ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ಗುರುಮಠಕಲ್ ತಾಲೂಕಿನ ಗುಂಜನೂರು, ಚಿನ್ನಕಾರ್ ಕ್ರಾಸ್, ಬೆಟ್ಟದಹಳ್ಳಿ ರಸ್ತೆಯ ಮಾರ್ಗವಾಗಿ ನ.5 ರಂದು ಆಟೋ, ಟಂಟಂಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆಂಬ ಎಂಬ ಮಾಹಿತಿಯ ಮೇರೆಗೆ ಹಠಾತ್ ದಾಳಿ ನಡೆಸಿ 12ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆಯಿಂದ ನಿರಂತರ ಜನ ಜಾಗೃತಿ, ಕಾನೂನು ಅರಿವು, ನೆರವು ಕಾರ್ಯಕ್ರಮ, ಬೀದಿನಾಟಕ, ಆಟೋ-ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಿರಂತರವಾಗಿ ಬಾಲ/ಕಿಶೋರ ಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಹೊರತಾಗಿಯೂ ಆಟೋ, ಟಂಟಂಗಳ ಮೂಲಕ ಕೃಷಿ ಹಾಗೂ ಇನ್ನಿತರೆ ಕೆಲಸಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳ ಚಾಲಕರ ವಿರುದ್ಧ ಆರ್.ಟಿ.ಒ ಅಧಿಕಾರಿಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಯಾದಗಿರಿ ಕಾರ್ಮಿಕ ನಿರೀಕ್ಷಕರಾದ ಸಂಗೀತಾ ಹೊನ್ನೂರು ಮಾತನಾಡಿ, ಓದುವ ಮಕ್ಕಳನ್ನು ಕೂಲಿಗೆ ಕಳುಹಿಸಿ ಮಕ್ಕಳ ಭವಿಷ್ಯವನ್ನು ಕುಗ್ಗಿಸಬೇಡಿ ಎಂದು ಪಾಲಕ, ಪೋಷಕರಿಗೆ ತಿಳಿಸಿ, ಮಕ್ಕಳ ಸಹಾಯವಾಣಿ 1098ಗೆ ಸಂಪರ್ಕಿಸಿ ಎಂದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಇಲಾಖೆಯ ನಿರೀಕ್ಷಕರಾದ ಹಯ್ಯಾಳಪ್ಪ, ಶಿಕ್ಷಣ ಸಂಯೋಜಕರಾದ ಪ್ರಕಾಶ್ ವೀರಶಾಸ್ತ್ರಿ, ಸಿ, ಆರ್, ಪಿ ಜೈಪಾಲ್ ರೆಡ್ಡಿ, ಸರ್ಕಾರಿ ಹಿರಿಯ ಪ್ರೌಢ ಶಾಲೆ ಗುಂಜನೂರು ಮುಖ್ಯೋಪಾಧ್ಯಾಯರಾದ ಆಶಿರೆಡ್ಡಿ ಮಕ್ಕಳ ರಕ್ಷಣ ಘಟಕ 1098ನ ಮಹೇಶ್ ಕುಮಾರ, ಕಾರ್ಮಿಕ ಇಲಾಖೆಯ ಲೆಕ್ಕಿಗರಾದ ಬಾಲು ನಾಯಕ, ಪ್ರಾದೇಶಿಕ ಸಾರಿಗೆ ಇಲಾಖೆಯ ಚಾಲಕರಾದ ಮಾಳಪ್ಪ ಪೂಜಾರಿ, ಗೃಹ ರಕ್ಷಕ ದಳದ ಚಂದ್ರಶೇಖರ್ ಮುದ್ನಾಳ ಉಪಸ್ಥಿತರಿದ್ದರು.