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ