ದೀಪಾವಳಿ ಹಬ್ಬದ ಪ್ರಯುಕ್ತ ನಾವು ಪ್ರತಿ ವರ್ಷವೂ ಲಕ್ಕೆ ಪೂಜೆ ಹಾಗೂ ಭೂಮಿಪೂಜೆ ನೆರವೇರಿಸುತ್ತೇವೆ. ಅದರೊಂದಿಗೆ ದನದ ಕೊಟ್ಟಿಗೆ ಹಾಗೂ ತಿಪ್ಪೆ ಗುಂಡಿಗಳಿಗೆ ಪೂಜೆ ಸಲ್ಲಿಸುವುದು ನಮ್ಮ ಸಂಪ್ರದಾಯವಾಗಿದೆ ಎಂದು ಹೇಳಿದರು. ಈ ರೀತಿಯ ಆಚರಣೆಗಳು ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕಗಳು. ಇವು ಕೆಲವು ಗ್ರಾಮೀಣ ಭಾಗಗಳಲ್ಲಿ ಮಾತ್ರ ಇಂದಿಗೂ ಉಳಿದಿವೆ. ನಗರ ಪ್ರದೇಶಗಳಲ್ಲಿ ಇಂತಹ ಸಂಪ್ರದಾಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಆದರೂ ನಾವು ಗುಣಿಕೇರಿ ಬೀದಿಯವರು ಈ ಸಂಪ್ರದಾಯವನ್ನು ಜೀವಂತವಾಗಿ ಉಳಿಸಿಕೊಂಡು ಪ್ರತಿ ವರ್ಷವೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಗುಣಿಕೇರಿ ಬೀದಿಯ ನಿವಾಸಿಗಳು ಈ ಬಾರಿ ದೀಪಾವಳಿ ಹಬ್ಬವನ್ನು ಸಾಂಪ್ರದಾಯಿಕ ರೀತಿಯಲ್ಲಿ ಭಕ್ತಿ, ಸಂಭ್ರಮದಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿ ಹರೀಶ್ ಮಾತನಾಡಿ, ದೀಪಾವಳಿ ಹಬ್ಬದ ಪ್ರಯುಕ್ತ ನಾವು ಪ್ರತಿ ವರ್ಷವೂ ಲಕ್ಕೆ ಪೂಜೆ ಹಾಗೂ ಭೂಮಿಪೂಜೆ ನೆರವೇರಿಸುತ್ತೇವೆ. ಅದರೊಂದಿಗೆ ದನದ ಕೊಟ್ಟಿಗೆ ಹಾಗೂ ತಿಪ್ಪೆ ಗುಂಡಿಗಳಿಗೆ ಪೂಜೆ ಸಲ್ಲಿಸುವುದು ನಮ್ಮ ಸಂಪ್ರದಾಯವಾಗಿದೆ ಎಂದು ಹೇಳಿದರು. ಈ ರೀತಿಯ ಆಚರಣೆಗಳು ನಮ್ಮ ಪುರಾತನ ಸಂಸ್ಕೃತಿಯ ಪ್ರತೀಕಗಳು. ಇವು ಕೆಲವು ಗ್ರಾಮೀಣ ಭಾಗಗಳಲ್ಲಿ ಮಾತ್ರ ಇಂದಿಗೂ ಉಳಿದಿವೆ. ನಗರ ಪ್ರದೇಶಗಳಲ್ಲಿ ಇಂತಹ ಸಂಪ್ರದಾಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಆದರೂ ನಾವು ಗುಣಿಕೇರಿ ಬೀದಿಯವರು ಈ ಸಂಪ್ರದಾಯವನ್ನು ಜೀವಂತವಾಗಿ ಉಳಿಸಿಕೊಂಡು ಪ್ರತಿ ವರ್ಷವೂ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು. ಗುಣಿಕೇರಿ ಬೀದಿಯ ಪ್ರತಿ ಮನೆಮುಂದೆ ರಂಗೋಲಿ ಬಿಡಿಸಿ, ತೈಲದೀಪ ಬೆಳಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು. ಎಲ್ಲೆಡೆ ಲಕ್ಯೋ ಲಕ್ಯೋ ಎಂಬ ಹರ್ಷೋದ್ಗಾರ ಮತ್ತು ಭಕ್ತಿಯ ವಾತಾವರಣ ಸೃಷ್ಟಿಯಾಗಿತ್ತು.
ಈ ಸಂದರ್ಭದಲ್ಲಿ ಗಿರೀಶ್ ಲೊಕೇಶ್, ಪದ್ಮ, ರಾಕೇಶ್, ರಾಜಣ್ಣ ,ವಸಂತ್, ಕುಮಾರ್ , ಸಿದ್ದೇಶ್, ಹಾಜರಿದ್ದರು. .
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.