ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ದೇವಾಲಯಗಳ ಒಕ್ಕೂಟ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರೂ ಆಧ್ಯಾತ್ಮಿಕ ಹಾಗೂ ವ್ಯವಹಾರಿಕ ಶಿಕ್ಷಣ ಸಿದ್ದಾಂತಗಳ ಪಾಲನೆ ಮಾಡಬೇಕಾಗಿದೆ, ನಾಮ ಜಪ ಮೂಲಕ ಭಗವಂತನ ಅನುಗ್ರಹ ಸಾಧ್ಯ ಎಂದ ಅವರು, ಆಧ್ಯಾತ್ಮಿಕ ಸಾಧನೆ ಮೂಲಕ ಆನಂದ ಹಾಗೂ ತೃಪ್ತಿ ದೊರೆಯುತ್ತದೆ ಎಂದು ಹೇಳಿದರು.ಗುರು ಪೂರ್ಣಿಮಾ ಮಹತ್ವದ ಬಗ್ಗೆ ಮಾತನಾಡಿದ ಅವರು, ಈ ತಿಂಗಳ 21ರಂದು ಕುಶಾಲನಗರ ಗೌಡ ಸಮಾಜ ಸಭಾಂಗಣದಲ್ಲಿ ನಡೆಯುವ ಗುರು ಪೂರ್ಣಿಮಾ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕುಶಾಲನಗರ ದೇವಾಲಯ ಒಕ್ಕೂಟದ ಅಧ್ಯಕ್ಷ ಎಂ ಕೆ ದಿನೇಶ್, ದೇವಾಲಯಗಳ ಒಕ್ಕೂಟದ ಮಹತ್ವದ ಬಗ್ಗೆ ಮಾಹಿತಿ ತಿಳಿಸಿದರು. ಕಳೆದ ಏಳು ವರ್ಷಗಳಿಂದ ನಿರಂತರವಾಗಿ ಒಕ್ಕೂಟದ ಮೂಲಕ ಮಾಡಿರುವ ಕಾರ್ಯ ಸಾಧನೆಗಳ ಬಗ್ಗೆ ತಿಳಿಸಿದರು.ಒಕ್ಕೂಟದ ಮೂಲಕ ಪ್ರತಿಯೊಂದು ದೇವಾಲಯಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವಂತೆ ಅವರು ಕೋರಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಂ ಎನ್ ಚಂದ್ರಮೋಹನ್, ಖಜಾಂಚಿ ಎಸ್ ಕೆ ಶ್ರೀನಿವಾಸ್, ಕುಶಾಲನಗರ ವಿವಿಧ ದೇವಾಲಯಗಳ ಪ್ರತಿನಿಧಿಗಳು ಮತ್ತು ಹಿಂದು ಜನ ಜಾಗೃತಿ ವೇದಿಕೆ ಪ್ರಮುಖರಾದ ಶ್ರೀ ಲಕ್ಷ್ಮಿ ಇದ್ದರು.