ಶ್ರೀರಂಗಪಟ್ಟಣ ದಸರಾ: ಅಡ್ಡಾದಿಡ್ಡಿ ಓಡಾಡಿ ಕೆಲಕಾಲ ಆತಂಕ ಸೃಷ್ಟಿಸಿದ ಅಂಬಾರಿ ಮೆರವಣಿಗೆಗೆ ಆಗಮಿಸಿದ್ದ ಲಕ್ಷ್ಮೀ ಆನೆ

KannadaprabhaNewsNetwork |  
Published : Oct 05, 2024, 01:44 AM ISTUpdated : Oct 05, 2024, 01:08 PM IST
4ಕೆಎಂಎನ್ ಡಿ11,12,13 | Kannada Prabha

ಸಾರಾಂಶ

ಅಂಬಾರಿ ಮೆರವಣಿಗೆಗೆ ಆಗಮಿಸಿದ್ದ ಲಕ್ಷ್ಮೀ ಎಂಬ ಆನೆ ಶುಕ್ರವಾರ ಮಧ್ಯಾಹ್ನ ಚಿತ್ರಾಲಂಕಾರದ ಬಳಿಕ ಬೆದರಿ ಅಡ್ಡಾದಿಡ್ಡಿ ಓಡಾಡಿ ಕೆಲಕಾಲ ಆತಂಕ ಸೃಷ್ಟಿಸಿದ ಪರಿಣಾಮ ದಸರಾ ಮಹೋತ್ಸವಕ್ಕೆ ಆರಂಭದಲ್ಲೆ ವಿಘ್ನ ಎದುರಾದಂತಾಯಿತು.

ಶ್ರೀರಂಗಪಟ್ಟಣ: ಅಂಬಾರಿ ಮೆರವಣಿಗೆಗೆ ಆಗಮಿಸಿದ್ದ ಲಕ್ಷ್ಮೀ ಎಂಬ ಆನೆ ಶುಕ್ರವಾರ ಮಧ್ಯಾಹ್ನ ಚಿತ್ರಾಲಂಕಾರದ ಬಳಿಕ ಬೆದರಿ ಅಡ್ಡಾದಿಡ್ಡಿ ಓಡಾಡಿ ಕೆಲಕಾಲ ಆತಂಕ ಸೃಷ್ಟಿಸಿದ ಪರಿಣಾಮ ದಸರಾ ಮಹೋತ್ಸವಕ್ಕೆ ಆರಂಭದಲ್ಲೆ ವಿಘ್ನ ಎದುರಾದಂತಾಯಿತು.

ಮಹೇಂದ್ರ (ಅಂಬಾರಿ ಹೊರಲಿರುವ ಆನೆ) ಹಿರಣ್ಯ ಹಾಗೂ ಲಕ್ಷ್ಮೀ ಗಜಪಡೆಗಳು ಗುರುವಾರ ಸಂಜೆ ಪಟ್ಟಣಕ್ಕೆ ಆಗಮಿಸಿದ್ದವು. ಇತರೆ ಆನೆಗಳೊಂದಿಗೆ ಹಿರಣ್ಯ ಆನೆಯನ್ನು ಶ್ರೀರಂಗನಾಥಸ್ವಾಮಿ ದೇಗುಲದ ಬಳಿ ಪೂಜೆಗೆ ಕರೆದೊಯ್ಯತ್ತಿದ್ದ ವೇಳೆ ಇಲ್ಲಿನ ಬಿಳಿ ಕುದುರೆಯನ್ನು ನೋಡಿ ಹಿರಣ್ಯ ಆನೆ ಬೆಚ್ಚಿ ಅಡ್ಡಾದಿಡ್ಡಿ ಓಡಾಡಿತ್ತು. ನಂತರ ಮಾವುತ ಆನೆಯನ್ನು ಸಮಾಧಾನಪಡಿಸಿದ್ದರು.

ಶುಕ್ರವಾರ ಮಧ್ಯಾಹ್ನವೂ ದಸರಾ ಉತ್ಸವ ಹಿನ್ನೆಲೆಯಲ್ಲಿ ಬನ್ನಿಮಂಟಪಕ್ಕೆ ಕರೆದೊಯ್ಯುವ ವೇಳೆ ಶ್ರೀರಂಗನಾಥ ದೇವಸ್ಥಾನದ ಮುಂಭಾಗ ಲಕ್ಷ್ಮೀ ಆನೆ ಬೆಚ್ಚಿ ರಸ್ತೆಯಲ್ಲೇ ಅಡ್ಡಾದಿಡ್ಡಿ ಓಡಾಡಿದೆ. ಆನೆ ರಂಪಾಟಕ್ಕೆ ಸ್ಥಳದಲ್ಲಿದ್ದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

ಈ ವೇಳೆ ಮಾವುತರು, ಕಾವಾಡಿಗರ ಸಮಯ ಪ್ರಜ್ಞೆಯಿಂದ ಆನೆ ರಂಪಾಟವನ್ನು ಶಾಂತಗೊಳಿಸಿ ಕಾಲಿಗೆ ಕಬ್ಬಿಣದ ಸರಪಳಿ ಹಾಕಿದರು. ಅಂಬಾರಿ ಮೆರವಣಿಗೆಯು ಸುಗಮವಾಗಿ ಸಾಗಲಿ ಎಂದು ಶ್ರೀರಂಗನಾಥಸ್ವಾಮಿ ಬಳಿ ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ