ಕೆರೆ ತುಂಬಿಸುವ ಯೋಜನೆ ರೈತರಿಗೆ ಆಶಾಕಿರಣ: ಸಚಿವ ಆರ್.ಬಿ. ತಿಮ್ಮಾಪೂರ

KannadaprabhaNewsNetwork | Published : Feb 19, 2025 12:47 AM

ಸಾರಾಂಶ

ಕೆರೆಗೆ ನೀರು ತುಂಬಿಸುವ ಯೋಜನೆ ಈ ಭಾಗದ ರೈತರು ಹಾಗೂ ನಾಗರಿಕರಿಗೆ ಹೊಸ ಭರವಸೆ ಮೂಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಕೆರೆಗೆ ನೀರು ತುಂಬಿಸುವ ಯೋಜನೆ ಈ ಭಾಗದ ರೈತರು ಹಾಗೂ ನಾಗರಿಕರಿಗೆ ಹೊಸ ಭರವಸೆ ಮೂಡಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಸೋಮವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅನುದಾನ ಅಡಿಯಲ್ಲಿ ಘಟಪ್ರಭಾ ನದಿಯಿಂದ ಏತ ನೀರಾವರಿ ಮೂಲಕ ಪೆಟ್ಲೂರ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂದಾಜು ₹೪.೮೫ ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆಗೆ ಟೆಂಡರ್‌ ಆಗಿದೆ. ೬ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಪೆಟ್ಲೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ನಿರ್ಮಾಣಕ್ಕೆ ಒಂದು ಎಕರೆ ಭೂಮಿ ದಾನ ನೀಡಿದ ಗ್ರಾಮದ ಪಾಂಡುಗೌಡ ವೆಂಕನಗೌಡ ಪಾಟೀಲ ಅವರ ಕಾರ್ಯ ಶ್ಲಾಘನೀಯ ಎಂದರು.

ಸಚಿವರಿಗೆ ಅದ್ಧೂರಿ ಸ್ವಾಗತ: ಕಾಮಗಾರಿ ಚಾಲನೆಗೆ ಆಗಮಿಸಿದ ಸಚಿವರನ್ನು ಡೊಳ್ಳು ಬಾರಿಸುವ ಮುಖಾಂತರ ಗ್ರಾಮಸ್ಥರು ಸ್ವಾಗತಿಸಿಕೊಂಡರು. ನಂತರ ಸಚಿವರಿಗೆ ಮಹಿಳೆಯರು ಆರತಿ ಬೆಳಗಿದರು. ಇದೇ ವೇಳೆ ಭೂಮಿ ದಾನ ನೀಡಿದ ಪಾಂಡುಗೌಡ ವೆಂಕನಗೌಡ ಪಾಟೀಲ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸನ್ಮಾನಿಸಿದರು.

ತರಕಾರಿ ಖರೀದಿ ಮಾಡಿದ ಸಚಿವರು: ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಆಗಮಿಸಿದ ಸಚಿವ ಆರ್.ಬಿ. ತಿಮ್ಮಾಪೂರ ಅವರು, ಪೆಟ್ಲೂರ ಗ್ರಾಮದ ಸಂತೆಯಲ್ಲಿ ರೈತರಿಂದ ತರಕಾರಿ ಖರೀದಿಸಿದರು.

ಈ ವೇಳೆ ಗುತ್ತಿಗೆದಾರ ರಾಮಕೃಷ್ಣ ಬೆಳ್ಳಿ, ಮುಖಂಡರಾದ ಬಸಪ್ಪ ಹೊಂಗಲ, ಸದುಗೌಡ ಪಾಟೀಲ, ರಾಮಚಂದ್ರ ಜಂಬಗಿ, ಕರಿಯಪ್ಪ ಬಿದರಿ, ಅಶೋಕ ಕಿವಡಿ, ರವಿ ಬೆಳ್ಳಿ, ತಿಪ್ಪಣ್ಣ ಸೈಯ್ಯಪ್ಪಗೋಳ, ಕೃಷ್ಣಾ ಲಮಾಣಿ, ಕೇಶಪ್ಪ ಹಿಂದಿನಮನಿ, ಸದಪ್ಪ ಬಿಲ್ಲಾರ, ಲಚ್ಚಪ್ಪ ಪಡಸಲ, ಕೃಷ್ಣಗೌಡ ಪಾಟೀಲ, ಯಲ್ಲಪ್ಪ ಶಿರಗುಂಪಿ, ಕೃಷ್ಣಾ ಮುಧೋಳ, ಆನಂದ ತಿಮ್ಮಾಪೂರ, ಕರಿಯಪ್ಪ ಅಂಗಡಿ, ಮಹಾದೇವ ಹೊಸಟ್ಟಿ, ದಶರಥ ರಜಪೂತ, ಮುಖ್ಯ ಶಿಕ್ಷಕ ಎಸ್.ಎಂ. ನಾವಲಗಿ, ಶಿಕ್ಷಕ ರವಿಂದ್ರ ಬಸಿಡೋಣಿ, ವಿವಿಧ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರು, ಯುವಕರು, ಮಹಿಳೆಯರು, ಗ್ರಾಮಸ್ಥರು ಇದ್ದರು.

Share this article