ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಹರ್ಷ ಅವರ ಎ-ಎಂ ಟು ಪಿ-ಎಂ ಡ್ಯಾನ್ಸ್ ಟ್ರೂಪ್ ಹಾಗೂ ಮೌನೇಶ್ವರ ಎನ್.ಹೆಚ್, ಲಯನ್ಸ್ ಬ್ಲಡ್ ಬ್ಯಾಂಕ್ ಇವರ ಸಂಯುಕ್ತಾಶ್ರಯದಲ್ಲಿ ಡಾ.ಪುನೀತ್ ರಾಜಕುಮಾರ್ ಅವರ 5ನೇ ವರ್ಷದ ಪುಣ್ಯಸ್ಮರಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಕಲಚೇತನರ ನೃತ್ಯ ಸ್ಪರ್ಧೆ ಮತ್ತು ಉಚಿತ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಭಾಷಾ ಹಕ್ಕುಗಳ ರಕ್ಷಣೆ ಮತ್ತು ಮಾತೃಭಾಷೆಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಪ್ರತಿಯೊಬ್ಬ ಕನ್ನಡಿಗನೂ ಜಾಗೃತನಾಗಬೇಕಾದ ಅಗತ್ಯವಿದೆ. ಅದಕ್ಕಾಗಿ ಎಲ್ಲರೂ ಗಟ್ಟಿ ದನಿ ಎತ್ತಬೇಕಾಗಿದೆ. ನೆರೆ ರಾಜ್ಯಗಳಲ್ಲಿ ಹಾಗೂ ರೈಲ್ವೆಯ ವಿವಿಧ ವಿಭಾಗೀಯ ಪರೀಕ್ಷೆ ಮತ್ತು ಸೇವೆಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ನೈಋತ್ಯ ರೈಲ್ವೆ ಒಳಗೊಂಡಂತೆ ವಿವಿಧ ವಿಭಾಗಗಳ ಪರೀಕ್ಷೆ ಮತ್ತು ಆಡಳಿತಾತ್ಮಕ ಸೇವೆಗಳಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದರು.ಭಾಷೆಯ ಉಳಿವು ಮತ್ತು ಹಕ್ಕುಗಳ ಹೋರಾಟ ಕೇವಲ ಕನ್ನಡಪರ ಅಥವಾ ರಕ್ಷಣಾ ವೇದಿಕೆಗಳಿಗೆ ಮಾತ್ರ ಸೀಮಿತವಾಗಬಾರದು. ರಾಜ್ಯದ ಪ್ರತಿಯೊಬ್ಬ ಪ್ರಜೆಯೂ ಒಗ್ಗೂಡಿ ನಮ್ಮ ಭಾಷಿಕ ಹಕ್ಕುಗಳಿಗಾಗಿ ನಿಯಮಿತವಾಗಿ ಧ್ವನಿ ಎತ್ತುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಬಿ.ರಶ್ಮಿ, ಜಿಎಂಐಟಿ ಪ್ರಾಂಶುಪಾಲೆ ಶ್ವೇತಾ ಮರಿಗೌಡರ್, ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸಂಸ್ಥೆಯ ಬಿ.ಹರ್ಷ, ರೇಖಾ ಹರ್ಷ, ಮನೋಜ್ ನಾಯ್ಕ, ವಿಜಯಾನಂದ, ಆಥ್ವಿಕ್, ಜ್ಯೂನಿಯರ್ ಪುನೀತ್ ರಾಜ್‌ಕುಮಾರ್, ಸುರೇಶ್ , ಇತರರು ಇದ್ದರು.