ಅಣ್ಣಿಗೇರಿ:
ಪಟ್ಟಣದ ಬಸ್ ನಿಲ್ದಾಣದ ಹತ್ತಿರದ ಪಕ್ಷಾತೀತ ಹೋರಾಟ ಸಮಿತಿ ವೇದಿಕೆಯಲ್ಲಿ ಪಂಪ ಸಿರಿ ಕನ್ನಡ ಬಳಗ ಹಾಗೂ ಕನ್ನಡಪರ ಸಂಘಟನೆಗಳ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ "ಶ್ರೇಷ್ಠ ಕೃಷಿ ಋಷಿ " ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಕಮಲಾ ಪೀರ ದರ್ಗಾದ ಜನಾಬ್ ಸಯ್ಯದ್ ಸಜ್ಜಾದಖಾದ್ರಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕವಿ, ಸಾಹಿತಿ ಅಮೃತೇಶ ತಂಡರ್ ಹಾಗೂ ಪಂಪ ಸಿರಿ ಕನ್ನಡ ಬಳಗದಿಂದ "ಶ್ರೇಷ್ಠ ಕೃಷಿ ಋಷಿ " ಪ್ರಶಸ್ತಿ ಸ್ವೀಕರಿಸಿದ ಮಹಿಳಾ ಸಾಧಕಿ ಶಿವಲೀಲಾ ಹಿತ್ತಲಮನಿ ಮಾತನಾಡಿದರು. ಕೃಷಿ ಅಧಿಕಾರಿ ವೀರಣ್ಣ ಗಡಾದ ಅವರು ಸಾವಯವ ಕೃಷಿ ಕುರಿತು ಉಪನ್ಯಾಸ ನೀಡಿದರು.ಈ ವೇಳೆ ಪ್ರೊ. ಎಸ್.ಎಸ್. ಹರ್ಲಾಪುರ, ಮಕ್ಕಳ ಸಾಹಿತಿ ಎಂ.ಎಸ್. ಪೂಜಾರ, ರೈತ ಮುಖಂಡರಾದ ಜಯರಾಜ ಹೂಗಾರ, ಭಗವಂತಪ್ಪ ಪುಟ್ಟನವರ, ಷಣ್ಮುಖಣ್ಣ ಗುರಿಕಾರ, ಶಶಿಧರಯ್ಯ ಮುಖಂಡಮಠ, ಜೆ.ಕೆ. ಅಣ್ಣಿಗೇರಿ, ವಿ.ಪಿ. ಗುರಿಕಾರ, ಸಾಹಿತ್ಯ ಪರಿಷತ್ ಅಧ್ಯಕ್ಷ ಅನ್ವರ್ ಹುಬ್ಬಳ್ಳಿ, ಎಚ್.ಡಿ. ಬೆಟಗೇರಿ, ಬಾಬಾಜಾನ್ ಘುಡುನಾಯ್ಕರ್, ಹನುಮಂತಪ್ಪ ಮಾಯಣ್ಣನವರ, ಅಮೃತ ಯರೇಹಂಚಿನಾಳ, ರಫೀಕ್ ಕಲೇಗಾರ ಸೇರಿದಂತೆ ಹಲವರಿದ್ದರು. ಡಾ. ಲಲಿತಾ ಸಾಲಿಮಠ ನಿರೂಪಿಸಿದರು. ನಿರ್ಮಲಾ ಬಿಳೇಬಾಳ ಪ್ರಾರ್ಥಿಸಿದರು. ಪಾಂಡುರಂಗ ಕೋಕಾಟಿ ವಂದಿಸಿದರು.