ರಾಮನಗರ: ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮಂಗಳವಾರ ಸಂಜೆ 30ನೇ ವರ್ಷದ ಲಕ್ಷದೀಪೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವೋಪೇತವಾಗಿ ನೆರವೇರಿತು.
ಹುಲಿಕೆರೆ-ಗುನ್ನೂರು ಗ್ರಾ.ಪಂ. ವತಿಯಿಂದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಸ್ಥಳದಲ್ಲಿ ಅಗ್ನಿಶಾಮಕದಳ ಮತ್ತು ತುರ್ತು ಆರೋಗ್ಯ ಸೇವೆಗೆ ವ್ಯವಸ್ಥೆ ಮಾಡಲಾಗಿತ್ತು. ಬೆಟ್ಟದ ರಥದ ಬೀದಿ, ಪ್ರಮುಖ ದೇವಾಲಯಗಳು, ವಿಶೇಷ ವಿದ್ಯುತ್ ದೀಪಾಲಂಕಾರಗಳಿಂದ ಅಲಂಕಾರಗೊಂಡು ಬೆಟ್ಟದ ಸೌಂದರ್ಯಕ್ಕೆ ಮತ್ತಷ್ಟು ಮೆರಗು ತಂದಿತ್ತು.
ಭಕ್ತರಿಗೆ ಅನ್ನದಾಸೋಹ: ರೇವಣಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ದಾಸೋಹ ಭವನದಲ್ಲಿ ಮತ್ತು ದಾಸೋಹ ಮಠದ ಬಸವಲಿಂಗರಾಜ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.ದಾಸೋಹ ಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಉಪವಿಭಾಗಾಧಿಕಾರಿ ಬಿನೋಯ್, ತಹಸೀಲ್ದಾರ್ ಬಿ. ತೇಜಸ್ವಿನಿ, ಇಒ ಪ್ರದೀಪ್, ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಜಯಣ್ಣ, ಮುಜರಾಯಿ ತಹಸೀಲ್ದಾರ್ ಖಾನ್, ದೇವಾಲಯದ ಆಡಳಿತಾಧಿಕಾರಿ ಎಸ್.ಜೆ ಯೇಸುರಾಜ್, ಮಾಜಿ ಶಾಸಕ ಕೆ.ರಾಜು, ಗ್ರಾಪಂ ಅಧ್ಯಕ್ಷ ನಾಗೇಶ್, ಮುಖಂಡರಾದ ಶಿವಲಿಂಗಯ್ಯ, ತಮ್ಮಣ್ಣ, ಮಹದೇವಯ್ಯ, ಲಿಂಗರಾಜು, ಎ.ಸಿ.ಕೆಂಪಯ್ಯ, ರೇಣುಕಾ ಪ್ರಸಾದ್ , ಪುಟ್ಟಸಿದ್ದಯ್ಯ, ಗಂಗಾಧರ್ ಪಿಡಿಒ ಶಶಿರೇಖಾ, ಪಾರುಪತ್ತೇದಾರ್ ಸೋಮಶೇಖರ್ ಇತರರಿದ್ದರು.12ಕೆಆರ್ ಎಂಎನ್ 12.ಜೆಪಿಜಿ
ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಮಂಗಳವಾರ 30ನೇ ಲಕ್ಷ ದೀಪೋತ್ಸವವನ್ನು ಅತಿಥಿಗಳು ಉದ್ಘಾಟಿಸಿದರು.