ಕುಂದಗೋಳ: ತಾಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಕಂಬನಿಹಳ್ಳ ತುಂಬಿ ಹರಿದು ಕೆರೆಗೆ ನೀರು ನುಗ್ಗಿದೆ. ಕೆರೆ ಕೋಡಿ ಬಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಸ್ಥಳಕ್ಕೆ ಸೋಮವಾರ ಶಾಸಕ ಎಂ.ಆರ್. ಪಾಟೀಲ ಭೇಟಿ ನೀಡಿ ಹಾನಿಯಾದ ಪ್ರದೇಶ ವೀಕ್ಷಿಸಿದರು. ಈ ವೇಳೆ ಅಧಿಕಾರಿಗಳಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು, ಗ್ರಾಮದ ಕೆರೆ ಕೋಡಿ ಒಡೆದಿರುವ ಬಗ್ಗೆ ತುರ್ತು ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಮಂಜುನಾಥ ಬೂದಪ್ಪನವರ, ಉಪಾಧ್ಯಕ್ಷ ರತ್ನವ್ವ ಪಡೆಸೂರ, ಮಾಲತೇಶ ಶ್ಯಾಗೋಟಿ, ನಾಗನಗೌಡ ಸಾತ್ಮಾರ, ಬಸವರಾಜ ಗುಡಗೇರಿ, ರಾಮಣ್ಣ ಇಂಗಳಹಳ್ಳಿ, ಅಡವಯ್ಯ ಕೂಬಿಹಾಳಮಠ, ಶೇಖಪ್ಪ ಅಮರಾವತಿ, ಪಿಡಿಒ ಬಸವರಾಜ ಭಾಗಲ್, ಗ್ರಾಮ ಲೆಕ್ಕಾಧಿಕಾರಿ, ಜಗದೀಶ ನಾಯಕ್ ಹಾಗೂ ಗ್ರಾಪಂ ಸದಸ್ಯರು, ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಇದ್ದರು.