ಯುವಜನತೆಯಲ್ಲಿ ಮಾರ್ಗದರ್ಶನ ಕೊರತೆ: ಭೀಮುನಾಯಕ ವಿಷಾದ

KannadaprabhaNewsNetwork |  
Published : Feb 01, 2025, 12:01 AM IST
ಯಾದಗಿರಿ ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಮೊದಲ ಜಿಲ್ಲಾ ಸಮಿತಿ ಸಭೆ ಜರುಗಿತು. | Kannada Prabha

ಸಾರಾಂಶ

Lack of guidance among youth: Bhimunayaka laments

- ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಮೊದಲ ಜಿಲ್ಲಾ ಸಮಿತಿ ಸಭೆ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಯುವಕರು ಸಂಘಟನೆ ಬಲಪಡಿಸುವಲ್ಲಿ ಕೆಲಸ ಮಾಡಬೇಕೆಂದು ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ನಡೆದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಮೊದಲ ಜಿಲ್ಲಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಯುವಜನಾಂಗದಿಂದ ಅಸಾಧ್ಯವಾದದು ಯಾವುದು ಇಲ್ಲ. ಆದರೆ, ಯುವಜನತೆಗೆ ಸೂಕ್ತ ಸಂಘಟನೆ, ಮಾರ್ಗದರ್ಶನದ ಕೊರತೆ ಕಾರಣದಿಂದ ದುಶ್ಚಟಗಳಿಗೆ ಈಡಾಗುತ್ತಿದ್ದು, ಜಿಲ್ಲೆಯ ಭವಿಷ್ಯದ ಮೇಲೆ ಕೆಟ್ಟ ನೆರಳು ಬೀಳುವಂತಾಗುತ್ತಿದೆ ಎಂದು ವಿಷಾದಿಸಿದರು.

ಕರವೇ ಯುವ ಕಾರ್ಯಕರ್ತರು ಮನಗಂಡು ಯುವಕರನ್ನು ಸಂಘಟಿಸಬೇಕು. ಜೂಜು, ಬೆಟ್ಟಿಂಗ್ ನಂತಹ ಗೀಳಿನ ಕಡೆಗೆ ಸಾಗುವ ಯುವಕರಿಗೆ ಸಂಘಟನೆ ಹೋರಾಟಗಳ ಕಡೆಗೆ ಕರೆತರಬೇಕು. ಇಂತಹ ಅನಿಷ್ಟಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಭೆಯ ನೇತೃತ್ವವನ್ನು ಜಿಲ್ಲಾ ಯುವ ಘಟಕದ ಅಧ್ಯಕ್ಷ ಯಮುನಯ್ಯ ಗುತ್ತೇದಾರ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ, ಹಣಮಂತ ನಾಯಕ ಖಾನಳ್ಳಿ, ಸಿದ್ಧಲಿಂಗರಡ್ಡಿ ಮುನಗಲ್, ಅನಿಲ್ ದಾಸನಕೇರಿ, ನಾಗರಾಜ ತಾಂಡೂರಕರ್, ಸಾಬು ನೀಲಳ್ಳಿ, ಅಬ್ದುಲ್ ರಿಯಾಜ್, ನಾಗೆಂದ್ರ ಕುಡ್ಲೂರು, ಪಿಡ್ಡಪ್ಪ ನಾಯಕ ವಡಗೇರಾ ಇದ್ದರು.

ಯುವ ಘಟಕ ರಚನೆ: ವಿಜಯಕುಮಾರ ರಾಠೋಡ (ಜಿಲ್ಲಾ ಉಪಾಧ್ಯಕ್ಷ), ಬಸವರಾಜ ಚಾಮಾ (ಸಹಕಾರ್ಯದರ್ಶಿ), ಹಣಮಂತ ನಾನೇಕ (ಸಂ. ಕಾರ್ಯದರ್ಶಿ) ಅವರನ್ನು ಯುವ ಘಟಕಕ್ಕೆ ನೇಮಕ ಮಾಡಲಾಯಿತು.

------

ಫೋಟೋ: ಯಾದಗಿರಿ ನಗರದ ಜಿಲ್ಲಾ ಕರವೇ ಕಾರ್ಯಾಲಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಯುವ ಘಟಕದ ಮೊದಲ ಜಿಲ್ಲಾ ಸಮಿತಿ ಸಭೆ ಜರುಗಿತು.

31ವೈಡಿಆರ್‌8

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ