ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ

KannadaprabhaNewsNetwork |  
Published : Jul 16, 2026, 03:30 AM IST
ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ ಆಚರಿಸಲಾಯಿತು | Kannada Prabha

ಸಾರಾಂಶ

ಮಂಗಳೂರಿನ ಸರ್ಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವೈದ್ಯರ ದಿನ ಆಚರಿಸಲಾಯಿತು. ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಪರಸ್ಪರ ಒಡಂಬಡಿಕೆಯೊಂದಿಗೆ ಕಳೆದ ಎಪ್ಪತ್ತು ವರ್ಷಗಳಿಂದ ಸಾರ್ವಜನಿಕ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದು, ಈ ಎರಡೂ ಸಂಸ್ಥೆಗಳ ವೈದ್ಯರ ಸೇವಾ ಕೈಂಕರ್ಯವನ್ನು ಸ್ಮರಿಸಲಾಯಿತು.

ಮಂಗಳೂರು: ಮಂಗಳೂರಿನ ಸರ್ಕಾರಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ವೈದ್ಯರ ದಿನ ಆಚರಿಸಲಾಯಿತು.

ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಪರಸ್ಪರ ಒಡಂಬಡಿಕೆಯೊಂದಿಗೆ ಕಳೆದ ಎಪ್ಪತ್ತು ವರ್ಷಗಳಿಂದ ಸಾರ್ವಜನಿಕ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನೀಡುತ್ತಾ ಬಂದಿದ್ದು, ಈ ಎರಡೂ ಸಂಸ್ಥೆಗಳ ವೈದ್ಯರ ಸೇವಾ ಕೈಂಕರ್ಯವನ್ನು ಸ್ಮರಿಸಲಾಯಿತು.

ಹಿರಿಯ ತಜ್ಞರಾದ ಡಾ.ಆರ್.ಎಲ್.ಕಾಮತ್, ಡಾ.ಎಸ್.ಆರ್.ನಾಯಕ್, ಡಾ.ಅಶ್ಫಾಕ್, ಡಾ.ಸುರೇಶ್ ಶೆಟ್ಟಿ, ಡಾ.ಶ್ರದ್ಧಾ ಶೆಟ್ಟಿ, ಡಾ.ಪ್ರಿಯಾ ಬಲ್ಲಾಳ್, ಡಾ.ಅನುಪಮಾ ಸುರೇಶ್, ಡಾ.ನಿಖಿಲ್ ಶೆಟ್ಟಿ, ಡಾ.ಭಾರತಿ ರಾವ್, ಡಾ.ಸಂತೋಷ್‌ ರೈ, ಡಾ.ರಂಜನ್, ಡಾ.ಸುಮೇಶ್ ರಾವ್, ಡಾ.ನೂತನ್ ಕಾಮತ್, ಡಾ.ಸುಚೇತಾ ರಾವ್, ಡಾ.ಪುಂಡಲೀಕ ಬಾಳಿಗಾ, ಡಾ.ಶ್ರದ್ಧಾ ಪೂಜಾರಿ, ಡಾ.ಜಗದೀಶ್, ಡಾ.ದಯಾನಂದ್, ಡಾ.ಸದಾನಂದ ಪೂಜಾರಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಸನ್ಮಾನಿಸಲ್ಪಟ್ಟ ಕೆ.ಎಂ.ಸಿ.ಡೀನ್ ಡಾ.ಬಿ.ಉನ್ನಿಕೃಷ್ಣನ್ ಮಾತನಾಡಿ, ಕೆ.ಎಂ.ಸಿ.ಯ ವೈದ್ಯರ ಸೇವೆಯನ್ನು ಗುರುತಿಸಿರುವುದಕ್ಕಾಗಿ ಲೇಡಿಗೋಷನ್ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ಲೇಡಿಗೋಷನ್ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಮಾತನಾಡಿ, ತಾಯಿ ಮಗುವಿನ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಕೆ.ಎಂ.ಸಿ. ವೈದ್ಯರ ಅಪರಿಮಿತ ಸೇವೆಯ ಋಣವನ್ನು ತೀರಿಸುವ ಅಪೂರ್ವ ಅವಕಾಶ ಇದಾಗಿದ್ದು, ತಾಯಿ ಮರಣವನ್ನು ಇತ್ತೀಚಿನ ಐದು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ತರುವಲ್ಲಿ ಇಂದು ಸನ್ಮಾನಿತಗೊಂಡ ಈ ಎಲ್ಲ ಹಿರಿಯ ವೈದ್ಯರು ಕಾರಣೀಕರ್ತರಾಗಿದ್ದು ಇಂತಹ ಮೌಲ್ಯಯುತವಾದ ಸೇವೆ ಅಜರಾಮರವಾಗಿರಲಿ ಎಂದರು.

ಲೇಡಿಗೋಷನ್ ಸಿಬ್ಬಂದಿಗಳು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾಪ್ರಸಾದ್ ಎಂ.ಆರ್. ಅವರನ್ನು ಸನ್ಮಾನಿಸಿದರು.

ಸೀಮಾ ಸ್ವಾಗತಿಸಿದರು. ಅಂಬಿಕಾ ಅವರು ಪ್ರಸ್ತಾವನೆಗೈದರು. ಜ್ಯೋತಿ ಪ್ರಭಾ ಹಾಗೂ ಜಯಲಕ್ಷ್ಮಿ ನಿರೂಪಿಸಿದರು. ಲವಿನಾ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಕ್ಕಿ-ಪಿಕ್ಕಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರಮ
ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ