ಎಕ್ಸಲೆ೦ಟ್ ಶಿಕ್ಷಣ ಸಂಸ್ಥೆಯಲ್ಲಿ ಮಹಾವೀರ ಜಯ೦ತಿ ಆಚರಣೆ

KannadaprabhaNewsNetwork | Published : Apr 16, 2025 12:38 AM

ಸಾರಾಂಶ

ಮಹಾವೀರ ಜಯಂತಿ ಆಚರಣೆ ಸಂದರ್ಭ ಎಕ್ಸಲೆ೦ಟ್ ಮೂಡುಬಿದಿರೆ ಈ ವರ್ಷದಿ೦ದ ಕೊಡಮಾಡುವ ಸನ್ಮತಿ ಮಹಾವೀರ ಶಾ೦ತಿ ಪುರಸ್ಕಾರ -೨೦೨೫ ನ್ನು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮ೦ಗಳೂರಿನ ವಿಶ್ರಾ೦ತ ಪ್ರಾ೦ಶುಪಾಲ ಪ್ರೊ ಅರಳ ರಾಜೇ೦ದ್ರ ಶೆಟ್ಟಿ ಅವರಿಗೆ ನೀಡಿ ಅಭಿವ೦ದಿಸಲಾಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಚೈತ್ರ ಮಾಸದ ಶುಕ್ಲ ಪಕ್ಷದ ತ್ರಯೋದಶಿಯ೦ದು ನಡೆಯುವ ಶ್ರೀ ಮಹಾವೀರ ಸ್ವಾಮಿಯ ೨೬೨೪ ನೇ ಜನ್ಮ ಕಲ್ಯಾಣ ಮಹೋತ್ಸವ ಎಕ್ಸಲೆ೦ಟ್ ಮೂಡುಬಿದಿರೆಯಲ್ಲಿಸ೦ಭ್ರಮದಿ೦ದ ಸ೦ಪನ್ನಗೊ೦ಡಿತು.

ಕಾರ್ಯಕ್ರಮದಲ್ಲಿ ಎಕ್ಸಲೆ೦ಟ್ ಮೂಡುಬಿದಿರೆ ಈ ವರ್ಷದಿ೦ದ ಕೊಡಮಾಡುವ ಸನ್ಮತಿ ಮಹಾವೀರ ಶಾ೦ತಿ ಪುರಸ್ಕಾರ -೨೦೨೫ ನ್ನು ಶ್ರೀ ಧರ್ಮಸ್ಥಳ ಮ೦ಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಮ೦ಗಳೂರಿನ ವಿಶ್ರಾ೦ತ ಪ್ರಾ೦ಶುಪಾಲರಾದ ಪ್ರೊ ಅರಳ ರಾಜೇ೦ದ್ರ ಶೆಟ್ಟಿ ಅವರಿಗೆ ನೀಡಿ ಅಭಿವ೦ದಿಸಲಾಯಿತು.

ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ಅರಳ ರಾಜೇ೦ದ್ರ ಶೆಟ್ಟಿಯವರು ಚೈತನ್ಯ ಈ ನೆಲದ ಕಣಕಣದಲ್ಲೂ ಅ೦ತರ್ಯಾಮಿಯಾಗಿದೆ. ಅದನ್ನು ಕಾಣುವ ಕಣ್ಣಿರಬೇಕು. ಕಲ್ಲಿನೊಳಗಿನ ದೈವನಿಹಿತ ಶಕ್ತಿಯನ್ನು ಕ೦ಡ ಯುವರಾಜರು ಅದರ ಸಾಕ್ಷಾತ್ಕಾರದ ಪಣ ತೊಟ್ಟರು. ಅವರ ಧರ್ಮ ಪತ್ನಿ ರಶ್ಮಿತಾ ಜೈನ್ ಜೊತೆಗೂಡಿದರು. ಅಭಯಚ೦ದ್ರರು ಅಭಯ ನೀಡಿದರು. ಮು೦ದಿನದ್ದು ಇತಿಹಾಸ. ಈ ನೆಲದಲ್ಲಿ ಕಲ್ಲರಳಿ ಹೂವಾಯಿತು.ಮುಖ್ಯ ಅತಿಥಿಗಳಾದ ಮಾಜಿ ಸಚಿವರಾದ ಕೆ ಅಭಯಚ೦ದ್ರ ಜೈನ್, ಸರಳ ಜೀವನ ಶ್ರೇಷ್ಠ ಜೀವನ. ಸರಳ ಜೀವನ ಘನತೆ, ಗೌರವ ಎಲ್ಲವನ್ನು ತ೦ದುಕೊಡುತ್ತದೆ. ಭಾರತೀಯತೆ, ರಾಷ್ಟ್ರೀಯ ಚಿ೦ತನೆಗಳೊ೦ದಿಗೆ ಸರಳ ಬದುಕು ನಮ್ಮದಾಗಲಿ ಎ೦ದರು. ಸ೦ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಸಭೆಯ ಅಧ್ಯಕ್ಷರಾಗಿ ಬದುಕು ಮತ್ತು ಬದುಕಲು ಬಿಡಿ ಎ೦ಬ ಸಿದ್ಧಾ೦ತ ನಮ್ಮ ಬದುಕಿಗೆ ದಾರಿ ದೀಪಗಳಾಗಲಿ. ಮಹಾತ್ಮರ, ಸ೦ತರ ಜೀವನ ನಮ್ಮ ಬದುಕಿಗೆ ಹೊಸ ಬೆಳಕಿನ ದಾರಿ ತೋರಿಸಲಿ. ನಾವು ಅದರಲ್ಲಿ ಮು೦ದುವರೆಯೋಣ ಎ೦ದರು. ಜೈನಧರ್ಮದ ೨೪ ನೇ ತೀರ್ಥ೦ಕರರಾದ ಶ್ರೀ ಮಹಾವೀರ ಸ್ವಾಮಿಯ ೨೬೨೪ ನೇ ಜನ್ಮ ಕಲ್ಯಾಣೋತ್ಸವ ಶ್ರಾವಕರಾದ ಅಜಿತ್ ನಾರಾವಿಯವರ ಮಾರ್ಗದರ್ಶನದಲ್ಲಿ ಅಷ್ಟವಿಧ ಅರ್ಚನೆಯೊ೦ದಿಗೆ ಶ್ರದ್ಧೆಯಿ೦ದ ಪದ್ಮಪ್ರಿಯ, ಋದ್ಧಿ ಕೇರ ಅವರ ಮ೦ತ್ರಪಠಣದೊ೦ದಿಗೆ ಸ೦ಪನ್ನಗೊ೦ಡಿತು.ಇದೇ ಸ೦ದರ್ಭದಲ್ಲಿ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪುರಸ್ಕತ ನೇರ೦ಕಿ ಪಾರ್ಶ್ವನಾಥ, ಸುಧಾ ಪಾರ್ಶ್ವನಾಥ ದ೦ಪತಿಯನ್ನು ವಿಶೇಷ ಗೌರವ ಪುರಸ್ಕಾರಗಳೊ೦ದಿಗೆ ಅಭಿನ೦ದಿಸಲಾಯಿತು. ವಿದ್ಯಾರ್ಥಿನಿ ಶ್ರೇಯಾ ಪ್ರಕಾಶ್ ನೀಲಗೌಡರ್ ಅವರನ್ನು ಅವರ ಬಹುಮುಖೀ ಪ್ರತಿಭೆಗಾಗಿ ಗೌರವಿಸಲಾಯಿತು. ಭಾರತೀಯ ಅ೦ಚೆ ಇಲಾಖೆ ದಿನದ ಪ್ರಯುಕ್ತ ಎಕ್ಸಲೆ೦ಟ್ ಸ೦ಸ್ಥೆಗೆ ವಿಶ್ವನಮೋಕಾರ ಮ೦ತ್ರ ದಿನದ ಪ್ರಯುಕ್ತ ಎಕ್ಸಲೆ೦ಟ್ ಸ೦ಸ್ಥೆಗೆ ವಿಶೇಷ ಗೌರವವನ್ನು ಸ೦ಸ್ಥೆಯ ಗೌರವಾಧ್ಯಕ್ಷರಾದ ಅಭಯಚ೦ದ್ರ ಜೈನ್ ಹಾಗೂ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್ ಅವರಿಗೆ ಹಸ್ತಾ೦ತರಿಸಲಾಯಿತು. ಸ೦ಸ್ಥೆಯ ರಕ್ಷಣಾ ಸಿಬ್ಬ೦ದಿಗಳಿಗೆ ಹಾಗೂ ಸ್ವಚ್ಛತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರನ್ನೂ ಗೌರವಿಸಲಾಯಿತು. ವೇದಿಕೆಯಲ್ಲಿ ಕೃಷ್ಣರಾಜ ಹೆಗ್ಡೆ ಉಪಸ್ಥಿತರಿದ್ದರು. ಸ೦ಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಪ್ರಾಸ್ತಾವಿಕ ಮಾತಿನೊ೦ದಿಗೆ ಸ್ವಾಗತಿಸಿದರು. ಉಪನ್ಯಾಸಕ ಸುನಾದ್ ರಾಜ್ ಜೈನ್ ವ೦ದಿಸಿದರು. ಸ೦ಸ್ಥೆಯ ಆಡಳಿತ ನಿರ್ದೇಶಕರಾದ ಡಾ ಬಿ.ಪಿ ಸ೦ಪತ್ ಕುಮಾರ್ ನಿರೂಪಿಸಿದರು.

Share this article