ಬಿಜೆಪಿಗೆ ಬೇಕು ಕಾಂಗ್ರೆಸ್‌ನ ಸಹಕಾರ । ಸದ್ಯದ ಪರಿಸ್ಥಿತಿಯಲ್ಲಿ ಕೈ ನಿಲುವು ತಟಸ್ಥ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪಕ್ಷಕ್ಕೆ ಚಳ್ಳೆ ಹಣ್ಣು ತಿನಿಸಿರುವ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ತರಲು ಬಿಜೆಪಿಗೆ ಸಂಖ್ಯಾ ಬಲದ ಕೊರತೆ ಅಡ್ಡಗಾಲು ಹಾಕಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದತ್ತ ಸಹಾಯದ ಕೈ ಚಾಚಿದೆ. ಆದರೆ, ಕಾಂಗ್ರೆಸ್ ಪಕ್ಷ ತಟಸ್ಥವಾಗಿರಲು ತೀರ್ಮಾನ ತೆಗೆದುಕೊಂಡಿದೆ. ಅವರದೇ ಪಕ್ಷದ ನಗರಸಭಾಧ್ಯಕ್ಷರನ್ನು ಅಧಿಕಾರದಿಂದ ಇಳಿಸಲು ಅವರೇ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ನಾವೇಕೆ ತಲೆ ಕೆಡಿಸಿಕೊಳ್ಳಬೇಕೆಂಬ ನಿಲುವಿಗೆ ಕಾಂಗ್ರೆಸ್ ಮುಖಂಡರು ಬಂದಿದ್ದಾರೆ. ನಗರಸಭೆ ಸದಸ್ಯರ ಬಲ ಒಟ್ಟು 35, ಈ ಪೈಕಿ ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 3 ಹಾಗೂ ಪಕ್ಷೇತರ ಇಬ್ಬರು ಇದ್ದಾರೆ. ಅವಿಶ್ವಾಸ ನಿರ್ಣಯದ ಸಭೆ ಕರೆಯಲು ಜಿಲ್ಲಾಧಿಕಾರಿಗಳಿಗೆ ಕೋರಿಕೆ ಪತ್ರ ಸಲ್ಲಿಸಲು 24 ಮಂದಿ ಸಹಿ ಮಾಡಬೇಕು. ಈ ನಿಟ್ಟಿನಲ್ಲಿ ಬಿಜೆಪಿ ನಗರಸಭೆ ಸದಸ್ಯರು ಸೋಮವಾರ ಸಹಿ ಸಂಗ್ರಹದಲ್ಲಿ ತೊಡಗಿದ್ದರು. ನಗರಸಭೆಗೆ ಬೆಳಿಗ್ಗೆ ಆಗಮಿಸಿದ ನಗರಸಭೆ ಸದಸ್ಯರು ಅಧ್ಯಕ್ಷರ ಕೊಠಡಿಯಲ್ಲಿ ಕುಳಿತು ಸಹಿ ಸಂಗ್ರಹಿಸಿದರು. ಬಿಜೆಪಿಯ 18 ಮಂದಿಯಲ್ಲಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೊರತುಪಡಿಸಿ ಇನ್ನುಳಿದ 17 ಮಂದಿ ಅವಿಶ್ವಾಸ ನಿರ್ಣಯದ ಕೋರಿಕೆ ಅರ್ಜಿಗೆ ಸಹಿ ಹಾಕಿದ್ದಾರೆ. ಇದರ ಜತೆಗೆ ಜೆಡಿಎಸ್‌ನ 3 ಮಂದಿ, ಓರ್ವ ಪಕ್ಷೇತರರು ಸೇರಿದಂತೆ ಒಟ್ಟು 21 ಮಂದಿ ಸಹಿ ಮಾಡಿದ್ದಾರೆ. ಅವಿಶ್ವಾಸ ನಿರ್ಣಯದ ಸಭೆ ಕರೆಯಲು ಇನ್ನು 3 ಮಂದಿ ಸಹಿ ಮಾಡಬೇಕು. ಹಾಗಾಗಿ ಕಾಂಗ್ರೆಸ್ ಪಕ್ಷದ ಸಹಕಾರ ಕೇಳುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನವೂ ಕೂಡ ಆಗಿದೆ.ಕಾಂಗ್ರೆಸ್ ನಿಲುವು: ಅವರದೇ ಪಕ್ಷದ ಅಧ್ಯಕ್ಷರನ್ನು ಕೆಳಗೆ ಇಳಿಸಲು ನಮ್ಮ ಸಹಕಾರ ಕೋರುವುದು, ಅದಕ್ಕೆ ನಾವು ಬೆಂಬಲ ಸೂಚಿಸುವುದರಲ್ಲಿ ಅರ್ಥವಿಲ್ಲ ಎಂಬುದು ಕಾಂಗ್ರೆಸ್ ನಿಲುವುದು. ಅವರು ಏನಾದ್ರೂ ಮಾಡ್ಲಿ, ನಾವು ಮಧ್ಯ ಪ್ರವೇಶ ಮಾಡುವುದಿಲ್ಲ, ಕಾರಣ, ವರಸಿದ್ಧಿ ವೇಣು ಗೋಪಾಲ್ ಕೆಳಗೆ ಇಳಿದರೆ, ಮತ್ತೇ ಬಿಜೆಪಿಯವರೇ ಅಧ್ಯಕ್ಷರಾಗುತ್ತಾರೆ. ಸಹಕಾರ ನೀಡುವ ಕಾಂಗ್ರೆಸ್ ಪಕ್ಷಕ್ಕೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡ್ತಾರಾ ಎಂಬುದು ಕಾಂಗ್ರೆಸ್ ಮುಖಂಡರ ಪ್ರಶ್ನೆ. ಸದ್ಯದ ಪರಿಸ್ಥಿತಿ ನೋಡಿದರೆ, ವರಸಿದ್ದಿ ವೇಣುಗೋಪಾಲ್ ಅವರ ನಡೆ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತಿ ಪಕ್ಷದವರ ಸಹಕಾರ ಕೇಳುವ ಹಾಗೂ ಅವರು ಹೇಳಿದಂತೆ ಕೇಳುವ ಪರಿಸ್ಥಿತಿ ತಂದ್ದೊಡ್ಡಿದ್ದಾರೆ. ಇದರಿಂದ ಹೊರ ಬರಲು ಬಿಜೆಪಿ ಮುಂದಿನ ದಿನಗಳಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ಕುತೂಹಲ ಜನರ ಮುಂದಿದೆ. ---- ಕೋಟ್ -----
ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರುವ ವಿಷಯದಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರನ್ನು ಖುದ್ದಾಗಿ ಭೇಟಿ ಮಾಡಿ ಸಹಿ ಮಾಡುವಂತೆ ಕೇಳಿಕೊಂಡಿದ್ದೇವೆ. ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ತೀರ್ಮಾನ ತಿಳಿಸುವುದಾಗಿ ಸದಸ್ಯರು ಹೇಳಿದ್ದಾರೆ.ಟಿ. ರಾಜಶೇಖರ್‌ನಗರಸಭೆಯ ಬಿಜೆಪಿ ಸದಸ್ಯರು
16 ಕೆಸಿಕೆಎಂ 3----- 16 ಕೆಸಿಕೆಎಂ 4ಚಿಕ್ಕಮಗಳೂರು ನಗರಸಭೆ.