ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕುಡಿಯುವ ನೀರು, ಬೀದಿ ದೀಪ, ಕೈ ಪಂಪ್ ರಿಪೇರಿ, ತೊಂಬೆಗಳ ರಿಪೇರಿ, ಸ್ವಚ್ಛತೆಗಾಗಿ ಬಳಸಿದ ೨೪ ಲಕ್ಷಕ್ಕೂ ಹೆಚ್ಚು ಹಣದಲ್ಲಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ದೂರು ನೀಡಿದ ಅನ್ವಯ ಪಂಚಾಯತ್ ರಾಜ್‌ನ ಸಹಾಯಕ ಲೆಕ್ಕಾಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಪಂಗೆ ಭೇಟಿ ನೀಡಿ ಪರಿಶೀಲಿಸಿದಾಗ ಸುಮಾರು ೧೮ ಬಿಲ್ಲುಗಳ ಯಾವುದೇ ವೋಚರ್‌ಗಳನ್ನು ಪರಿಶೀಲನಾ ವೇಳೆಯಲ್ಲಿ ಹಾಜರುಪಡಿಸಿಲ್ಲ ಎಂದರು.ಗ್ರಾಪಂ ಅಧ್ಯಕ್ಷರು ಸಹ ನನ್ನ ಗಮನಕ್ಕೆ ಬಾರದೇ ಹಣ ಪಾವತಿಯಾಗಿದೆ ಎಂದು ದೂರು ಅರ್ಜಿಯಲ್ಲಿ ತಿಳಿಸಿದ್ದಾರೆ, ಪ್ರಕಟಣೆ, ದರಪಟ್ಟಿ, ತುಲನಾತ್ಮಕ ಸಜಬರಾಜು ಕಡತದಲ್ಲಿದ್ದರೂ ಸಹ ಕ್ರಮಬದ್ದವಾಗಿ ನಿರ್ವಹಣೆ ಮಾಡಿಲ್ಲ ಎಂದು ಆರೋಪಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿದ ತಂಡ ತನಿಖಾ ಸಮಯದಲ್ಲಿ ಒದಗಿಸಿದ ದಾಖಲೆಗಳ ಆಧಾರದ ಮೇಲೆ ವರದಿ ತಯಾರಿಸಿ ಮುಂದಿನ ಕ್ರಮಕ್ಕಾಗಿ ಸಲ್ಲಿಸಿದೆ ಎಂದರು.
ಗ್ರಾಮ ಸಭೆಗಳನ್ನು ನಡೆಸದೇ ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ, ತಕ್ಷಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಬಿ.ಕೆ. ಶ್ರೀನಿವಾಸ್ ಮೇಲೆ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯರಾದ ಎಂ.ರಾಮು, ಲಿಂಗರಾಜು ಇದ್ದರು.