ಭತ್ತದ ನಾಟಿ ಕಾರ್ಯಕ್ಕೆ ಮುಂದೆ ಸಾಗುವುದು ಹೇಗೆ?
ಶಂಕರ್ ಜಿ. ಜಾವೂರ
ಕನ್ನಡಪ್ರಭ ವಾರ್ತೆ ಶಿರಸಿಮಳೆ ಬಾರದೆ ಇರುವುದರಿಂದ ಬನವಾಸಿ ಪೂರ್ವ ಭಾಗದ ರೈತರು ಕಂಗಾಲಾಗಿದ್ದಾರೆ.
ದಾಸನಕೊಪ್ಪ, ಬಿಸಲಕೊಪ್ಪ, ಅಂಡಗಿ, ರಾಮಾಪುರ, ಮರಗುಂಡಿ, ದೊಡ್ನಳ್ಳಿ, ಬದನಗೋಡು, ಕಾಳಂಗಿ, ದನಗನಹಳ್ಳಿ , ಕೊರ್ಲಕಟ್ಟ, ಉಂಚಳ್ಳಿ ಮತ್ತು ಕುಂಬಾರ ಕಟ್ಟಿಕೆರೆ, ಹಿರೇಕೆರೆ ಕೆರೆ ಮುಂತಾದ ಕಡೆಗಳಲ್ಲಿ ಮಳೆ ಕೊರತೆ ಇದೆ.
ಭತ್ತ ಬಿತ್ತನೆ ಮಾಡಿದ ಸಾವಿರಾರು ಹೆಕ್ಟೇರ್ ಪ್ರದೇಶದ ಪೈರು ಒಣಗಿ ನಾಶವಾಗುವ ಆತಂಕದಲ್ಲಿ ಈ ಭಾಗದ ರೈತರಿದ್ದಾರೆ. ಇನ್ನು 3,500 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ನಾಟಿ ಮಾಡುವುದು ಬಾಕಿ ಇದೆ. ಆದರೆ ಈಗಲೇ ರೈತರಿಗೆ ಬರಗಾಲದ ಆತಂಕ ಸೃಷ್ಟಿಯಾಗಿದೆ.
ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಮಳೆಮಾಪನಗಳನ್ನು ಸರಿಯಾಗಿ ಕಾರ್ಯನಿರ್ವಹಿಸುವಂತೆ ದುರಸ್ತಿಗೊಳಿಸಿ ರೈತರಿಗೆ ಸರಿಯಾದ ಸಮಯದಲ್ಲಿ ವಿಮೆಯ ಪರಿಹಾರದ ಹಣ ತಲುಪುವಂತೆ ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಮುತುವರ್ಜಿವಹಿಸಿ ರೈತರ ಹಿತವನ್ನು ಕಾಪಾಡಬೇಕೆಂದು ಬನವಾಸಿ ಪೂರ್ವ ಭಾಗದ ರೈತರು ಒತ್ತಾಯಿಸಿದ್ದಾರೆ.ಕಳೆದ ನಾಲ್ಕು ದಿನಗಳಿಂದ ಮಳೆ ಕೊರತೆ ಎದ್ದು ಕಾಣುತ್ತಿದೆ. ಈಗಾಗಲೇ ರೈತರು ಸುಮಾರು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಬಿತ್ತನೆ ಮಾಡಿದ್ದಾರೆ. ಇನ್ನು 3500 ಪ್ರದೇಶದಲ್ಲಿ ನಾಟಿ ಮಾಡುವ ಕಾರ್ಯ ಬಾಕಿ ಉಳಿದಿದೆ. ಮುಂದೆ ಹೆಚ್ಚಿನ ಮಳೆಯಾದರೆ ರೈತರಿಗೆ ನಾಟಿ ಕಾರ್ಯ ಮಾಡಲು ಅನುಕೂಲವಾಗುತ್ತದೆ. ಒಂದು ವೇಳೆ ಹೀಗೆ ಮುಂದುವರಿದರೆ ನಾಟಿ ಮಾಡಲು ಹಿನ್ನಡೆ ಆಗಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಮಧುಕರ್ ನಾಯ್ಕ್ ತಿಳಿಸಿದ್ದಾರೆ.