- ದೇಗುಲಕ್ಕೆ ಮಾರ್ಗ ತೋರುವ ದಿಕ್ಸೂಚಿ, ನಾಮಫಲಕ ಇಲ್ಲ । ಕುಡಿಯುವ ನೀರು ಶೌಚಾಲಯದ ಕೊರತೆ
ನಮ್ಮ ನಾಡಿನ ಇತಿಹಾಸ ಸಂಸ್ಕೃತಿ, ಧಾರ್ಮಿಕ, ಸಾಂಸ್ಕೃತಿಕ ಪರಂಪರೆ ಎತ್ತಿಹಿಡಿಯಲು ನಮ್ಮ ಮಹಾರಾಜರಿಂದ ಹಿಡಿದು ಪಾಳೆಗಾರರು, ಸಾಮಂತರು ಕಟ್ಟಿದ ಕೋಟೆ ಕೊತ್ತಲ, ದೇಗುಲಗಳನ್ನು ರಕ್ಷಿಸುವ ದೊಡ್ಡಹೊಣೆ ನಮ್ಮ ಮೇಲಿದೆ.
ಅದೆಷ್ಟೋ ದೇವಾಲಯ, ಸ್ಮಾರಕಗಳು ಇಂದಿಗೂ ನಾಡಿನ ಇತಿಹಾಸ ಸಾರುವ ಜತೆಗೆ ಕಲೆ, ಸಾಹಿತ್ಯ ಸಂಸ್ಕೃತಿಗಳ ಪ್ರತಿಬಿಂಬ ವಾಗಿವೆ. ಅವುಗಳ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾದರೆ ಅಭಿವೃದ್ಧಿ ಕಾಣದೆ ಅಥವಾ ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳನ್ನು ಮುಂದಿನ ಪೀಳಿಗೆಗೂ ಸಂರಕ್ಷಿಸಲು ಸಾಧ್ಯವಾಗಬಹುದು.ಅಂತಹ ದೇಗುಲಗಳ ಸಾಲಿನಲ್ಲಿದೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರ ಅಮೃತಾಪುರ ಗ್ರಾಮದ ಶ್ರೀ ಅಮೃತೇಶ್ವರಸ್ವಾಮಿ ದೇವಾಲಯ. ಶಿಲ್ಪಕಲಾ ವೈಭವ ಮತ್ತು ಕಲಾ ಕೌಶಲ್ಯದ ಹೆಗ್ಗುರುತಾದ ಹೊಯ್ಸಳರ ಶೈಲಿಯ ಈ ದೇಗುಲವನ್ನು ಕ್ರಿ.ಶ.1196ರಲ್ಲಿ ಹೊಯ್ಸಳ ದೊರೆ ದಂಡನಾಯಕ (ಅಮೃತೇಶ್ವರ) ಅಮಿತಯ್ಯನ ಕಾಲದಲ್ಲಿ ನಿರ್ಮಾಣವಾಗಿದ್ದು ಶ್ರೀ ಅಮೃತೇಶ್ವರನ ಪ್ರತಿನಿಧಿಸುವ ಲಿಂಗವನ್ನು ಇಮ್ಮಡಿ ಬಲ್ಲಾಳನಿಂದ ಪ್ರತಿಷ್ಠಾಸಲ್ಪಿಟ್ಟಿತ್ತು ಎಂಬ ಮಾಹಿತಿ ಇದೆ.
ಶ್ರೀ ಅಮೃತೇಶ್ವರಸ್ವಾಮಿ ದೇವಾಲಯದಲ್ಲಿ ಬಹು ಅಪರೂಪದ ಅಗ್ನಿ ಶಿವಲಿಂಗ, ವಿದ್ಯಾಧಿದೇವತೆ ಶ್ರೀ ಶಾರದೆ, ಪ್ರಾಂಗಣ ದಲ್ಲಿರುವ ಶಿಲಾಸ್ಥಂಭಗಳು, ಸುಂದರವಾದ ನಂದಿ ಮೂರ್ತಿ, ದೇವಸ್ಥಾನ ಸುತ್ತ ಶಿಲ್ಪದಲ್ಲಿ ಕೆತ್ತಿರುವ ರಾಮಾಯಣ, ಮಹಾಭಾರತ , ಉಪನಿಷತ್, ಭಾಗವತ, ಪುರಾಣದ ಅದ್ಬುತ ಕಲೆ, ವಿವಿಧ ಬಗೆಯ ಚಿತ್ತಾರ ಪ್ರಾಚೀನ ಕಲೆಯ ಕೇಂದ್ರಬಿಂದುವೆನಿಸಿದೆ.
ಪ್ರತಿ ವರ್ಷದ ಮಕರ ಸಂಕ್ರಮಣ, ಶಿವರಾತ್ರಿ ಇನ್ನಿತರ ಹಬ್ಬ ಹರಿದಿನ, ಜಾತ್ರೆ ಉತ್ಸವಗಳು ಮತ್ತು ರಜಾ ದಿನಗಳಲ್ಲಿ ಪ್ರವಾಸಿಗರು ಪುಣ್ಯಕ್ಷೇತ್ರದ ಶಿವಲಿಂಗದ ದರ್ಶನ ಪಡೆದು ಇಲ್ಲೆ ಒಂದೆರಡು ದಿನ ಉಳಿದುಕೊಳ್ಳಲು ಇಚ್ಚಿಸಿದರೂ ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದು ಪ್ರವಾಸೋದ್ಯಮಕ್ಕೂ ಧಕ್ಕೆಯಂತಾಗಿದೆ.
-- ಬಾಕ್ಸ್--
ಈ ಪ್ರಸಿದ್ಧ ದೇಗುಲಕ್ಕೆತಲುಪಲು ಮಾರ್ಗ ಸೂಚಿಸುವ ಫಲಕಗಳಿಲ್ಲದೆ ಪ್ರವಾಸಿಗರಿಗೆ ಅವ್ಯವಸ್ಥೆ ಅನುಭವಕ್ಕೆ ಬರುತ್ತದೆ. ಅಮೃತೇಶ್ವರ ದೇಗುಲಕ್ಕೆ ಬರಲು ವಿವಿಧ ಸ್ಥಳಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ, ಅಜ್ಜಂಪುರ ಕ್ರಾಸ್ ಬಳಿ ಮಾರ್ಗ ಸೂಚಿ ಅಳವಡಿಸುವ ಅಗತ್ಯವಿದೆ. ವಿವಿಧ ಕಡೆಗಳಿಂದ ಇಲ್ಲಿಗೆ ಬರಬಹುದಾಗಿದ್ದು ತರೀಕೆರೆ ಮತ್ತು ಅಜ್ಜಂಪುರ ಭಾಗಗಳಿಂದ ಸಾರಿಗೆ ವ್ಯವಸ್ಥೆ ಅಗತ್ಯವಾಗಿ ಬೇಕಿದೆ. ದೇವಸ್ಥಾನಕ್ಕೆ ವರ್ಷದ ಎಲ್ಲಾ ಕಾಲದಲ್ಲೂ ಆಗಮಿಸುವ ಪ್ರವಾಸಿಗರಿಗೆ ಇಲ್ಲಿ ತಂಗಲು ನೆಪಮಾತ್ರಕ್ಕೆ ಯಾತ್ರಿನಿವಾಸ ಇದ್ದರೂ ಅದರ ಬಾಗಿಲು ಯಾವಾಗ ತೆರೆದಿರುತ್ತದೆ ಎಂಬುದು ಗೊತ್ತಾಗುವುದೇ ಇಲ್ಲ.
ದಾಸೋಹ ಸಮಿತಿ ಉಸ್ತುವಾರಿಪೋಟೋ ಇದೆ7ಕಟಿಆರ್.ಕೆ 08ಃ. ತರೀಕೆರೆ ಸಮೀಪದ ಅಮೃತಾಪುರ ಗ್ರಾಮದಲ್ಲಿರುವ ಶ್ರೀ ಅಮೃತೇಶ್ವರಸ್ವಾಮಿ ದೇವಸ್ಥಾನ7ಕೆಟಿಆರ್.ಕೆ.09ಃ ಯಾತ್ರಿಕರ ನಿವಾಸ7ಕೆಟಿಆರ್.ಕೆ.10ಃ ದೇಗುಲದಿಂದ ದೂರ ಇರುವ ನೀರೇ ಇಲ್ಲದ ಶೌಚಾಲಯ