ಕನ್ನಡಪ್ರಭ ವಾರ್ತೆ ಕೋಲಾರಒಕ್ಕಲಿಗ ಸಮುದಾಯದಲ್ಲಿ ಸಂಘಟನೆಯ ಕೊರತೆಯಿರುವುದರಿಂದ ಚದುರಿ ಹೋಗಿದೆ. ಇದರಿಂದಾಗಿ ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ, ಇನ್ನಾದರು ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ತಪ್ಪಿದಲ್ಲ ಎಂದು ಗೌಡರ ವೇದಿಕೆ ಸಂಸ್ಥಾಪಕ ಕೃಷ್ಣೇಗೌಡ ಎಚ್ಚರಿಸಿದರು.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗೌಡರ ವೇದಿಕೆ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹೆಸರಿಗಷ್ಟೇ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಿದೆ, ಆದರೆ ನಿಜವಾಗಿಯೂ ನಿಗಮದಿಂದ ಅರ್ಹರಿಗೆ ಸೌಲಭ್ಯಗಳು ಸಿಗುತ್ತಿಲ್ಲ ಎಂದು ದೂರಿದರು.ಯೋಜನೆಗಳು ಕೆಲವರ ಪಾಲು
ದಳಸನೂರು ಗೋಪಾಲಕೃಷ್ಣ ಮಾತನಾಡಿ, ಒಕ್ಕಲಿಗ ಸಮುದಾಯದಲ್ಲಿ ಬಡವರು ಶ್ರೀಮಂತರು ಇದ್ದಾರೆ, ಉಪ ಜಾತಿಗಳ ಹೆಸರಿನಲ್ಲಿ ಒಕ್ಕಲಿಗ ಸಮುದಾಯ ಚದುರುಹೋಗಿದೆ, ಒಗ್ಗಟ್ಟಾಗದಿದ್ದರೆ ಮುಂದೆ ಒಂದಾಗುವುದು ಕಷ್ಟ, ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕೆಂದರು.
ಒಕ್ಕಲಿಗ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ.ಕುಮಾರ್ ಮಾತನಾಡಿ, ಜಾತಿ ಗಣತಿ ವೈಜ್ಞಾನಿಕವಾಗಿಲ್ಲ. ಜಾತಿಗಣತಿ ಬಿಡುಗಡೆ ಮಾಡಿ ಅದರಲ್ಲಿ ಒಕ್ಜಲಿಗರಿಗೆ ಅನ್ಯಾಯವಾದರೆ ಹೋರಾಟಕ್ಕೆ ಇಳಿಯಬೇಕು ಎಂದು ಹೇಳಿದರು.ರಾಜಕಾರಣಿಗಳೇ ಕಾರಣ
ಗೌಡತಿಯರ ವೇದಿಕೆ ಅಧ್ಯಕ್ಷೆ ರೇಣುಕಾ ಮಾತನಾಡಿ, ಒಕ್ಕಲಿಗ ಸಮುದಾಯವನ್ನು ಚದುರಿಸುತ್ತಿರುವು ರಾಜಕಾರಣಿಗಳೆ, ಚುನಾವಣೆಯಲ್ಲಿ ಗೆಲ್ಲುವ ಮುಂಚೆ ಸಮುದಾಯ, ಗೆದ್ದ ಮೇಲೆ ಎಲ್ಲಾ ಸಮುದಾಯ ಅಂತಾರೆ ರಾಜಕಾರಣಿಗಳು ಎಂದು ಹೇಳಿದರು.ಮುಖಂಡರಾದ ಆಲಂಗೂರು ಶಿವಣ್ಣ, ಡಾ.ವೈ.ವಿ.ವೆಂಕಟಚಲಪತಿ, ಸಂಶೋಧಕಿ ಸುನಿತಾ, ಬಾಬು ಮೌನಿ, ಎನ್.ನಾಗರಾಜ್, ರವಿ ಕುಮಾರ್, ಸುನಿತಾ ಇದ್ದರು.